ಇನ್ನು ಮುಂದೆ ಧರ್ಮಸ್ಥಳದಲ್ಲಿ ದೇವರ ದರ್ಶನ ಸುಲಭ!
– ನೂತನ ”ಶ್ರೀಸಾನಿಧ್ಯ ಕ್ಯೂ ಕಾಂಪ್ಲೆಕ್ಸ್’ ಉದ್ಘಾಟನೆ
– ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರಿಂದ ಲೋಕಾರ್ಪಣೆ
– ಏನಿದು ‘ಶ್ರೀಸಾನಿಧ್ಯ’ ಕ್ಯೂ ಕಾಂಪ್ಲೆಕ್ಸ್?
NAMMUR EXPRESS NEWS
ಧರ್ಮಸ್ಥಳ: ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ದೇಶದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಜ. 7 ರಂದು ಭೇಟಿ ನೀಡಲಿದ್ದಾರೆ.
ಶ್ರೀಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ‘ಶ್ರೀಸಾನಿಧ್ಯ’ ಅತ್ಯಾಧುನಿಕ ಸರತಿ ಸಾಲು ವ್ಯವಸ್ಥೆಯ ಕಟ್ಟಡವನ್ನು ಭಕ್ತರ ಅನುಕೂಲಕ್ಕಾಗಿ ಲೋಕಾರ್ಪಣೆ ಮಾಡಲಿದ್ದಾರೆ.
ದೇವರ ದರ್ಶನಕ್ಕಾಗಿ ಕಾಯುವ ಸಮಯ ಮತ್ತು ವಿಧಾನವನ್ನು ಸರಳೀಕರಿಸಬೇಕು ಅನ್ನುವ ಯೋಚನೆಯಿಂದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೊಸ ಮಾದರಿಯ ಅತ್ಯಾಧುನಿಕ ಸೌಲಭ್ಯಗಳುಳ್ಳ ನೂತನ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸುವ ಯೋಜನೆ ರೂಪಿಸಿದರು. ಇದು ಡಿ 7ರಂದು ಸಾಕಾರಗೊಂಡಿದ್ದು ಲೋಕಾರ್ಪಣೆಗೊಳ್ಳಲಿದೆ.
* ಏನಿದು ‘ಶ್ರೀಸಾನಿಧ್ಯ’ ಕ್ಯೂ ಕಾಂಪ್ಲೆಕ್ಸ್?
ಶ್ರೀಮಂಜುನಾಥ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ಅಡಚಣೆಯಿಲ್ಲದೆ ದೇವರ ದರ್ಶನ ಸಾಧ್ಯವಾಗಬೇಕು ಅನ್ನುವ ಹಿನ್ನೆಲೆಯಲ್ಲಿ ಕ್ಯೂ ಕಾಂಪ್ಲೆಕ್ಸ್ ವ್ಯವಸ್ಥೆಯನ್ನು ದಶಕಗಳ ಹಿಂದೆಯೇ ಕಾಂಪ್ಲೆಕ್ಸ್-ನಲ್ಲಿ ಹೆಚ್ಚು ಹೊತ್ತು ಕಾಯಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಹೀಗೆ ಕಾಯುವ ಭಕ್ತಾದಿಗಳಿಗೆ ನೀರು, ಪಾನೀಯ, ಆಹಾರದ ವ್ಯವಸ್ಥೆಯನ್ನು ಕ್ಷೀತ್ರದ ವತಿಯಿಂದ ಯೋಜನೆಯನ್ನು ರೂಪಿಸಿದ್ದಾರೆ.