– ಸೆ.15 ರ ವರೆಗೆ ಪ್ರವಾಸಿ ತಾಣಗಳ ಮೇಲೆ ನಿರ್ಬಂಧ
– ಉಡುಪಿ : ವಿಶೇಷ ಚೇತನ ವ್ಯಕ್ತಿಯ ರಕ್ಷಣೆ
– ಮಂಗಳೂರು : ಮಂಗಳೂರಿಗೂ ಬರಲಿದೆ ವಂದೇ ಭಾರತ್ ರೈಲು
– ಮಂಗಳೂರು : ಮಂಗಳೂರಿಂದ ಬೆಂಗಳೂರಿಗೆ ಹೆಚ್ಚುವರಿ ವಿಮಾನ ಸೌಲಭ್ಯ
– ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅನುಪಮ್ ಅಗರ್ವಾಲ್ ನೇಮಕಗೊಂಡಿದ್ದಾರೆ.
ಉಡುಪಿ: ಜಿಲ್ಲೆಯ ಪ್ರವಾಸೋದ್ಯಮ ಸ್ಥಳ ಹಾಗೂ ಬೀಚ್, ಸಮುದ್ರತೀರ ಸಹಿತ ಮಳೆಗಾಲದಲ್ಲಿ ಅಪಾಯಕಾರಿ ಪ್ರದೇಶಗಳಿಗೆ ಪ್ರವಾಸಿಗರ ಭೇಟಿಗೆ ಜಿಲ್ಲಾಡಳಿತ ಹೇರಿರುವ ನಿರ್ಬಂಧವನ್ನು ಸೆ. 15ರ ವರೆಗೂ ವಿಸ್ತರಿಸಲಾಗಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಮಳೆ ಬರುವ ಸಾಧ್ಯತೆ ಇರುವುದರಿಂದ ಎಲ್ಲ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಈ ಬಗ್ಗೆ ಅಧಿಕಾರಿಗಳ ಜತೆಗೂ ಚರ್ಚೆ ನಡೆಸಲಿದ್ದೇವೆ. ಆಗುಂಬೆ ಘಾಟಿಯಲ್ಲಿ ದೊಡ್ಡ ವಾಹನ ಸಂಚಾರ ನಿಷೇಧ ತೆರವು ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಯವರೊಂದಿಗೂ ಚರ್ಚೆ ಮಾಡಲಿದ್ದೇವೆ.
ಸೆ. 15ರ ವರೆಗೂ ಎಲ್ಲ ನಿರ್ಬಂಧ ಮುಂದುವರಿಯಲಿದೆ. ಅನಂತರ ಮಳೆಯ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಅವರು ಮಾಹಿತಿ ನೀಡಿದ್ದಾರೆ
ವಿಶೇಷ ಚೇತನ ವ್ಯಕ್ತಿಯ ರಕ್ಷಣೆ
ಉಡುಪಿ: ಮಹಾರಾಷ್ಟ್ರದಿಂದ ಬ್ರಹ್ಮಾವರಕ್ಕೆ ಬಂದಿದ್ದ ವಿಶೇಷ ಚೇತನ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಕೊಕ್ಕರ್ಣಿ ಸಮೀಪ ರಾತ್ರಿ ಹೊತ್ತು ರಕ್ಷಣೆಗಾಗಿ ಕಣ್ಣೀರಿ ಡುತ್ತಿದ್ದ ಮಾಹಿತಿ ಪಡೆದ ಸಂತೋಷ್ ಶೆಟ್ಟಿ ಕೆಂಜೂರು ಅವರು ವಿಶು ಶೆಟ್ಟಿ ಅವರ ಸಹಕಾರದೊಂದಿಗೆ ರಕ್ಷಿಸಿ ಉಳ್ಳೂರಿನ ವಿಶೇಷ ಚೇತನ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು. ಒಬ್ಬರು ಕೆಲಸಕ್ಕೆ ಕರೆತಂದು ದುಡಿಸಿ ನಡುಬೀದಿಯಲ್ಲಿ ಕೈ ಬಿಟ್ಟಿದ್ದಾರೆ ಎಂದು ವ್ಯಕ್ತಿ ತಿಳಿಸಿದ್ದಾರೆ. ಅವರ ಬಗ್ಗೆ ತಿಳಿದವರು ಬ್ರಹ್ಮಾವರ ಠಾಣೆ ಅಥವಾ ಸ್ಪಂದನ ಆಶ್ರಮವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರಿಗೂ ಬರಲಿದೆ ವಂದೇ ಭಾರತ್ ರೈಲು
ಮಂಗಳೂರು : ದೇಶದ ವಲಯದಲ್ಲಿ ಕ್ರಾಂತಿ ಎಬ್ಬಿಸಿದ ವಂದೇ ಭಾರತ್ ರೈಲು ಸೇವೆ ಇನ್ನು ಮಂಗಳೂರಿಗೂ ಲಾಭಿಸಲಿದೆ.
