ಕರಾವಳಿ ಟಾಪ್ ನ್ಯೂಸ್
ಕಾರ್ಕಳ ಯುವತಿ ಅತ್ಯಾಚಾರ: ಡ್ರಗ್ಸ್ ಜಾಲದ ತನಿಖೆ!
– ಉಳ್ಳಾಲ: ಇಬ್ಬರು ಸಿಟಿ ಬಸ್ ಕಂಡಕ್ಟರ್
ನಡುವೆ ಹೊಡೆದಾಟ
– ಮಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರು ಸವಾರರ ಸಾವು
NAMMUR EXPRESS NEWS
ಕಾರ್ಕಳ: ಕಾರ್ಕಳದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ತಾಫ್ ಮತ್ತು ಅಭಯ್ ಅವರು ಬೆಂಗಳೂರಿಗೆ ಹೋಗಿ ಬೇರೆಯವರ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ, ಆ ಬ್ಯಾಂಕಿಗೆ ಹಣ ಹಾಕಿರುವವರು ಯಾರು ಎಂದು ಪತ್ತೆಯಾಗಿದೆ.
ಮಂಗಳೂರಿನ ಪೊಲೀಸ್ ಅವರು ಅವರನ್ನ ಬಂಧನ ಮಾಡಲಾಗಿದೆ. ಅವರ ಆಧಾರದ ಮೇಲೆ ಮಾಹಿತಿಗಳನ್ನ ಕಲೆಹಾಕಿ ನಾವು ಕಾನೂನಿನ ಮೂಲಕ ಕ್ರಮವನ್ನ ಕೈಗೊಳ್ಳುತ್ತೇವೆ. ಡ್ರಗ್ಸ್ ಎಲ್ಲಿಂದ ಬಂದಿದೆ ಅದನ್ನು ಕೂಡ ತನಿಖೆ ಮಾಡಲಾಗುತ್ತದೆ. ಡ್ರಗ್ಸ್ ಪ್ರಕರಣದಲ್ಲಿ ಆರು ಜನರನ್ನು ಬಂಧನ ಮಾಡಲಾಗಿದೆ. ಬೆಂಗಳೂರಿನಲ್ಲಿ ಡ್ರಗ್ಸ್ ಎಲ್ಲಿ ಸಿಕ್ಕಿತು ಅದನ್ನ ಬೆಂಗಳೂರು ಸಿಸಿಬಿ ಅವರೊಂದಿಗೆ ಚರ್ಚೆ ಕೂಡ ಮಾಡಲಾಗುತ್ತದೆ.
ಉಳ್ಳಾಲ: ಇಬ್ಬರು ಸಿಟಿ ಬಸ್ ಕಂಡಕ್ಟರ್ ನಡುವೆ ಹೊಡೆದಾಟ
ಉಳ್ಳಾಲ: ಇಬ್ಬರು ಸಿಟಿ ಬಸ್ ಕಂಡಕ್ಟರ್ ಗಳು ಸಾರ್ವಜನಿಕರ ಎುರೇ ಪರಸ್ಪರ ಹೊಡೆದಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.
ತಲಪಾಡಿ – ಮಂಗಳೂರು ನಡುವೆ ಸಂಚರಿಸುವ ಪದ್ಮ ಟ್ರಾವೆಲ್ಸ್ ಬಸ್ ಮತ್ತು ಹೊಸಂಗಡಿ ಜಂಕ್ಷನ್ ನಿಂದ ಮಂಗಳೂರು ನಡುವೆ ಸಂಚರಿಸುವ ಅಸರ್ ಟ್ರಾವೆಲ್ಸ್ ಬಸ್ ನಿರ್ವಾಹಕರ ನಡುವೆ ಜಗಳ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಸ್ ನಿರ್ವಾಹಕರಾದ ಅಜಯ್ ಮತ್ತು ವಿಷ್ಣು ಎಂಬವರು ಪರಸ್ಪರ ಹೊಡೆದಾಡಿಕೊಂಡಿದ್ದು,ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಸಂಜೆ ವೇಳೆ ತೊಕ್ಕೊಟ್ಟು ಸಮೀಪ ಈ ಘಟನೆ ನಡೆದಿದೆ. ತಲಪಾಡಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ಸನ್ನು ಬೆನ್ನಟ್ಟಿದ ಇನ್ನೊಂದು ಬಸ್ಸು ಚಾಲಕ ಓವರ್ ಬ್ರಿಡ್ಜ್ ಬಸ್ಸು ನಿಲ್ದಾಣದಲ್ಲಿ ಅಡ್ಡಲಾಗಿ ಇಟ್ಟಿದ್ದ. ಈ ವೇಳೆ ಎರಡು ಬಸ್ಸು ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆದು ಹೊಯ್ ಕೈಯಾಗಿ ಬೀದಿ ಕಾಳಗ ಆಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಓವರ್ ಬ್ರಿಡ್ಜ್ ಆಟೋ ರಿಕ್ಷಾ ಪಾರ್ಕಿನ ರಿಕ್ಷಾ ಚಾಲಕರು ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದು ಬಸ್ಸು ನಿರ್ವಾಹಕ ರನ್ನು ಸಮಾಧಾನಗೊಳಿಸಿ ಕಳುಹಿಸಿದ್ದಾರೆ. ನಿರ್ವಾಹಕರು ಬೀದಿಯಲ್ಲಿ ಕಾದಾಡುತ್ತಿರುವ ದೃಶ್ಯವನ್ನು ಕಾರು ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರು ಸವಾರರ ಸಾವು
ಮಂಗಳೂರು: ಬೈಕ್ ಸ್ಕಿಡ್ ಆಗಿ ಬೈಕ್ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ಮಂಗಳೂರಿನ ಯೆಯ್ಯಾಡಿ ಬಳಿ ಸಂಭವಿಸಿದೆ.
ಮೃತರನ್ನು ರಾಮಕುಂಜದ ಚೇತನ್ ಹಾಗೂ ಉರ್ವಾಸ್ಟೋರ್ ನ ಕಾಶಿ ಎಂದು ಗುರುತಿಸಲಾಗಿದೆ. ಸವಾರರು ಇಂದು ಮುಂಜಾನೆ 3ರ ಸುಮಾರಿಗೆ ಶಕ್ತಿನಗರದಿಂದ ಬರುತ್ತಿದ್ದ ವೇಳೆಗೆ ಮಳೆಯ ಕಾರಣದಂದ ಬೈಕ್ ಸ್ಕಿಡ್ ಆಗಿತ್ತು ಎನ್ನಲಾಗಿದೆ. ನೆಲಕ್ಕೆ ಬದ್ದು ಗಂಭೀರ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.