ಕರಾವಳಿ ಟಾಪ್ ನ್ಯೂಸ್
* ಮಂಗಳೂರು: ಮಾದಕ ವಸ್ತು ಮಾರಾಟ,ಮೂವರು ವಶ!
* ಕಬ್ಬಿಣದ ಗೇಟ್ ಬಿದ್ದು ಮಗು ಧಾರುಣ ಸಾವು
* ಕೆ ಎಸ್ ಆರ್ ಟಿ ಸಿ ಬಸ್ ನಿರ್ಲಕ್ಷ್ಯತನ: ಗಾಯ
NAMMUR EXPRESS NEWS
ಮಂಗಳೂರು: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕಾವೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಕಾಸರಗೋಡಿನ ಮೇಘನಾಥ ಟಿ. (19), ಕೇರಳ ಕಯ್ಯೂರಿನ ಶ್ರೀಶಾಂತ್(18) ಮತ್ತು ಸಯೂಜ್ ಎಂ(20) ಎಂದು ಗುರುತಿಸಲಾಗಿದೆ.
ಇವರಿಂದ ಮಾದಕ ವಸ್ತು ವಶಪಡಿಸಲಾಗಿದೆ. ಪೊಲೀಸರು ಮಾಲಾಡಿ ಕೋರ್ಟ್ ರಸ್ತೆ ಕಡೆಯಿಂದ ಗೋಲ್ಡ್ಫಿಂಚ್ ಮೈದಾನದ ಕಡೆಗೆ ಹೋಗುತ್ತಿದ್ದಾಗ ಅನುಮಾನಾಸ್ಪದವಾಗಿ ನಿಂತಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಿಸಿದರು.
ಈ ವೇಳೆ ಆರೋಪಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
* ಕಬ್ಬಿಣದ ಗೇಟ್ ಮೇಲೆ ಬಿದ್ದು,ಅಂಬೆಗಾಲಿಡುವ ಮಗು ಸಾವು
ಕಾಸರಗೋಡು: ಆಟವಾಡುತ್ತಿದ್ದ ವೇಳೆ ಕಬ್ಬಿಣದ ಗೇಟ್ ದೇಹದ ಮೇಲೆ ಬಿದ್ದು ಅಂಬೆಗಾಲಿಡುವ ಮಗು ದಾರುಣ ಂ್ಯ ಕಂಡಿದೆ. ಉದುಮ, ಪಳ್ಳಂ, ದಕ್ಷಿಣ ದಂಡೆಯ ಮಾಹಿನ್ ಹಾಜಿ ಅವರ ಪುತ್ರ ಅಬುತಾಹಿರ್ (ಎರಡೂವರೆ) ಮೃತಪಟ್ಟ ಮಗು.ಮಾಂಗಾಡ್ನ ಕುಲಿಕುನ್ನಂನ ಸಂಬಂಧಿಯೊಬ್ಬರ ಮನೆಗೆ ಬಂದಿದ್ದ ಮಗು ಆಟವಾಡುವ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
* ನಿಲ್ಲದ ಕೆ ಎಸ್ ಆರ್ ಟಿ ಸಿ ಬಸ್ ನಿರ್ಲಕ್ಷ್ಯತನ,ರಸ್ತೆಗೆ ಬಿದ್ದು ಗಾಯಗೊಂಡ ವಿದ್ಯಾರ್ಥಿ!
ಬಂಟ್ವಾಳ : ಕಾಲೇಜು ವಿದ್ಯಾರ್ಥಿ ಬಸ್ಸು ಹತುತ್ತಿದ್ದ ವೇಳೆ ಚಾಲಕ ನಿರ್ಲಕ್ಷ್ಯದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಕೆಳಗೆ ಬಿದ್ದು ಗಾಯಗೊಂಡ ಘಟನೆ ಬಿ.ಸಿರೋಡು ಬಸ್ಸು ನಿಲ್ದಾಣದಲ್ಲಿ ಸೆ. 18ರಂದು ಸಂಭವಿಸಿದೆ.
ಗಾಯಗೊಂಡ ವಿದ್ಯಾರ್ಥಿಯನ್ನು ರೋಹನ್ ಪಿಂಟೋ (18) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದು,
ಬಿ.ಸಿ ರೋಡು ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಮಂಗಳೂರು ಕಡೆಗೆ ಹೋಗುವ ಕೆಎ21 ಎಫ್ 0149 ನೋಂದಣಿ ಸಂಖ್ಯೆಯ ಕೆ ಎಸ್ ಆರ್ ಟಿ
ಸಿ ಬಸ್ ಬಂದಿರುತ್ತದೆ. ಈ ಸಂದರ್ಭ ಹಿಂಬದಿ ಬಾಗಿಲಿನ ಮೂಲಕ ಹತ್ತುತ್ತಿರುವಾಗ, ಏಕಾಏಕಿ ಬಸ್ಸನ್ನು ಚಾಲಕ ಶ್ರೀಕಾಂತ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ, ಎದುರು ನಿಂತಿದ್ದ ಖಾಸಗಿ ಬಸ್ಸಿನ ಬಲಬದಿಯ ಭಾಗಕ್ಕೆ ಕೆ ಎಸ್ ಆರ್ ಟಿ ಸಿ ಬಸ್ಸಿನ ಎಡಬದಿಯ ಹಿಂಬದಿಯ ಭಾಗ ತಾಗಿರುತ್ತದೆ. ರೋಹನ್ ಪಿಂಟೋ ರಸ್ತೆಗೆ ಬಿದ್ದು ಗಾಯಗೊಂಡಿದ್ದಾನೆ. ಮಂಗಳೂರು ಕಂಕನಾಡಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.