- ಈಜಲು ಹೋದ ನಾಲ್ವರು ನೀರುಪಾಲು
ಮೂಡುಬಿದಿರೆ: ಮದುವೆಗೆ ಬಂದು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆ ಶಾಂಭವಿ ನದಿಯಲ್ಲಿ ಈಜಲು ಹೋಗಿ ನಾಲ್ವರು ನೀರು ಪಾಲಾದ ದಾರುಣ ಘಟನೆ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಬಳಿ ಮಂಗಳವಾರ ಸಂಭವಿಸಿದೆ.
ಮೃತರನ್ನು ಮಾಮಂಜೂರಿನ ಮೂಡುಶೆಡ್ಡೆ ನಿಖಿಲ್(18), ಅರ್ಶಿತಾ(20), ವೇಣೂರಿನ ಸುಬಾಸ್(19) ಹಾಗೂ ಬಜ್ಪೆ ಪೆರಾರದ ರವಿ(30) ಎಂದು ಗುರುತಿಸಲಾಗಿದೆ. ಸ್ಥಾಲದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೂಡುಬಿದಿರೆಯ ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ವಿವಾಹ ಸಮಾರಂಭಕ್ಕೆ ಬಂದಿದ್ದರು. ಮದುವೆಗೆ ಬಂದಿದ್ದ ಇವರು ಶಾಂಭವಿ ನದಿಯಲ್ಲಿ ಈಜಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಮೂಡಬಿದಿರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನಾದರೂ ಎಚ್ಚರ. ನದಿ, ಕೆರೆ ನೀರಲ್ಲಿ ಈಜಲು ಹೋಗಿ ಜೀವ ಕಳೆದುಕೊಳ್ಳಬೇಡಿ.