ನಕ್ಸಲ್ ನಾಯಕ ವಿಕ್ರಂ ಗೌಡ ಗುಂಡಿಗೆ ಬಲಿ: ಮತ್ತೊಬ್ಬರು ಸಾವು!?
– ಹೆಬ್ರಿ ಸೀತಂಬೈಲು ಬಳಿ ಘಟನೆ: ರಾಜ್ಯದ ದೊಡ್ಡ ಕಾರ್ಯಾಚರಣೆ
– ಇನ್ನು ಸ್ಪಷ್ಟವಾಗದ ಮಾಹಿತಿ: ಒಟ್ಟು ಮೂವರಿಗೆ ಗುಂಡೇಟು!
NAMMUR EXPRESS NEWS
ಉಡುಪಿ/ ಹೆಬ್ರಿ: ನಕ್ಸಲ್ ಕಮಾಂಡರ್ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಲಾಗಿದೆ. ಉಡುಪಿ ಜಿಲ್ಲೆಯ ಸೀತಂಬೈಲು ಪೀತಬೈಲ್ ಅರಣ್ಯದಲ್ಲಿ ನಡೆದ ಕೂಂಬಿಂಗ್ ವೇಳೆ ವಿಕ್ರಂ ಗೌಡನ ಎನ್ಕೌಂಟರ್ ಮಾಡಲಾಗಿದೆ ಎನ್ನಲಾಗಿದೆ.
ಶೂಟೌಟ್ನಲ್ಲಿ ನಕ್ಸಲ್ ಸುಂದರಿ ಮತ್ತು ವನಜಾಕ್ಷಿ ಗಾಯಗೊಂಡಿರುವ ಸಾಧ್ಯತೆ ಇದೆ ಎಂಬ ವದಂತಿ ಇದೆ. ಇನ್ನು ಇನ್ನೊಬ್ಬರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಗುಂಡಿನ ಚಕಮಕಿ: ಇನ್ನಿಬ್ಬರಿಗೆ ಗಾಯ
ಹೆಬ್ರಿಯ ಸೀತಂಬೈಲ್ನಲ್ಲಿ ತಡರಾತ್ರಿ ಎಎನ್ಎಫ್ ಸಿಬಂದ್ದಿ ಹಾಗೂ ನಕ್ಸಲ್ ತಂಡದ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಾಯಕ ವಿಕ್ರಮ್ ಗೌಡನನ್ನು ಎನ್ಕೌಂಟರ್ ಮಾಡಲಾಗಿದೆ. ಇದೀಗ ಬಂದ ಕೆಲ ಮೂಲಗಳ ಮಾಹಿತಿ ಪ್ರಕಾರ ನಕ್ಸಲ್ ಸುಂದರಿ ಮತ್ತು ವನಜಾಕ್ಷಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲವಾದರೂ, ಬಲ್ಲ ಮೂಲಗಳ ಪ್ರಕಾರ ,ಸೀತಂಬೈಲ್ ಗೆ ರೇಷನ್ ಸಂಗ್ರಹಕ್ಕಾಗಿ ಐವರು ನಕ್ಸಲರು ಬಂದಿದ್ದ ವೇಳೆ ಎಎನ್ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂಗೌಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನು ಉಳಿದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪರಾರಿಯಾದವರ ಪೈಕಿ ನಕ್ಸಲ್ ಸುಂದರಿ ಹಾಗು ವನಜಾಕ್ಷಿಗೆ ಗುಂಡೇಟು ಬಿದ್ದಿದೆ ಎಂದು ಹೇಳಲಾಗಿದೆ..ಇನ್ನಷ್ಟು ಮಾಹಿತಿ ಇಲಾಖೆಯಿಂದ ಬರಬೇಕಿದೆ.
ಕೇರಳದಿಂದ ಕರ್ನಾಟಕಕಕ್ಕೆ ಬಂದಿದ್ದ ತಂಡ!
ಕೇರಳದಲ್ಲಿ ಕಾರ್ಯಾಚರಣೆ ಚುರುಕು ಪಡೆದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ನಕ್ಸಲ್ ಟೀಂ ಎಂಟ್ರಿಕೊಟ್ಟಿತ್ತು. ನಕ್ಸಲರ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿತ್ತು. ಕಳೆದ ಮೂರು ದಿನಗಳಿಂದ ಮಾರುವೇಷ ತೊಟ್ಟು ನಕ್ಸಲ್ ನಿಗ್ರಹ ಪಡೆ ಹೊಂಚು ಹಾಕಿ ಕೂತಿತ್ತು. ಸೋಮವಾರ ರಾತ್ರಿ 5 ಮಂದಿ ನಕ್ಸಲರು ಸೀತಂಬೈಲು ಸಮೀಪ ಪತ್ತೆಯಾಗಿದ್ದರು. ರೇಷನ್ ಸಂಗ್ರಹಕ್ಕೆ ಬಂದಾಗ ಎಎನ್ಎಫ್ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ನಕ್ಸಲರಿಂದ ಪೊಲೀಸ್ ತಂಡದ ಮೇಲೆ ಗುಂಡಿನ ದಾಳಿಯಾಗಿದೆ. ದಟ್ಟಾರಣ್ಯದಲ್ಲಿ ರಾತ್ರಿ ನಡೆದ ಗುಂಡಿನ ಚಕಮಕಿ ವೇಳೆ ವಿಕ್ರಮ್ ಗೌಡ ಸಾವನ್ನಪ್ಪಿದ್ದಾನೆ. ಮಿಕ್ಕುಳಿದವರು ಪರಾರಿಯಾಗಿದ್ದಾರೆ. ನಕ್ಸಲರ ತಂಡದಲ್ಲಿ ಕೇರಳದ ಯುವತಿಯೋರ್ವಳು ಇರುವ ಮಾಹಿತಿ ಇದೆ. ಇನ್ನೊಬ್ಬರು ಮೃತರಾಗಿದ್ದಾರೆ ಎನ್ನಲಾಗಿದೆ.
