ಕರಾವಳಿ ಟಾಪ್ ನ್ಯೂಸ್
ಪೊದೆಯಲ್ಲಿ ಪತ್ತೆಯಾದ ಒಂದು ದಿನದ ಹೆಣ್ಣು ಮಗು!
– ಮೂಡುಬಿದಿರೆ: ಕಟ್ಟಡದಿಂದ ಕೆಳಗೆ ಬಿದ್ದು ಯುವಕ ಸಾವು
– ಕಾಸರಗೋಡು: 50 ಲಕ್ಷ ರೂ. ದರೋಡೆ ಪ್ರಕರಣ: ಆರೋಪಿ ಅರೆಸ್ಟ್!
– ಬಂಟ್ವಾಳ: ಮೆಕ್ಕಾದ ಬಗ್ಗೆ ಅವಹೇಳನಕಾರಿ ಪೋಸ್ಟ್: ಬಂಧನ
– ಕಾರ್ಕಳ: ಆನ್ಲೈನ್ನಲ್ಲಿ ವಂಚನ: ಒಡಿಶಾದಲ್ಲಿ ಆರೋಪಿ ಸಿಕ್ಕಿಬಿದ್ದ!
NAMMUR EXPRESS NEWS
ಕಾರವಾರ: ಒಂದು ದಿನದ ನವಜಾತ ಶಿಶುವನ್ನು ದುಷ್ಕರ್ಮಿಗಳು ಪೊದೆಯಲ್ಲಿ ಬಿಸಾಕಿ ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ವಿಜಯನಗರದಲ್ಲಿ ನಡೆದಿದೆ.
ಜೋಪಡಿಯೊಂದರ ಟಾಯ್ಲೆಟ್ ಬಳಿಬೆಳಗ್ಗೆ 5 ಗಂಟೆ ಸುಮಾರಿಗೆ ನವಜಾತ ಶಿಶು ಅಳುತ್ತಿರುವ ಸದ್ದು ಕೇಳಿದೆ. ಪಕ್ಕದ ಮನೆಯವರದ್ದೆಂದು ಜೋಪಡಿ ನಿವಾಸಿಗಳು ಸುಮ್ಮನಾಗಿದ್ದಾರೆ. ಆದರೆ ಬೆಳಗ್ಗೆ ಎದ್ದು ಶೌಚಾಲಯಕ್ಕೆ ಹೋಗುವಾಗ ಪೊದೆಯಲ್ಲಿ ಮಗು ಬಿಸಾಕಿರುವುದು ಕಾಣಿಸಿದೆ. ಕರುಳು ಬಳಳಿಯನನು ಕೂಡ ಕತ್ತರಿಸದೇ ಪೊದೆಯಲ್ಲಿ ಬಿಸಾಕಿರುವ ಪಾಪಿಗಳು. ಹೆಣ್ಣುಮಗುವಾಗಿದ್ದರಿಂದ ಬಿಸಾಡಿ ಹೋದ್ರ ಅಥವಾ ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗು ಬಿಟ್ಟು ಹೋಗಿರಬಹುದಾ ಸ್ಥಳೀಯರು ಸಂಶಯ ವ್ಯಕ್ತಪಡಿಸಿದಾರೆ. ಅದೃಷ್ಟವಶಾತ್ ಬೀದಿನಾಯಿಗಳು ಅತ್ತ ಸುಳಿದಿಲ್ಲ. ಅಳುತ್ತಿರುವ ಮಗುವನ್ನು ಕಂಡ ಕೂಡಲೇ ಸ್ಥಳೀಯರನ್ನು ಕರೆಯಿಸಿ ಮಗುವಿನ ರಕ್ಷಣೆ ಮಾಡಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಸ್ಥಳೀಯರು, ಆಶಾ ಕಾರ್ಯಕರ್ತರು ಹಾಗೂ ಅಧಿಕಾರಿಗಳ ಸಹಾಯದಿಂದ ಆ್ಯಂಬುಲೆನ್ಸ್ ಮೂಲಕ ಮಗುವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ ಕಾರಣ ಅಪಾಯದಿಂದ ಪಾರಾಗಿರುವ ಮಗು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗು ಆರೋಗ್ಯವಾಗಿದೆ.
ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡುಬಿದಿರೆ: ಕಟ್ಟಡದಿಂದ ಕೆಳಗೆ ಬಿದ್ದು ಯುವಕ ಸಾವು
ಮೂಡುಬಿದಿರೆ: ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯುವಕ ಅಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ವಿದ್ಯಾಗಿರಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಸಾಂಬಾಲ್ ಜಿಲ್ಲೆಯ ರಾಯೀಸ್ ಅಹಮ್ಮದ್ ಎಂಬವರ ಪುತ್ರ ಸಮೀರ್ (19) ಮೃತಪಟ್ಟ ಯುವಕ.ಸಮೀರ್ ಕಳೆದ ಎರಡು ತಿಂಗಳ ಹಿಂದೆ ಆಳ್ವಾಸ್ ಸಂಸ್ಥೆಗೆ ವೆಲ್ಡಿಂಗ್ ಕೆಲಸಕ್ಕೆ ಸೇರಿಕೊಂಡಿದ್ದು ಮಂಗಳವಾರ ಶಾಂಭವಿ ಹಾಸ್ಟೆಲ್ ನ 5ನೇ ಮಹಡಿಯ ರೋಪ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಕಾಲುಜಾರಿ ಕೆಳಗೆ ಬಿದ್ದಿದ್ದು ಈ ಸಂದರ್ಭ ತಲೆ ಮತ್ತು ಕಾಲಿಗೆ ತೀವ್ರ ತರಹದ ಗಾಯಗಳಾಗಿ ಅಧಿಕ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
50 ಲಕ್ಷ ರೂ. ದರೋಡೆ ಪ್ರಕರಣ: ಆರೋಪಿ ಅರೆಸ್ಟ್!
ಕಾಸರಗೋಡು : ಎಟಿಎಂಗೆ ಹಣ ತುಂಬಿಸಲು ತಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆಗೈದ ಪ್ರಕರಣ ಂಬಂಧ ಆೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ತಮಿಳುನಾಡು ತಿರುಟ್ಟಿ ಗ್ರಾಮದ ಮುತ್ತು ಕುಮಾರನ್ (47) ಎಂದು ತಿಳಿದು ಬಂದಿದೆ.ಮೇ 27 ರಂದು ಉಪ್ಪಳದ ಎಕ್ಸ್ಸ್ ಬ್ಯಾಂಕ್ ನ ಎಟಿಎಂ ಗೆ ಹಣ ತುಂಬಿಸಲು ಬಂದಿದ್ದ ಸಂದರ್ಭದಲ್ಲಿ ವ್ಯಾನ್ ನಿಂದ ಹಣ ದರೋಡೆ ಮಾಡಲಾಗಿತ್ತು.
ವಿಶೇಷ ಪೊಲೀಸ್ ತಂಡ ತಿರುಚ್ಚಿರಾಪಳ್ಳಿಯಿಂದ ಆರೋಪಿಯನ್ನು ಬಂಧಿಸಿದ್ದಾರೆ. ಮೂವರ ತಂಡ ಕೃತ್ಯ ನಡೆಸಿರುವುದಾಗಿ ತಿಲಿದು ಬಂದಿದೆ.
