ಕರಾವಳಿಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ!
– ಉಡುಪಿಯಲ್ಲಿ ಈ ಭಾರಿ ಕೃಷ್ಣನಿಗೆ ನೂರ ಎಂಟು ಬಗೆಯ ವೆರೈಟಿ ಉಂಡೆ!
– 2 ದಿನದ ಹಬ್ಬದ ಸಡಗರ: ಮೊಸರು ಕುಡಿಕೆ ಒಡೆಯುವ ಸಂಭ್ರಮ
NAMMUR EXPRESS NEWS
ಉಡುಪಿ/ಮಂಗಳೂರು: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಭಗವಂತ ಕೃಷ್ಣ ಜನಿಸಿದ ಈ ದಿನವನ್ನು ಇಡೀ ದೇಶವು ಸಂಭ್ರಮಿಸುತ್ತದೆ. ಮನೆಯಲ್ಲಿ ಪುಟ್ಟ ಮಕ್ಕಳಿದ್ದರಂತೂ ಆ ಮನೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ದುಪ್ಪಟ್ಟು. ಮಕ್ಕಳಿಗೆ ಕೃಷ್ಣ ಅಥವಾ ರಾಧೆಯ ವೇಷಭೂಷಣ ಹಾಕಿ ಕಣ್ತುಂಬಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.
ಮನೆ ಮನೆಗಳಲ್ಲಿ ನಾನಾಬಗೆಯ ತಿಂಡಿತಿನಿಸು. ಪ್ರತಿದಿನ ಬಾಗಿಲು ಮುಚ್ಚಿ ಸರ್ರನೇ ಕೇಲಸೆಕ್ಕೆದ್ದು ಪರಾರಿಯಾಗುವ ಪ್ರತಿಯೊಬ್ಬರು ಈ ದಿನ ಮನೆಯಲ್ಲೇ ಕುಳಿತು ಆರಾಧಿಸುವ ಹಬ್ಬ . ಕರಾವಳಿ ಕಡೆಗಳಲ್ಲಿ ಕೃಷ್ಣಾಷ್ಟಮಿ ಎಂದಾಗ ನೆನಪಾಗುಹುದು ಎಲೆಗಳಲ್ಲಿ ಮಾಡುವ ಗುಂಡ, ಕೊಟ್ಟಿಗೆ, ಮೂಡೆ ಹಾಹಾ!!!….ಮನೆಯಲ್ಲಂತೂ ಸೌಟು, ಮಕ್ಿಗಳದೇ ಸದ್ದು.. ಈ ದಿನ ಕರಾವಳಿಯ ಮಕ್ಕಳಿಗೆ ಎಲ್ಲಿಲ್ಲದ ಸಡಗರ ಕೃಷ್ಣಾ, ರಾಧಾ, ಶಾಮಾ ಭೀಮ, ಯಶೋಧ ಹೀಗೆ ನನಾ ತರಹದ ಅಲಂಕಾರ. ಮಧ್ಯಾಹ್ನ ಬಾಳೆಎಲೆಯಲ್ಲಿ ಸುತ್ತ ಮಸಿ ಪಾತ್ರೆ.. ಮೂರು ನಾಲ್ಕು ಬಗೆಯ ಪದಾರ್ಥವನ್ನಿಟ್ಟು ಭರ್ಜರಿ ಭೋಜನ.
ಜನ್ಮಾಷ್ಟಮಿ ಕಾರ್ಯಕ್ರಮ ಸಂಭ್ರಮಾಚರಣೆಯಾಗಿ ಮೊಸರು ಕುಡಿಕೆ ಉತ್ಸವ ನಡೆಯುತ್ತದೆ. ಬಣ್ಣಗಳ ನೀರನ್ನು ಹಾಕಿದ ಮಡಕೆಗಳನ್ನು ಎತ್ತರದಲ್ಲಿ ಕಟ್ಟಿ ಅದನ್ನು ಯುವಕರು ಒಬ್ಬರ ಮೇಲೊಬ್ಬರು ಹತ್ತಿ ಒಡೆಯುವ ಈ ಉತ್ಸವ ಮಂಗಳೂರಿನಲ್ಲಿ ಸಂಭ್ರಮದಿಂದ ನಡೆಯುತ್ತದೆ. ಹೀಗೆ ಕರಾವಳಿಯಲ್ಲಿ ಹಲವಾರು ರೀತಿಯಲ್ಲಿ ರಾರಾಜಿಸುವ ಕೃಷ್ಣನ ಹಬ್ಬ ಮನೋಹರವಾಗಿರುತ್ತದೆ.
ಉಡುಪಿಯಲ್ಲಿ ಪೀತಾಂಬರಧಾರಿಯ ಆರಾಧನೆ!
