ಸಮುದ್ರದಲ್ಲಿ ತೇಲಿ ಬಂತು ನೂಡಲ್ಸ್ ಮಾದರಿ ವಸ್ತು!
– ಮಲ್ಪೆ ಸೇರಿ ಉಡುಪಿ ಜಿಲ್ಲೆಯ ಸುಮಾರು 15 ಕಿ.ಮೀ. ಕಡಲ ತೀರದಲ್ಲಿ ವಿಚಿತ್ರ ವಸ್ತು ಪತ್ತೆ!
– ನಿಧಿಗಾಗಿ ಮಧ್ಯರಾತ್ರಿ ಹುಡುಕಾಟ!
– 25 ಅಡಿ ಆಳದ ಗುಂಡಿ ತೆಗೆದ ದುಷ್ಕರ್ಮಿಗಳು
ರಾಜ್ಯದಲ್ಲಿ ಎರಡು ಘಟನೆಗಳು ಕುತೂಹಲಕ್ಕೆ ಕಾರಣವಾಗಿವೆ. ಒಂದು, ಮಲ್ಪೆ ಸೇರಿ ಉಡುಪಿ ಜಿಲ್ಲೆಯ ಸುಮಾರು 15 ಕಿ.ಮೀ. ಕಡಲ ತೀರದಲ್ಲಿ ನೂಡಲ್ಸ್ ಹೋಲುವ ವಿಚಿತ್ರ ವಸ್ತು ಪತ್ತೆಯಾಗಿದೆ. ಇನ್ನೊಂದು ಘಟನೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಕೆಸರಿಕೆ ಗ್ರಾಮದಲ್ಲಿ ನಿಧಿಗಾಗಿ ಹುಡುಕಾಟ ನಡೆದಿದೆ.
ನಿಧಿ ಹುಡುಕಿ ಓಡಿ ಹೋದರು!:
ನಿಧಿ ಹುಡುಕಲೆಂದು ದುಷ್ಕರ್ಮಿಗಳ ತಂಡವು ಚಿಕ್ಕಮಗಳೂರು ತಾಲೂಕಿನ ಅಣೂರು ಸಮೀಪದ ಕೆಸರಿಕೆ ಗ್ರಾಮದಲ್ಲಿ
ನಿಧಿಗಾಗಿ ಮಧ್ಯರಾತ್ರಿ 25 ಅಡಿ ಆಳದ ಗುಂಡಿ ತೆಗೆದಿದೆ.
ಉಡುಪಿ ನೋಂದಣಿ ಸಂಖ್ಯೆ ಇರುವ ಎರಡು ಕಾರಿನಲ್ಲಿ ಬಂದಿದ್ದ ನಿಧಿ ಶೋಧದ ತಂಡವು ಕೆಸರಿಕೆ ಗ್ರಾಮದಲ್ಲಿ ಪೂಜೆ ನಡೆಸಿದೆ. ಮಧ್ಯರಾತ್ರಿ ಸುಮಾರು 15 ಅಡಿ ಅಗಲ, 25 ಅಡಿ ಆಳ ಗುಂಡಿ ತೋಡಿದ ದುಷ್ಕರ್ಮಿಗಳು
ನಿರ್ಜನ ಪ್ರದೇಶದಲ್ಲಿ ಪೂಜೆ ನಡೆಸಿದ್ದಾರೆ. ನಿಧಿಗಾಗಿ ಶೋಧ ನಡೆಸಿದ ಸ್ಥಳದಲ್ಲಿ ಅರಿಶಿಣ-ಕುಂಕುಮ, ಕುಂಬಳಕಾಯಿ, ಕೋಳಿ, ಕಾಯಿ, ಸೇರಿ ವಿವಿಧ ವಸ್ತುಗಳು ಪತ್ತೆಯಾಗಿದೆ. ನಿರ್ಜನ ಪ್ರದೇಶದಲ್ಲಿ ಬೆಳಕು ಕಂಡು ಗ್ರಾಮಸ್ಥರು ಸ್ಥಳಕ್ಕೆ ತೆರಳಿದ್ದಾರೆ. ಗ್ರಾಮಸ್ಥರು ಸ್ಥಳಕ್ಕೆ ಬರುತ್ತಿದ್ದಂತೆ ಕಿಡಿಗೇಡಿಗಳು ಓಡಿ ಹೋಗಿದ್ದಾರೆ.
