3ನೇ ಬಾರಿ ಪ್ರಧಾನಿಯಾಗಿ ಮೋದಿ: ಕರಾವಳಿಯಲ್ಲಿ ಸಂಭ್ರಮ!
– ಅಭಿಮಾನಿ ಬಳಗದಿಂದ ಇಡೀ ದಿನ ಪ್ರಕೃತಿ ಬಸ್ ಉಚಿತ ಸೇವೆ
– ಕಟೀಲ್ – ಮಂಗಳೂರು ನಡುವೆ ಸಂಚರಿಸುವ ಪ್ರಕೃತಿ ಟ್ರಾವೆಲ್ಸ್
– ಮಂಗಳೂರು ಸೇರಿ ಕರಾವಳಿಯಲ್ಲಿ ಎಲ್ಲೆಡೆ ವಿಜಯೋತ್ಸವ
NAMMUR EXPRESS NEWS
ಮಂಗಳೂರು: ಮೂರನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಕರಾವಳಿಯ ಎಲ್ಲೆಡೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿದ ಕಾರ್ಯಕರ್ತರು ಮೋದಿ ಪರ, ಬಿಜೆಪಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಮಂಗಳೂರಲ್ಲಿ ಎಲ್ ಇ ಡಿ ಪರದೆ: ರಾತ್ರಿ ಸಂಭ್ರಮ
ನರೇಂದ್ರ ಮೋದಿಜೀ ಯವರ ಪ್ರಮಾಣ ವಚನ ಕಾರ್ಯಕ್ರಮವನ್ನು pvs ಬಿಜೆಪಿ ಜಿಲ್ಲಾ ಕಚೇರಿ ಬಳಿ L E D ಪರದೆಯ ಮೂಲಕ ವೀಕ್ಷಿಸಲಾಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ, ದಕ್ಷಿಣ ಮಂಡಲ ಅಧ್ಯಕ್ಷರಾದ ರಮೇಶ್ ಕಂಡೆಟ್ಟು ಮೇಯರ್ ಸುಧೀರ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕರಾದ ಡಿ. ವೇದವ್ಯಾಸ್ ಕಾಮತ್, ಪಕ್ಷದ ಪ್ರಮುಖರು, ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಪ್ರಕೃತಿ ಬಸ್ಸಿನಿಂದ ಜನತೆಗೆ ಫ್ರೀ ಸೇವೆ!
ಪ್ರಕೃತಿ ಬಸ್ಸಿನ ಸಿಬ್ಬಂದಿಗಳಾದ ಪ್ರಸಾದ್ ಕುಲಾಲ್ ಮತ್ತು ತಿಲಕ್ ಸೇರಿದಂತೆ ಇನ್ನಿತರ ಅಭಿಮಾನಿಗಳಿಂದ ಕಟೀಲ್, ಕಿನ್ನಿಗೋಳಿ,ಕಾವೂರ್, ಪದವಿನಂಗಡಿ, ಮಂಗಳೂರು ನಡುವೆ ಸಂಚರಿಸುವ ಪ್ರಕೃತಿ ಟ್ರಾವೆಲ್ಸ್ ಬಸ್ಸು ಇಂದು ಇಡೀ ದಿನ ಉಚಿತ ಸೇವೆ ನೀಡಿದೆ