ನಕ್ಸಲ್ ವಿಕ್ರಂ ಗೌಡ ಯಾರು?
ವಿಕ್ರಮ್ ಗೌಡ ಉಡುಪಿಯ ಹೆಬ್ರಿ ತಾಲೂಕಿನ ಕೂಡ್ಲ ಬಳಿ ಇರುವ ನಾಡ್ವಾಲು ಗ್ರಾಮದ ನಿವಾಸಿ. ಈತ ಕಾರ್ಮಿಕ ಸಂಘಟನೆಯಿಂದ ನಕ್ಸಲನಾಗಿ ಕಾಡು ಸೇರಿದ್ದ. ಕರ್ನಾಟಕ ಮಾತ್ರವಲ್ಲದೇ, ಕೇರಳ, ತಮಿಳುನಾಡುವಿನಲ್ಲಿ ಸಕ್ರಿಯನಾಗಿದ್ದ. ಮೂರು ಬಾರಿ ಕರ್ನಾಟಕದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ. ಸುಮಾರು 20 ಪ್ರಕರಣಗಳಲ್ಲಿ ದಿ ಮೋಸ್ಟ್ ವಾಂಟೆಂಡ್ ಆಗಿದ್ದ. ನಕ್ಸಲ್ ನಾಯಕ ಸಾಕೇತ್ ರಾಜನ್ ಗರಡಿಯಲ್ಲಿ ವಿಕ್ರಮ್ ಗೌಡ ಪಳಗಿದ್ದ. ಸಾಕೇತ್ ರಾಜನ್ ಕಾಲದಲ್ಲಿ ನಕ್ಸಲ್ ಚಟುವಟಿಕೆಗಳು ಉತ್ತುಂಗದಲ್ಲಿದ್ದವು. 2005 ಫೆಬ್ರವರಿ 5ರಂದು ಮೆಣಸಿನ ಹಾಡ್ಯದಲ್ಲಿ ಸಾಕೇತ್ ರಾಜನ್ನನ್ನು ಎನ್ ಕೌಂಟರ್ ಮಾಡಲಾಗಿದೆ. ಸಾಕೇತ್ ರಾಜನ್ ಜೊತೆಯಿದ್ದ ವಿಕ್ರಮ್ ಗೌಡ ಅಲ್ಲಿಂದ ತಪ್ಪಿಸಿಕೊಂಡಿದ್ದ. ಬಳಿಕ ವಿಕ್ರಂಗೌಡ ನಕ್ಸಲ್ ತಂಡವನ್ನು ಮುನ್ನಡೆಸ್ತಿದ್ದ. ಇತ್ತೀಚಿಗೆ ಕರ್ನಾಟಕ ಕಾರ್ಕಳ, ಶೃಂಗೇರಿ, ಕೊಪ್ಪ ಭಾಗದಲ್ಲಿ ಈ ತಂಡ ಕಾಣಿಸಿಕೊಂಡಿತ್ತು.
ವಿಕ್ರಂಗೌಡ ಕಳೆದ 20 ವರ್ಷಗಳಿಂದ ನಕ್ಸಲೈಟ್ ಆಗಿ ತಲೆಮರೆಸಿಕೊಂಡಿದ್ದ. 2016ರಲ್ಲಿ ಕೇರಳದ ನೀಲಾಂಬುರ್ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ನಕ್ಸಲ್ ನಿಗ್ರಹ ಪಡೆಯೊಂದಿಗೆ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದರು. ಆಗಲೂ ವಿಕ್ರಂ ಗೌಡ ತಲೆಮರೆಸಿಕೊಂಡಿದ್ದ. ಕೇರಳದಲ್ಲಿ ಚಟುವಟಿಕೆಗಳನ್ನು ನಡೆಸ್ತಿದ್ದ ವಿಕ್ರಂಗೌಡ ಕರ್ನಾಟಕಕ್ಕೆ ಆಗಮಿಸಿದ್ದ. ಹೆಬ್ರಿ-ಕಾರ್ಕಳ ಪ್ರದೇಶದಲ್ಲಿ ನಕ್ಸಲ್ ಓಡಾಟ ಹೆಚ್ಚಾಗಿತ್ತು.