ಬೀಚಿನಲ್ಲಿ ಪತ್ತೆಯಾಯ್ತು ನೂಡಲ್ಸ್ ಮಾದರಿಯ ವಸ್ತು!
ಉಡುಪಿ ಜಿಲ್ಲೆಯ ಮಲ್ಪೆ ಕಡಲತೀರದಲ್ಲಿ ನೂಡಲ್ಸ್ ಮಾದರಿಯ ವಸ್ತುಗಳು ಪತ್ತೆಯಾಗಿವೆ. ಬಿಪರ್ ಜೋಯ್ ಚಂಡ ಮಾರುತದ ಬೆನ್ನಲ್ಲೇ ಈ ವಿಚಿತ್ರ ವಸ್ತುಗಳು ಪತ್ತೆಯಾಗಿರುವುದು ಮೀನುಗಾರರ ಆತಂಕಕ್ಕೆ ಕಾರಣವಾಗಿತ್ತು. ಈ ಕುರಿತು ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದರು. ಅಲ್ಲದೇ ಇದೀಗ ಮಾದರಿಯನ್ನು ಹೆಚ್ಚಿನ ಅಧ್ಯಯನಕ್ಕಾಗಿ ಮಾದರಿಯನ್ನು ಗೋವಾಕ್ಕೆ ರವಾನಿಸಿದ್ದಾರೆ.
ಮಲ್ಪೆ ಮಾತ್ರವಲ್ಲದೇ ಉಡುಪಿ ಜಿಲ್ಲೆಯ ಸುಮಾರು 15 ಕಿ.ಮೀ. ಕಡಲ ತೀರದಲ್ಲಿ ವ್ಯಾಪಿಸಿಕೊಂಡಿರುವ ನೂಡಲ್ಸ್ ಮಾದರಿಯ ಈ ವಸ್ತುಗಳಿಂದ ಯಾವುದೇ ಹಾನಿಯಿಲ್ಲ ಎಂದು ಮೀನುಗಾರಿಕಾ ಜಂಟಿ ನಿರ್ದೇಶಕ ವಿವೇಕ್ ಅವರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ವಸ್ತುಗಳು ಪೋಷಕಾಂಶಗಳಿಂದ ಸಮೃದ್ದವಾಗಿದ್ದು, ಇವುಗಳನ್ನು ಗುಂಡಿಯನ್ನು ಹೂಳುವ ಬದಲು ಗೊಬ್ಬರವಾಗಿ ಪರಿವರ್ತಿಸಬಹುದು. ಅಲ್ಲದೇ ಸಮುದ್ರಕ್ಕೆ ತಳ್ಳುವುದರಿಂದ ಇತರ ಜೀವಿಗಳಿಗೆ ಆಹಾರವಾಗಲಿವೆ ಎಂದಿದ್ದಾರೆ.
ಕಡಲತೀರದಲ್ಲಿ ಪತ್ತೆಯಾಗಿರುವ ಈ ವಸ್ತುಗಳನ್ನು ಹೆಚ್ಚಿನ ಸಂಶೋಧನೆಗಾಗಿ ಗೋವಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ, ಕೊಚ್ಚಿಯಲ್ಲಿರುವ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿ ಮತ್ತು ಕೊಚ್ಚಿಯ ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ಗೆ ಕಳುಹಿಸಿಕೊಡಲಾಗಿದೆ. ಈಗಾಗಲೇ ಮಂಗಳೂರಿನ ಮೀನುಗಾರಿಕಾ ಕಾಲೇಜು ಮತ್ತು ಮಂಗಳೂರಿನ ಕೇಂದ್ರೀಯ ಸಾಗರ ಮೀನುಗಾರಿಕಾ ಶಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ಈಗಾಗಲೇ ಪರಿಶೀಲನೆಯನ್ನು ನಡೆಸಿದೆ. ಅಲ್ಲದೇ ಈ ವಸ್ತುಗಳು ಸಮುದ್ರ ಜೀವಿಗಳ ಚಿಪ್ಪುಗಳಾದ್ದಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023