ಅ.3ರಿಂದ ಮಂಗಳೂರು ದಸರಾ ಶುರು!
* ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವ
* ಬೆಳ್ತಂಗಡಿ: ಶ್ರೀ ದುರ್ಗಾಕಾಳಿಕಾಂಬ ನವರಾತ್ರಿ ಉತ್ಸವ!l
* ಕೊಲ್ಯ ಮೂಕಾಂಬಿಕಾ ಸಾನ್ನಿಧ್ಯದಲ್ಲಿ ನವರಾತ್ರಿ ಉತ್ಸವ
* ಭರ್ಜರಿ ಉಚ್ಚಿಲ ದಸರಾ: ಸರ್ವರಿಗೂ ಸ್ವಾಗತ
NAMMUR EXPRESS NEWS
ಮಂಗಳೂರು: ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವ ಅಕ್ಟೋಬರ್ 3ರಿಂದ 14ರ ವರೆಗೆ ನಡೆಯಲಿದ್ದು, ದಸರಾ ವಿಶೇಷವಾಗಿ ಅ.6ರಂದು ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ.
ಕುದ್ರೋಳಿ ಕ್ಷೇತ್ರದಲ್ಲಿ 1991ರಿಂದ ಆರಂಭಗೊಂಡ ‘ಮಂಗಳೂರು ದಸರಾ ವೈಭವ’ ಕುದ್ರೋಳಿ ಗೋಕರ್ಣನಾಥನ ಕೃಪೆಯೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ಈ ಬಾರಿ ಅ.3ರಂದು ದಸರಾ ಉತ್ಸವಕ್ಕೆ ಚಾಲನೆ ನೀಡಲಿದ್ದು,ಅದೇ ದಿನ ಶಾರದೆ, ನವದುರ್ಗೆಯರ ಪ್ರತಿಷ್ಠೆ ನಡೆಯಲಿದೆ.
ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದ ರಂಗು
ದಸರಾ ಸಂದರ್ಭ ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನೂರಾರು ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಈ ಬಾರಿ ವಿಶೇಷ ಎನ್ನುವಂತೆ, ಅ.4ರಂದು ಬಹುಭಾಷಾ ಕವಿಗೋಷ್ಟಿ ನಡೆಯಲಿದ್ದು ಹತ್ತು ಭಾಷೆಗಳಲ್ಲಿ ಕವಿಗಳು ತಮ್ಮ ಕವನ ಮಂಡಿಸಲಿದ್ದಾರೆ. ದಸರಾ ಕೊನೆಯಲ್ಲಿ ಮೈಸೂರು ದಸರಾವನ್ನೇ ನೆನಪಿಸುವಂತೆ ತುಳುನಾಡಿನ ಸಂಸ್ಕೃತಿಗೆ ಅನುಗುಣವಾಗಿ ಅ.13ರಂದು ವೈಭವದ ಶಾರದಾ ವಿಸರ್ಜನಾ ಶೋಭಾಯಾತ್ರೆ ನಡೆಯಲಿದೆ. ಇದಕ್ಕಾಗಿ ನಗರದಾದ್ಯಂತ 9 ಕಿಮೀ ಉದ್ದಕ್ಕೆ ದೀಪಾಲಂಕಾರವೂ ಆಗಲಿದ್ದು ಹತ್ತು ದಿನಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿ ವಿಜೃಂಭಿಸಲಿದ್ದಾರೆ.
ಬೆಳ್ತಂಗಡಿ: ಶ್ರೀ ದುರ್ಗಾಕಾಳಿಕಾಂಬ ನವರಾತ್ರಿ ಉತ್ಸವ!
ಬೆಳ್ತಂಗಡಿ: ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ಅ.3ರಿಂದ ಅ.12ರವರೆಗೆ ನಡೆಯಲಿದೆ. ನವರಾತ್ರಿ ಉತ್ಸವದ ಪ್ರತಿದಿನ
ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ, ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಅ.12ರಂದು ಸಾರ್ವಜನಿಕ ಚಂಡಿಕಾಹೋಮ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ಅ.9ರಂದು ಶ್ರೀ ಶಾರದಾ ಪೂಜೆ, ತೆನೆ ಪೂಜೆ, ಮಧ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ಅಷ್ಟಾವಧಾನ, ರಂಗಪೂಜೆ, ವಾಹನ ಪೂಜೆ ನಡೆಯಲಿದೆ. ಅ.11ರಂದು ಸಂಜೆ 5 ಗಂಟೆಯಿಂದ ವಾಹನ ಪೂಜೆ, ಶ್ರೀ ಮೂಲದುರ್ಗಾ ದೇವಿಗೆ ರಾತ್ರಿ ಹೂವಿನ ಪೂಜೆ, ರಂಗ ಪೂಜೆ, ಅ.9ರಿಂದ ಅ.11ರವರೆಗೆ ಬೆಳಗ್ಗೆ 9ಗಂಟೆಯಿಂದ 11ರವರೆಗೆ ಅಕ್ಷರಭ್ಯಾಸ ನಡೆಯಲಿದೆ.
