ತುಳು ಸಂಸ್ಕೃತಿ , ಕನ್ನಡ ಪ್ರೇಮ ಮೆರೆದ ಸಂಸದ ಬ್ರಿಜೇಶ್ ಚೌಟ!
– ಸಂಸತ್ತಿನಲ್ಲಿ ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ವಚನ
– ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕರಾವಳಿ ನಾಯಕ
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತಮ್ಮ ಪ್ರಮಾಣ ವಚನ ಸ್ವೀಕಾರದ ಕೊನೆಯಲ್ಲಿ ತುಳು ಭಾಷೆಯಲ್ಲಿ ಎಲ್ಲರಿಗೂ ಸೊಲ್ಮೆಲು (ಎಲ್ಲರಿಗೂ ಧನ್ಯವಾದ) ಎನ್ನುವ ಮೂಲಕ ಹೇಳಿ ಗಮನ ಸೆಳೆದಿದ್ದಾರೆ.
ಸೋಮವಾರದಂದು ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರು ಅಧಿವೇಶನ ಆರಂಭವಾಗುತ್ತಲೇ ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.
ದಕ್ಷಿಣ ಕನ್ನಡ ಕ್ಷೇತ್ರದ ಸರದಿ ಬಂದಾಗ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ನಿರರ್ಗಳ ಮಾತನಾಡಬಲ್ಲವರಾದರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕರ್ನಾಟಕದ ಪ್ರತಿನಿಧಿಯೆಂದು ಸಾರಿದ್ದಾರೆ. ಕೊನೆಗೆ ಸೊಲ್ಮೆಲು ಎನ್ನೋ ಮೂಲಕ ತುಳು ಭಾಷಾ ಪ್ರೇಮವನ್ನೂ ಮೆರೆದಿದ್ದಾರೆ.
ಬ್ರಿಜೇಶ್ ಚೌಟ ತುಳುನಾಡಿನ ಶೈಲಿಯ ವಸ್ತ್ರ ಧರಿಸಿದ್ದು, ಬಿಳಿ ಬಣ್ಣದ ಅಂಗಿ ಮತ್ತು ಲುಂಗಿಯನ್ನು ಧರಿಸಿ ಕೇಸರಿ ಶಾಲನ್ನು ಹಾಕ್ಕೊಂಡಿದ್ದರು.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೌಟ ಅವರು ಕರಾವಳಿಯ ನಾಯಕರಾಗಿದ್ದಾರೆ.