ಕರಾವಳಿಯಲ್ಲಿ ನಾಗರ ಪಂಚಮಿ ಸಂಭ್ರಮ
– ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ವಿಶೇಷ ಆಚರಣೆ
– ಹೂವು, ಹಣ್ಣು, ಹಾಲಿಗೆ ಡಿಮ್ಯಾಂಡ್!
NAMMUR EXPRESS NEWS
ನಾಗನಿಗೂ ಕರಾವಳಿಗೂ ಅವಿನಾಭಾವ ಸಂಬಂಧ. ನಾಗದೇವರ ಆರಾಧನೆ ಹಲವು ಭಾಗಗಳಲ್ಲಿ ಹಲವು ವಿಧಗಳಲ್ಲಿ ನಡೆಯುತ್ತದೆ. ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ನಾಗನಿಗೆ ವಿಶೇಷ ಸ್ಥಾಮಾನವಿದೆ. ಕರಾವಳಿಯ ಎಲ್ಲೆಡೆ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಮುಂಜಾನೆಯಿಂದಲೇ ಆಚರಣೆ ಮಾಡಲಾಗುತ್ತಿದೆ. ನಾಗರ ಕಟ್ಟೆ, ನಾಗ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಉಡುಪಿ, ದಕ್ಷಿಣ ಕನ್ನಡದ ಹೆಚ್ಚಿನ ಮನೆಗಳಲ್ಲಿ ನಾಗಬನವಿರುತ್ತದೆ. ಈ ದಿನ ನಾಗನಿಗೆ ತಂಬಿಲ, ನಾಗನ ಕಲ್ಲಿಗೆ ಹಾಲೆರೆಯುವ ಸಂಪ್ರದಾಯವಿದೆ. ತುಳುನಾಡಿನಲ್ಲಿ ನಾಗರ ಪಂಚಮಿಯಂದು ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಸೇರಿದಂತೆ ಹಲವು ಕಡೆ ನಾಗಾರಾಧನೆಗೆ ಹೆಸರುವಾಸಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆಯಲಿದೆ. ಹೀಗೆ ಹತ್ತು ಹಲವು ವಿಶೇಷ ಪೂಜೆ ಸಲ್ಲಿಸಿ ಸರ್ಪ ದೇವನ ಕೃಪೆಗೆ ಪಾತ್ರರಾಗುತ್ತಾರೆ.
ಕುಕ್ಕೆಯಲ್ಲಿ ವಿಶೇಷ ಪೂಜೆ
ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯದ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಮಣ್ಯದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.