ಈ ರೈಲು ಶುಕ್ರವಾರ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ ಮಂಗಳೂರಿಗೆ ಹೊರಟಿದ್ದು ಈ ಮೂಲಕ ಪಾಲಕ್ಕಾಡ್ ವಿಭಾಗಕ್ಕೆ ಹಸ್ತಾಂತರಿಸಲಾಯಿತು. ಕೇರಳಕ್ಕೆ ರೈಲು ಮಂಜೂರು ಮಾಡಿರುವುದು ದೃಢಪಟ್ಟಿದೆ. ಮಾರ್ಗಗಳು ಇನ್ನೂ ಅಂತಿಮಗೊಂಡಿಲ್ಲ. ವರದಿಗಳ ಪ್ರಕಾರ, ಒಂದು ವಾರದ ಮಾರ್ಗಗಳನ್ನು ಖಚಿತಪಡಿಸುತ್ತದೆ. ಮಂಗಳೂರು-ತಿರುವನಂತಪುರಂ, ಮಂಗಳೂರು-ಎರ್ನಾಕುಲಂ, ಮಂಗಳೂರು ಕೊಯಮತ್ತೂರು ಮತ್ತು ಗೋವಾ ಎರ್ನಾಕುಲಂ ಸೇರಿದಂತೆ ಸಂಭಾವ್ಯ ಮಾರ್ಗಗಳನ್ನು ಪರಿಗಣಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ತೋರೆತಿದೆ.
ಚೆನ್ನೈನಲ್ಲಿ ವಂದೇ ಭಾರತ್ ಲೋಕೋ ಪೈಲಟ್ಗಳಿಗೆ ತರಬೇತಿ ಕೂಡ ಪ್ರಾರಂಭವಾಗಿದೆ. ಮಂಗಳೂರಿನಲ್ಲಿ ಪಿಟ್ಲೈನ್ ಕೂಡ ಸ್ಥಾಪಿಸಲಾಗಿದೆ. ಅಲ್ಲಿಗೆ ಸೇವೆಯಲ್ಲಿರುವ ಮೊದಲ ಕೇರಳದ ವಂದೇ ಭಾರತ್ (20634) ತಿರುವನಂತಪುರದಿಂದ ಬೆಳಿಗ್ಗೆ 5:20 ಗಂಟೆಗೆ ಹೊರಟು ಮಧ್ಯಾಹ್ನ 1:20 ಗಂಟೆಗೆ ಕಾಸರಗೋಡು ತಲುಪುತ್ತದೆ. ವರದಿಗಳ ಪ್ರಕಾರ, ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ಮಂಗಳೂರಿನಿಂದ ಅದೇ ಸಮಯದಲ್ಲಿ ತನ್ನ ಪ್ರಯಾಣವನ್ನು ಪುನರಾರಂಭಿಸುತ್ತದೆ.
ಮಂಗಳೂರಿಂದ ಬೆಂಗಳೂರಿಗೆ ಹೆಚ್ಚುವರಿ ವಿಮಾನ ಸೌಲಭ್ಯ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಸೆ. 7ರಿಂದ ಹೆಚ್ಚುವರಿ ವಿಮಾನ ಸಂಚಾರ ನಡೆಸಲಿದೆ. ವಾರದ ದಿನಗಳು ಹಾಗೂ ಭಾನುವಾರ ಐದು ಮತ್ತು ಶನಿವಾರ ಆರು ವಿಮಾನಗಳು ಮಂಗಳೂರು- ಬೆಂಗಳೂರು ನಡುವೆ ಸಂಚರಿಸಲಿವೆ ಪ್ರಸ್ತುತ ಎಲ್ಲ ದಿನಗಳಲ್ಲಿ ನಾಲ್ಕು ವಿಮಾನಗಳು ಬೆಂಗಳೂರು ನಡುವೆ ಸಂಚರಿಸುತ್ತಿವೆ. ಸೆ.7ರಿಂದ ಸಂಚರಿಸಲಿರುವ ಐದನೇ ದೈನಂದಿನ (1 5858) ವಿಮಾನವು ಮಂಗಳೂರಿಗೆ ಬೆಳಿಗ್ಗೆ 8.35ಕ್ಕೆ ಬರಲಿದೆ, GE 5347 ಸಂಖ್ಯೆಯ ವಿಮಾನವು 19.10ಕ್ಕೆ ಬೆಂಗಳೂರಿಗೆ ಹೊರಡಲಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅನುಪಮ್ ಅಗರ್ವಾಲ್ ನೇಮಕಗೊಂಡಿದ್ದಾರೆ.
ಮಂಗಳೂರು: ರಾಜ್ಯ ಸರ್ಕಾರ ರಾತ್ರೋರಾತ್ರಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದೆ. ಕಳೆದ ಎರಡು ದಿನಗಳ ಹಿಂದಷ್ಟೇ 2018, 2019 ಮತ್ತು 2020ರ ಬ್ಯಾಚ್ನ ಹತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಈಗ ಮತ್ತೆ ರಾಜ್ಯದ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಸ್ಥಳ ಕೂಡ ನಿಯೋಜನೆ ಮಾಡದೆಯೇ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಖಡಕ್ ಅಧಿಕಾರಿ ಎಂದು ಹೆಸರುವಾಸಿಯಾಗಿರುವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ: ಮಂಗಳೂರು ಪೊಲೀಸ್ ಕಮಿಷನರ್, ಕುಲೀಪ್ ಕುಮಾರ್ ಜೈನ್ ಕೂಡ ವರ್ಗಾವಣೆಗೊಂಡಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅನುಪಮ್ ಅಗರ್ವಾಲ್ ನೇಮಕಗೊಂಡಿದ್ದಾರೆ.