ಉಡುಪಿಯಲ್ಲಿ ಕೃಷ್ಣ ನಗರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ನಡೆಯುತ್ತಿದ್ದು, 108 ಬಗೆಯ ತಿಂಡಿ ತಿನಿಸು ಸಜ್ಜಾಗಿದೆ.ಮಂಗಳವಾರ ಆ. 27ರಂದು ಶ್ರೀಕೃಷ್ಣಲೀಲೋತ್ಸವ ಆಚರಣೆಗೆ ತಯಾರಿಯಾಗುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯು ಭಕ್ತರು ಹಾಗೂ ಸಾರ್ವಜನಿಕರ ಕೇಂದ್ರ ಬಿಂದುವಾಗಿದೆ. ಇಲ್ಲಿ ಗೋಕುಲ ವಾಸಿ ದೇವಕಿ ನಂದನ ಆರಾಧನೆ ನಡೆಯುತ್ತಿದೆ.
ಸಂಭ್ರಮದ ಶ್ರೀ ಕೃಷ್ಣಾಷ್ಟಮಿ ಮತ್ತು ವೈಭವದ ಶ್ರೀ ಕೃಷ್ಣಲೀಲೋತ್ಸವ, ಮೊಸರುಕುಡಿಕೆ ಹಬ್ಬಗಳು ನಡೆಯುತ್ತಿದೆ. ಈ ಎರಡು ದಿನಗಳ ಹಬ್ಬಕ್ಕಾಗಿ ಉಡುಪಿಯಲ್ಲಿ ವಾರದಿಂದಲೇ ಸಿದ್ಧತೆಗಳು ನಡೆಯುತ್ತಿವೆ. ಕೃಷ್ಣಮಠ ತಳಿರು ತೋರಣ, ಹೂವುಗಳಿಂದ ಶೃಂಗಾರಗೊಂಡಿತ್ತು. ರಥಬೀದಿಯಲ್ಲಿ ಮೊಸರುಕುಡಿಕೆ ಅಥವಾ ವಿಟ್ಲಪಿಂಡಿ ಉತ್ಸವಕ್ಕೆ ಗುರ್ಜಿಗಳು ಸ್ಥಾಪನೆಗೊಂಡಿವೆ, ರಥಗಳು ಕೃಷ್ಣನ ಉತ್ಸವಕ್ಕೆ ಸಿದ್ಧವಾಗಿವೆ.
ದಕ್ಷಿಣ ಕನ್ನಡದಲ್ಲಿ ಮನೆಯಲ್ಲೇ ಕುಳಿತು ಕೃಷ್ಣಜನ್ಮಷ್ಟಮಿ ಹಬ್ಬ ಆಚರಿಸಿದರೆ ಉಡುಪಿಯಲ್ಲಿ ಮಂದಿರಕ್ಕೆ ತೆರಳಿ ಈ ಹಬ್ಬವನ್ನು ಆಚರಿಸುತ್ತಾರೆ. ಬಾಲಕೃಷ್ಣನಿಗೆ ಅರ್ಪಿಸುವುದಕ್ಕಾಗಿ ಕೃಷ್ಣಮಠದ ಪಾಕಶಾಲೆಯಲ್ಲಿ 108 ಬಗೆಯ ಲಡ್ಡುಗಳು ಮತ್ತು ಲಕ್ಾಂತರ ಸಂಖ್ಯೆಯಲ್ಲಿ ಚಕ್ಕುಲಿ ತಯಾರಿಸಲಾಗಿದ್ದು, ಇವುಗಳನ್ನು ಇಂದು ರಾತ್ರಿ ಮಹಾಪೂಜೆಯ ಸಂದರ್ಭದಲ್ಲಿ ಕೃಷ್ಣನಿಗೆ ಅರ್ಪಿಸಿ, ನಾಳೆ ಭಕ್ತರಿಗೆ ವಿತರಿಸಲಾಗುತ್ತದೆ.
ಕೃಷ್ಣ ಭಕ್ತರು ದಿನವಿಡೀ ಉಪವಾಸವಿದ್ದು, ಕೃಷ್ಣನ ಭಜನೆ, ಪಾರಾಯಣಗಳಲ್ಲಿ ಕಳೆಯಲಿದ್ದಾರೆ. ಕೃಷ್ಣಮಠದಲ್ಲಿ ದಿನವಿಡೀ ಮುದ್ದುಕೃಷ್ಣ – ಮುದ್ದು ರಾಧೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉಡುಪಿ ನಗರದಲ್ಲಂತೂ ಹತ್ತಿಪ್ಪತ್ತಕ್ಕೂ ಹೆಚ್ಚು ಹುಲಿವೇಷಧಾರಿ ತಂಡಗಳು ಕುಣಿದು ಕುಪ್ಪಳಿಸಿ ಜನರಿಗೆ ಮನರಂಜನೆ ನೀಡಲಿದ್ದಾರೆ.