ಮಣಿಪಾಲ: ಬೆಳ್ಳಂಬೆಳಗ್ಗೆ ಕಾರು ಅಪಘಾತ,
– ಮಂಗಳೂರು : ಪೊಲೀಸ್ ಹೆಸರಲ್ಲಿ ಕರೆ ಮಾಡಿ 50 ಲಕ್ಷ ರೂ. ವಂಚನೆ
– ಸುಳ್ಯ: ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿಯ ಬಂಧನ
NAMMUR EXPRESS NEWS
ಮಣಿಪಾಲ: ಈಶ್ವರ ನಗರದ ನಗರಸಭೆ ರೇಚಕದ ಬಳಿ ಹಳೆಯ ರಸ್ತೆಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಪಕ್ಕದ ಮೋರಿಗೆ ಬಿದ್ದ ಘಟನೆ ಅ.27 ಬೆಳಗ್ಗೆ ನಡೆದಿದೆ. ಉಡುಪಿಯಿಂದ ಕುದುರೆಮುಖಕ್ಕೆ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ. ಕಾರು ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಇಲ್ಲಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿ ಅಡ್ಡವಾಗಿ ರಸ್ತೆ ಆಗೆದಿದ್ದು ಮತ್ತೆ ಹೊಂಡ ಬಿದ್ದಿದೆ, ರಸ್ತೆಯ ಸುತ್ತಮುತ್ತ ಹೊಂಡ ಇರುವುದರಿಂದ ವಾಹನ ಚಾಲಕರು ಅತ್ತಿಂದಿತ್ತ ಚಲಿಸಿ ನಿಯಂತ್ರಣ ತಪ್ಪಿ ಅಪಘಾತವು ದಿನನಿತ್ಯ ಆಗುವಂತಾಗಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
* ಮಂಗಳೂರು : ಪೊಲೀಸ್ ಹೆಸರಲ್ಲಿ ಕರೆ ಮಾಡಿ 50 ಲ.ರೂ. ವಂಚನೆ
ಮಂಗಳೂರು: ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಕರೆ ಮಾಡಿ ವ್ಯಕ್ತಿಯೋರ್ವರಿಂದ 50 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ. ದೂರುದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ಅತನನ್ನು ಮಹಾರಾಷ್ಟ್ರದ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿನಯ ಕುಮಾರ ಎಂದು ಪರಿಚಯಿಸಿಕೊಂಡಿದ್ದ. ಕಿರುಕುಳದ ಬಗ್ಗೆ ನಿಮ್ಮ ಮೇಲೆ ದೂರು ದಾಖಲಾಗಿದ್ದು ಠಾಣೆಗೆ ಬರಬೇಕು ಎಂದು ತಿಳಿಸಿದ. ಆಗ ದೂರುದಾರರು ತಾನು ಠಾಣೆಗೆ ಬರುವುದಿಲ್ಲ ಎಂದಾಗ, ಮೇಲಧಿಕಾರಿಗಳು ಕರೆ ಮಾಡುತ್ತಾರೆ ಎಂದ. ಬಳಿಕ ಆಕಾಶ ಕುಲ್ಲಹಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ತಾನು ಸಿಬಿಐನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ. ನರೇಶ್ ಗೋಯೆಲ್ ಎಂಬವರ ಮನೆಯನ್ನು ಜಪ್ತಿ ಮಾಡುವಾಗ ನಿಮ್ಮ ಎಟಿಎಂ ಕಾರ್ಡ್ ಸಿಕ್ಕಿದೆ ಎಂದು ಹೇಳಿದ್ದ.
* ಸುಳ್ಯ: ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿಯ ಬಂಧನ!
ಸುಳ್ಯ: ಸುಳ್ಯದಲ್ಲಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ರಾಘವನ್ ಕೆದೀಶ್ವರನ್ ಆಲಿಯಾಸ್ ಕೋಳಿ ಕರಣ್ ಬಂಧಿತ ಆರೋಪಿ. ಕಳ್ಳತನ ಪ್ರಕರಣ ವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದು ಸುಳ್ಯ ಪೊಲೀಸ್ ಠಾಣೆಗೆ ಬೇಕಾಗಿದ್ದ ಅರೊಪಿಯನ್ನು ಕೆಲವು ದಿನಗಳ ಹಿಂದೆ ಪೊಲೀಸರು ಬಂಧಿಸಿ ಕರೆ ತಂದ ಸಂದರ್ಭದಲ್ಲಿ ಸುಳ್ಯದ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಪೊಲೀಸರು ತಮಿಳುನಾಡಿನ ಸತ್ಯಮಂಗಲ ಎಂಬಲ್ಲಿಂದ ಬಂಧಿಸಿದ್ದರು.