ಸಿಟಿ ವಿದ್ಯಾರ್ಥಿಗಳ ಹಳ್ಳಿ ಲೈಫು!
– ಕಾರ್ಕಳಕ್ಕೆ ಬಂದು ನಾಟಿ ಮಾಡಿದ ಕಾಲೇಜು ವಿದ್ಯಾರ್ಥಿಗಳು
– ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಗದ್ದೆ ನಾಟಿ
NAMMUR EXPRESS NEWS
ಕಾರ್ಕಳ: ಬೆಂಗಳೂರಿನ ವಿದ್ಯಾರ್ಥಿಗಳು ಕಾರ್ಕಳದ ಹಳ್ಳಿಯೊಂದಕ್ಕೆ ಬಂದು ನಾಟಿ ಮಾಡುವ ಮೂಲಕ ಕೃಷಿಗೂ ಸೈ… ಓದೋಕೂ ಸೈ ಎಂದಿದ್ದಾರೆ.
ಕಾರ್ಕಳದ ಪರಪ್ಪು ರಸ್ತೆಯಲ್ಲಿರುವ ಜಗನ್ನಾಥ ಪೈ ಅವರ ಗದ್ದೆಗೆ ಬೆಂಗಳೂರಿನ ಆರ್ ಸಿ ಕಾಲೇಜು ,ಎಂ ಇ ಎಸ್ ಕಾಲೇಜು ಮಲ್ಲೇಶ್ವರಂ , ಬೆಂಗಳೂರು ಆರ್ಟ್ಸ್ ಕಾಲೇಜು, ಜಿ.ಎಫ್ ಜಿ.ಸಿ ರಾಜಾಜಿನಗರ,ಶೇಷಾದ್ರಿ ಪುರಂ ಮೈನ್ ಕಾಲೇಜು, ಮಹಾರಾಣಿ ಕಾಲೇಜು, ಎಂ ಇ ಎಸ್ ಕೆ ಕೆ ಪಿಯು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಭಾರತ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ಮತ್ತು ರೊವರ್ಸ್ ರೇಂಜರ್ಸ್, ಬೆಂಗಳೂರಿನ ಉತ್ತರ ಜಿಲ್ಲೆಯ ಒಟ್ಟು 82 ವಿದ್ಯಾರ್ಥಿಗಳು ಸೇರಿ ಸುಮಾರು ಎರಡು ಎಕರೆ ಗದ್ದೆಗಳಲ್ಲಿ ನಾಟಿ ಮಾಡಿ ಖುಷಿ ಪಟ್ಟರು. ಅಲ್ಲದೆ ಹಳ್ಳಿಯ ಬದುಕಿನ ಕೃಷಿ ಸೊಗಡು ಅನುಭವಿಸಿದರು.
ಪದವಿ ಹಾಗು ಪಿಯುಸಿ ವಿದ್ಯಾರ್ಥಿಗಳು ತುಳುನಾಡಿನ ಪಾರ್ದನ ಹಾಗು ಕೆಸರು ಗದ್ದೆಯಲ್ಲಿ ಆಟವಾಡಿ ಖುಷಿಪಟ್ಟರು. ಕಜೆಜಯ ಭತ್ತದ ತಳಿಯನ್ನು ನಾಟಿ ಸಮಯದಲ್ಲಿ ವಿದ್ಯಾರ್ಥಿಗಳು ಸಾಲುನಾಟಿಯನ್ನು ಪರಿಚಯಿಸಿದರು. ಕಾರ್ಕಳದ ಎಂಪಿ ಎಂ ಕಾಲೇಜು ವಿದ್ಯಾರ್ಥಿಗಳು ಗದ್ದೆಯಲ್ಲಿ ನಾಟಿ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೆರವಾದರು.
ಟ್ರಾಕ್ಟರ್ ಓಡಿಸಿದ ಹುಡುಗಿ!
ಎಮ್.ಇ.ಎಸ್ ಕಾಲೇಜಿನ ಕಟೀಲು ಮೂಲದ ವಿದ್ಯಾರ್ಥಿ ನಿ ಪಂಚಮಿ ಗದ್ದೆಯಲ್ಲಿ ಟ್ರಾಕ್ಟರ್ ಮೂಲಕ ಉಳುಮೆ ಮಾಡಿ ಖುಷಿ ಪಟ್ಟಳು. ಸೇರಿದ್ದ ಜನರು ವಿದ್ಯಾರ್ಥಿನಿ ಟ್ರಾಕ್ಟರ್ ಉಳುಮೆಗೆ ಜನರು ಮೆಚ್ಚುಗೆ ಸೂಚಿಸಿದರು . ಸೇರಿದ್ದ ವಿದ್ಯಾರ್ಥಿಗಳು ತುಳುನಾಡ ಸಂಸ್ಕೃತಿಗೆ ಮನಸೋತರು. ಬೆಂಗಳೂರಿನ ವಿದ್ಯಾರ್ಥಿಗಳಿಗೆ ತುಳುನಾಡ ಸ್ವಾದಿಷ್ಟ ಭೋಜನವನ್ನು ಏರ್ಪಡಿಸಲಾಗಿತ್ತು, ಹಲಸಿನ ಸೋಳೆಯ ಸುಕ್ಕ, ಪತ್ರಾಡೆ, ಹಾಗೂ ಹುರುಳಿ ಚಟ್ನಿ , ಕುಚ್ಚಲಕ್ಕಿ ಹಾಗೂ ಬೆಳ್ತಿಗೆ ಅಕ್ಕಿಯ ಅನ್ನ , ಸಾರು ಉಂಡು ಖುಷಿ ಪಟ್ಟರು .
ಸ್ಕೌಟ್ಸ್ ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತ ಸಾವಿತ್ರಿ ಮನೋಹರ , ನಿತಿನ್ ಅಮೀನ್ ಸೇರಿದಂತೆ ಹಲವರು ಸಹಕರಿಸಿದ್ದರು.
ರಾಜ್ಯ ಮುಖ್ಯ ಆಯುಕ್ತರ ಪಿ ಜಿ ಆರ್ ಸಿಂಧೀಯಾ ಮಾರ್ಗದರ್ಶನದಲ್ಲಿ ಈ ಕೃಷಿ ನಾಟಿ ಕಾರ್ಯ ನಡೆಯುತಿದೆ. ವಿದ್ಯಾರ್ಥಿಗಳಿಗೆ ತುಳುನಾಡನ್ನು ಪರಿಚಯಿಸುವ ಕಾರ್ಯವಾಗಿದೆ ಎಂದು ಗೈಡ್ ಆದ ಜ್ಯೋತಿ ಜಗನ್ನಾಥ ಪೈ ಹೇಳಿದ್ದಾರೆ.
ಇದನ್ನೂ ಓದಿ : ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ!
HOW TO APPLY : NEET-UG COUNSELLING 2023