ಕರಾವಳಿ ಟಾಪ್ ನ್ಯೂಸ್
ಕರಾವಳಿಯಲ್ಲೂ ಕಸ್ತೂರಿ ರಂಗನ್ ವರದಿ ಹೋರಾಟ!
– ಕುಂದಾಪುರ: ಹಳ್ಳಿಗಳಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆ
– ಕಾಸರಗೋಡು: ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ!!
– ಮಂಗಳೂರು: ಮೊಬೈಲ್ ವಿಚಾರಕ್ಕೆ ಕೊಲೆ: ಅರೆಸ್ಟ್
NAMMUR EXPRESS NEWS
ಕುಂದಾಪುರ: ಇಡೂರು ಕುಂಜ್ಞಾಡಿ, ಹೊಸೂರು ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆ 29-09-2024 ಬೆಳಿಗ್ಗೆ 10ಕ್ಕೆ ಶ್ರೀ ದುರ್ಗಾ ಸಭಾಭವನ ಹೊಸೂರು (ಶ್ರೀ ಮಹಿಷಮರ್ದಿನಿ ದೇವಸ್ಥಾನ ಕಾನ್ಬೇರು) ನಲ್ಲಿ ಕಸ್ತೂರಿರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆ ಕಾರ್ಯಕ್ರಮ ನೆರವೇರಲಿದೆ. ಸಮಾನ ಮನಸ್ಕರ ಸಹಯೋಗದೊಂದಿಗೆ ಮಾನವ ಪ್ರೇಮಿಗಳೆಲ್ಲರಿಗೂ ಆದರದ ಸ್ವಾಗತವನ್ನ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ವಿನಂತಿಸಿದೆ.
ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ!!
ಕಾಸರಗೋಡು : ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕಯ್ಯಾರ್ ಕನ್ನಟಿಪ್ಪಾರೆ ಶಾಂತಿಯೋಡು ನಿವಾಸಿ ಜನಾರ್ಧನ (39) ಬಂಧಿತ. ಪತ್ನಿ ಮಂಗಳೂರು ವಾಮಂಜೂರು ಪಿಲಿಕುಳದ ವಿಜೇತ ( 32)ಮನೆಯೊಳಗೆ ಫ್ಯಾನ್ ಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರು ನಡೆಸಿದ ತನಿಖೆಯಿಂದ ವಿಜೇತ ಆತ್ಮಹತ್ಯೆ ಕುರಿತು ಬರೆದಿಟ್ಟಿದ್ದ ಪತ್ರ ಲಭಿಸಿತ್ತು. ದೈಹಿಕ ಹಾಗೂ ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತನಿಖೆಯಿಂದ ಸ್ಪಷ್ಟಗೊಂಡಿತ್ತು.
ಇನ್ನು ವಿಜೇತರ ಸಾವಿಗೆ ಜನಾರ್ಧನನ ಕಿರುಕುಳ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಯನ್ನು ಕುಂಬಳೆ ಪೊಲೀಸರು ಠಾಣೆಗೆ ಕರೆಸಿ ಬ೦ಧಿಸಿದ್ದಾರೆ. ಬಂಧಿತನನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬ೦ಧನ ವಿಧಿಸಲಾಗಿದೆ.
ಮಂಗಳೂರು: ಮೊಬೈಲ್ ವಿಚಾರಕ್ಕೆ ಹತ್ಯೆ ಪ್ರಕರಣ; ಆರೋಪಿ ಅರೆಸ್ಟ್
ಮಂಗಳೂರು: ಮೊಬೈಲ್ ವಿಚಾರಕ್ಕೆ ಬಾಗಲಕೋಟೆ ಮೂಲದ ಬಸವರಾಜ ವದ್ದ ಅಲಿಯಾಸ್ ಮುದುಕಪ್ಪ (39) ಎಂಬುವವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಧರ್ಮರಾಜ್ ಸುವರ್ಣ(50) ಎಂದು ಗುರುತಿಸಲಾಗಿದೆ.
ಪಣಂಬೂರು ಪೊಲೀಸ್ ವ್ಯಾಪ್ತಿ ತೋಟಾಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಈ ಹತ್ಯೆ ನಡೆದಿದ್ದು ಹನುಮಂತ ದುರುಗಪ್ಪ ವಡ್ಡ ಎಂಬವರು ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಅನ್ವಯ ತನಿಖೆಗೆ ಇಳಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿ ಧರ್ಮರಾಜ್ ಬಂಧಿಸಿದ್ದಾರೆ. ಸುವರ್ಣ (50) ಎಂಬುವವರನ್ನುಕೇರಳದ ಕೋಝಿಕ್ಕೋಡ್ ನ ಚೊಂಪಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಪಣಂಬೂರು ಪೊಲೀಸರು ದಸ್ತಗಿರಿ ಮಾಡುವ ಸಂಧರ್ಭದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.ಆರೋಪಿಯು ಮೀನುಗಾರಿಕಾ ಕೆಲಸ ಮಾಡಿಕೊಂಡಿದ್ದು, ತೋಟಾ ಬೆಂಗ್ರೆಯಲ್ಲಿ ವಾಸಮಾಡಿಕೊಂಡಿದ್ದ ಎಂಬುವುದಾಗಿ ತಿಳಿದು ಬಂದಿದೆ.