* ಕೊಲ್ಯ ಮೂಕಾಂಬಿಕಾ ಸಾನ್ನಿಧ್ಯದಲ್ಲಿ ನವರಾತ್ರಿ ಉತ್ಸವ!
ಉಳ್ಳಾಲ: ಕೊಲ್ಯದ ಮೂಕಾಂಬಿಕೆಯ ಸಾನ್ನಿಧ್ಯದಲ್ಲಿ
ನವರಾತ್ರಿ ಉತ್ಸವದ ಪ್ರಯುಕ್ತ ಅ.3ರಿಂದ 13ರ ವರೆಗೆ ದೇವತಾ ವಿಧಿ ವಿಧಾನಗಳನ್ನು ಒಳಗೊಂಡು ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಅ.12ರಂದು ಕ್ಷೇತ್ರದಲ್ಲಿ ಆಯುಧ ಪೂಜೆ, 13ರಂದು ಮಕ್ಕಳಿಗೆ ವಿದ್ಯಾರಂಭ, 13ರಂದು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಚಂಡಿಕಾಹವನ ನಡೆಯಲಿದೆ. ಭರತನಾಟ್ಯ ಕ್ಷೇತ್ರದ ಸಾಧಕ ಉಳ್ಳಾಲ ಮೋಹನ್ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಲಾಗಿದೆ.
* ಭರ್ಜರಿ ಉಚ್ಚಿಲ ದಸರಾದ ಸಂಭ್ರಮ
ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ
ಅ. 3ರಿಂದ 12ರವರೆಗೆ ಜರಗಲಿರುವ ಉಚ್ಚಿಲ ದಸರಾ 2024ರ ಪ್ರಯುಕ್ತ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ ಮತ್ತು ಭಕ್ತರ ಸಹಕಾರದೊಂದಿಗೆ ಶಾಲಿನಿ ಡಾ.ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಪ್ರತೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅ.3ರಂದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ
ದೊರಕಲಿದೆ. ಅ.4 ಸ್ಥಳೀಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ರಿಂದ ಲೈವ್ ಹಿನ್ನೆಲೆ ಸಂಗೀತ ವಾದನದೊಂದಿಗೆ ನಾಟ್ಯ ನಿಲಯಂ ಮಂಜೇಶ್ವರ ತಂಡದವರಿಂದ ನೃತ್ಯ ವೈವಿಧ್ಯ, ಅ.5 ಕ್ಷೇತ್ರದ ರಥಬೀದಿಯ ಸುತ್ತ ಸಾಮೂಹಿಕ ಭಜನೆ ಕುಣಿತ, ಜಿಲ್ಲಾ ಮೊಗವೀರ ಯುವ ಸಂಘಟನೆ ಸದಸ್ಯರಿಂದ ಸಾಂಸ್ಕೃತಿಕ ಕಾಯಕ್ರಮ, ಗುರು ಕೌಸಲ್ಯ ನಿವಾಸ್ ಮತ್ತು ಬಳಗ, ಎಂ. ಎಸ್. ನಾಟ್ಯಕ್ಷೇತ್ರ ಬೆಂಗಳೂರು ಇವರಿಂದ ಶ್ರೀರಾಮ ಹನುಮಂತ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.
ಅ. 8 ಸ್ಥಳೀಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಘವೇಂದ್ರ ಆಚಾರ್ಯ ಜನ್ಸಾಲೆ ನೇತೃತ್ವದ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಯಕ್ಷ ಕಲಾ ತಂಡ ಇವರಿಂದ ಚಕ್ರ ಚಂಡಿಕೆ ಯಕ್ಷಗಾನ,
ಅ.9 ಯಶಸ್ವಿನಿ ಉಳ್ಳಾಲ್ ಅವರಿಂದ ಗಾನ ಲಹರಿ, ಸ್ಥಳೀಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಶ್ರೀ ದೇವಿ ನೃತ್ಯಾರಾಧನ ಕಲಾಕೇಂದ್ರ ಪುತ್ತೂರು ನೃತ್ಯ ಗುರು ವಿದುಷಿ ರೋಹಿಣಿ ಉದಯ್ ಶಿಷ್ಯೆಯರಿಂದ ನೃತ್ಯ.
ಅ. 10 ಖ್ಯಾತ ಕೀರ್ತನಕಾರ ಡಾ.ಎಸ್.ಪಿ. ಗುರುದಾಸ್ ಮಂಗಳೂರು ಅವರಿಂದ ಹರಿಕಥಾ ಸತ್ಸಂಗ ಲಕ್ಷ್ಮೀ ಕಲ್ಯಾಣ ನಡೆಯಲಿದೆ.ಅ. 12ರಂದು ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಜಲಸ್ತಂಭನ ಶೋಭಾಯಾತ್ರೆ ಮತ್ತು ಜಲಸ್ತಂಭನೆ ಪ್ರಯುಕ್ತ ಕಾಪು ಬೀಚ್ ನಲ್ಲಿ ಲೈವ್ ಮ್ಯೂಸಿಕ್ ಶೋ ಮತ್ತು ವಿಶೇಷ ಲೇಸರ್ ಶೋ ಪ್ರದರ್ಶನ ನಡೆಯಲಿ