ಕರಾವಳಿ ಪ್ರಮುಖ ಸುದ್ದಿಗಳು
ಮಣಿಪಾಲ ಬಳಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ!
– ಮೂವರು ವಶ: ಪ್ರಕರಣ ದಾಖಲು
ಭಜರಂಗ ದಳದ ಮೂವರಿಗೆ ಗಡಿಪಾರು ನೋಟಿಸ್
– ಕರಾವಳಿಯಲ್ಲಿ ಸಿಡಿದೆದ್ದ ಹಿಂದೂ ಸಂಘಟನೆಗಳು!
NAMMUR EXPRESS NEWS
ಮಣಿಪಾಲ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿ ಮೂವರನ್ನು ವಶಕ್ಕೆ ಪಡೆದ ಘಟನೆ ಮಣಿಪಾಲ ಸಮೀಪದ ಹೆರ್ಗ ಗ್ರಾಮದ ಲಾಡ್ಜ್ವೊಂದರಲ್ಲಿ ನಡೆದಿದೆ. ಪೊಲೀಸರು ವೇಶ್ಯಾವಾಟಿಕೆ ದಂಧೆಯನ್ನು ಭೇದಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಡ್ಜ್ ಮೇಲೆ ದಾಳಿ ನಡೆಸಿ ಬಂಧಿತ ಆರೋಪಿಗಳ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಲಾಡ್ಜ್ನ ಮ್ಯಾನೇಜರ್ ಸಂಪತ್ ಕುಮಾರ್ ಮತ್ತು ರೂಮ್ ಬಾಯ್ ದಿನೇಶ್ ಲಾಡ್ಜ್ನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಆರೋಪ ಹೊತ್ತಿದ್ದಾರೆ. ಎರಡು ಪ್ರತ್ಯೇಕ ಕೊಠಡಿಗಳಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಪುರುಷನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಂಬಂಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರಲ್ಲಿ ನೈತಿಕ ಪೊಲೀಸ್ಗಿರಿ ನಡೆಸಿದ್ದ ಭಜರಂಗದಳದ ಮೂವರು ಕಾರ್ಯಕರ್ತರನ್ನು ಗಡಿಪಾರು ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಸುಲ್ತಾನ್ ಜ್ಯುವೆಲ್ಲರಿಯ ಕಾರ್ಯಕ್ರಮ ಹಾಗೂ ಮರೋಳಿ ಹೋಳಿ ಆಚರಣೆ ವೇಳೆ ಭಜರಂಗದಳದ ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಕಾಶ್ ಶಕ್ತಿನಗರ ಎನ್ನುವವರು ನೈತಿಕ ಪೊಲೀಸ್ಗಿರಿ ಪ್ರದರ್ಶಿಸಿದ್ದು ಈ ಬೆನ್ನಲ್ಲೇ ಪದೇ ಪದೇ ಕಾನೂನುಭಂಗ ಮಾಡ್ತಿರೋ ನಿಮ್ಮನ್ನು ಏಕೆ ಗಡಿಪಾರು ಮಾಡಬಾರದು, ಉತ್ತರಿಸಿ ಎಂದು ನೊಟೀಸ್ ಜಾರಿ ಮಾಡಿದೆ.
ಮಂಗಳೂರು ಪೊಲೀಸ್ ಆಯುಕ್ತರು ಮಾತ್ರ ತಮ್ಮ ಕ್ರಮವನ್ನು ಸಮರ್ಥಿಸಿದ್ದಾರೆ.ಅವರು ನಮಗೆ ಆರೋಪಿಗಳಷ್ಟೇ ಅವರು ಯಾವ ಸಂಘಟನೆ ಅನ್ನೋದು ನಮಗೆ ಬೇಡ ಎಂದು ತಿಳಿಸಿದ್ದಾರೆ. ಗಡಿಪಾರು ನೊಟೀಸ್ಗೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗೋಹತ್ಯೆ ವಿರುದ್ಧ ಕಾನೂನು ಇದೆ, ಅಕ್ರಮ ಗೋಹತ್ಯೆ ಮಾಡೋದನ್ನು ನೋಡಿ ಸುಮ್ಮನಿರಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಈವರೆಗೆ ಪೊಲೀಸರಿಗೆ ತಿಳಿಸಿಯೇ ದಾಳಿ ಮಾಡುತ್ತಿದ್ದೆವು. ಇನ್ನು ಪೊಲೀಸರಿಗೆ ತಿಳಿಸದೆ ದಾಳಿ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ.
ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಬಜರಂಗದಳ ಕಾರ್ಯಕರ್ತರ ಗಡಿಪಾರಿಗೆ ನೋಟಿಸ್ ನೀಡಲು ಅವರೇನು ಕೊಲೆ ಮಾಡಿದ್ದಾರಾ, ರೇಪ್ ಮಾಡಿದ್ದಾರಾ, ಉಗ್ರಗಾಮಿಗಳ ತರ ಬಾಂಬ್ಗಳನ್ನು ತಯಾರು ಮಾಡ್ತಾರಾ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಭಜರಂಗದಳದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಹೆದರಿಸೋ ಕೆಲಸ ಮಾಡ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಎಷ್ಟು ಜನರನ್ನ ಸರ್ಕಾರ ಗಡಿಪಾರು ಮಾಡುತ್ತೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023