ಸಿನಿಮಾ ಮಾದರಿಯಲ್ಲಿ ದರೋಡೆ!
– ಕೋಟಿ ಕೋಟಿ ಹಣ ದೋಚಿದ ಖದೀಮರು ಅರೆಸ್ಟ್!
– ವಿಟ್ಲದ ಅಡ್ಯನಡ್ಕ ಬ್ಯಾಂಕಿನಿಂದ ದರೋಡೆ
– ಮೂವರು ಆರೋಪಿಗಳ ಸೆರೆ: ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ಪ್ರಕರಣ!
NAMMUR EXPRESS NEWS
ವಿಟ್ಲ: ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಗೆ ನುಗ್ಗಿ ಕೋಟ್ಯಾಂತರ ಮೌಲ್ಯದ ನಗದು ಹಾಗೂ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣ ಮಾಡಿದ ನಾಲ್ಕು ಮಂದಿ ಆರೋಪಿಗಳ ಪೈಕಿ ಮೂವರನ್ನು ಬಂಧಿಸಿದ್ದು, ಇವರನ್ನು ಸೋಮವಾರ ಸ್ಥಳ ಮಹಜರಿಗೆ ವಿಟ್ಲ ಪೊಲೀಸರು ಕರೆದುಕೊಂಡು ಬಂದಿದ್ದರು. ಬಂಧಿತ ಆರೋಪಿಗಳಾದ ಬಂಟ್ವಾಳ ತಾಲೂಕು ಬಿಮೂಡಾ ಗ್ರಾಮದ ನಿವಾಸಿ ಮಹಮ್ಮದ್ ರಫೀಕ್(35), ಮಂಜೇಶ್ವರ ತಾಲೂಕು ನಿವಾಸಿ ಇಬ್ರಾಹಿಂ ಕೆಲಂದರ್(41) ಮಂಜೇಶ್ವರ ತಾಲೂಕು ಬಾಯಾರು ಗ್ರಾಮದ ಗಾಳಿಯಡ್ಕ ನಿವಾಸಿ ದಯಾನಂದ ಎಸ್ (37), ಎಂದು ಗುರುತಿಸಲಾಗಿದೆ. ಕೆಲದಿನಗಳ ಹಿಂದೆಯೇ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರೂ, ಮಾ.10ರಂದು ಆರೋಪಿಗಳ ಬಂಧನದ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಕದ್ದಿದ್ದು ಹೇಗೆ? ದೋಚಿದ ದುಡ್ಡು ಎಸೆದಿದ್ದರು!
ಬ್ರಿಜಾ ಕಾರಿನ ಮೂಲಕ ಆಗಮಿಸಿದ್ದ ಕಳ್ಳರು ಬ್ಯಾಂಕ್ ಕಿಟಕಿಯ ಸರಳು ತುಂಡರಿಸಿ, ಸೇಫ್ ಲಾಕರ್ ನ್ನು ಗ್ಯಾಸ್ ಕಟ್ಟರ್ ಮೂಲಕ ಕೊರೆದು ಲಾಕರ್ ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ದೋಚಿದ್ದರು. ಆ ಬಳಿಕ ಕದ್ದ ಮಾಲನ್ನು ನಾಲ್ಕು ಪಾಲು ಮಾಡಿಕೊಂಡ ಕಳ್ಳರು ಒಂದು ಪಾಲನ್ನು ಬಾಯಾರಿನ ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಜಂಕಿಲ ಸಮೀಪ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ಅಡಗಿಸಿಟ್ಟಿರುವ ಬಗ್ಗೆವಿಚಾರಣೆ ವೇಳೆ ಬಹಿರಂಗ ಪಡಿಸಿದ್ದರು
ವೆಲ್ಡಿಂಗ್ ಕೆಲಸ ಮಾಡಿದವನೇ ಪ್ಲಾನರ್!
ಕೆಲವು ವರ್ಷಗಳಿಂದ ವೆಲ್ಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಸೇಫ್ ಲಾಕರ್ ತುಂಡರಿಸುವ ಮೂಲಕ ಕಳ್ಳತನ ನಡೆಸಲು ಸಹಕರಿಸಿದ್ದ. ಬಂಧಿತರಲ್ಲಿಇನ್ನಿಬ್ಬರು ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ವಿಟ್ಲ ಠಾಣೆಯ ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.