ಅಂಚೆ ಕಚೇರಿ ಕಳ್ಳತನ ಪ್ರಕರಣ: ಓರ್ವನ ಸೆರೆ
ಗಂಗೊಳ್ಳಿ: ಅಂಚೆ ಕಚೇರಿ ಕಳ್ಳತನ ಪ್ರಕರಣ ಸಂಬಂಧ ಆರೋಪಿಯೋರ್ವನನ್ನು ಗಂಗೊಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಭಟ್ಕಳದ ಪೌಜಾನ್ ಅಹಮ್ಮದ್(19) ಎಂದು ತಿಳಿದು ಬಂದಿದೆ.ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ಗ್ರಾಮದಲ್ಲಿ ಅಂಚೆ ಕಚೇರಿ ಕಳ್ಳತನ ನಡೆದಿದ್ದು, ಸಿ.ಸಿ ಕ್ಯಾಮರಾದ ಪೂಟೇಜ್ ನ ಆಧಾರದ ಮೇಲೆ ಆರೋಪಿಯ ಪತ್ತೆಯ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಭಟ್ಕಳ ಜಾಲಿ ರಸ್ತೆ ಕ್ರಾಸ್ ಎಂಬಲ್ಲಿ ಪ್ರಕರಣದ ಆರೋಪಿ ಪೌಜಾನ್ ಅಹಮ್ಮದ್ ಹಾಗೂ ಇನ್ನೊರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಆರೋಪಿಯು ಕೃತ್ಯಕ್ಕೆ ಬಳಸಿದ ಟಿ.ವಿ.ಎಸ್ ಮೋಟಾರ್ ಸೈಕಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ: ಮೆಕ್ಕಾದ ಬಗ್ಗೆ ಅವಹೇಳನಕಾರಿ ಪೋಸ್ಟ್: ಬಂಧನ
ಬಂಟ್ವಾಳ: ಮುಸ್ಲಿಂ ಸಮುದಾಯದ ಪವಿತ್ರ ಧಾರ್ಮಿಕ ಕ್ಷೇತ್ರ ಮೆಕ್ಕಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಯುವಕನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಯುವಕನೋರ್ವ ಮೆಕ್ಕಾದ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್ ಮಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣವಾದ ಇಾಗ್ರಾಂ ಖಾತೆಯಲ್ಲಿ ಹಾಕಿದ್ದಾನೆ ಎನ್ನಲಾಗಿದೆ.ಇದರಿಂದ ಮುಸ್ಲಿಂ ಸಮುದಾಯದವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಅಲ್ಲದೇ ಸಮಾಜದಲ್ಲಿ ಧರ್ಮ, ಧರ್ಮಗಳ ಮಧ್ಯೆ ಕೋಮುಭಾವನೆಗಳನ್ನು ಕೆರಳಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಸಂದೇಶವನ್ನು ಸೃಷ್ಟಿಸಿ ರವಾನಿಸಿದ ಯುವಕನ ಮೇಲೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.
ಆನ್ಲೈನ್ನಲ್ಲಿ ವಂಚನ: ಒಡಿಶಾದಲ್ಲಿ ಆರೋಪಿ ಅರೆಸ್ಟ್!
ಉಡುಪಿ: ಕಾರ್ಕಳ ತಾಲೂಕು ಬೆಳ್ಳಣ್ ನಿವಾಸಿಯೊಬ್ಬರಿಗೆ ಆನ್ಲೈನ್ ಮೂಲಕ ವಂಚಿಸಿದ ಒಡಿಶಾದ ಆರೋಪಿಯನ್ನು ಪೊಲೀಸರು ಬ೦ಧಿಸಿದ್ದಾರೆ. ಆನ್ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್ ಠಾಣೆಯ ಪೊಲೀಸರು ಆರೋಪಿ ಒಡಿಶಾದ ವಿಶಾಲ್ ಕೋನಪಾಲ (30) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ 1,56,100 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ವಿದೇಶದಲ್ಲಿ ಉದ್ಯೋಗಿಯಾಗಿರುವ ಉಡುಪಿ ಜಿಲ್ಲೆಯ ಬೆಳ್ಳಣ್ ನಿವಾಸಿ ಪ್ರಶಾಂತ್ ಶೆಟ್ಟಿ ಬೆಳ್ಳಣ್ನ ಯೂನಿಯನ್ ಬ್ಯಾಂಕ್ನಲ್ಲಿ ಎರಡು ಖಾತೆ ಹೊಂದಿದ್ದರು. ಈ ಎರಡೂ ಖಾತೆಗಳಲ್ಲಿ ಪೇಟಿಎಂ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಇದ್ದು ಫೆ.10ರಿಂದ 20ರ ನಡುವೆ, ಯಾರೋ ಅಪರಿಚಿತರು 1,56,100 ರೂ.ಗಳನ್ನು ವರ್ಗಾಯಿಸಿಕೊಂಡು ನಷ್ಟ ಉಂಟು ಮಾಡಿದ್ದರು. ಈ ಬಗ್ಗೆಉಡುಪಿಯ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೆನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ಎಎಸ್ಐ ಉಮೇಶ್ ಜೋಗಿ ಮತ್ತು ಸಿಬ್ಬಂದಿ ನಿಲೇಶ್ ಅವರ ತಂಡ ಒರಿಸ್ಸಾದ ಬೈರಂಪುರಕ್ಕೆ ತೆರಳಿ ಅಲ್ಲಿ ಆರೋಪಿಯ ಮಾಹಿತಿ ಕಲೆಹಾಕಿ, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.