ಒತ್ತುವರಿ ತೆರವು ವಿರುದ್ಧ ಇದೀಗ ಜನಾಂದೋಲನ!
– ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರಕ್ಕೆ ಪತ್ರ?
– ರೈತರು, ಬಡವರ ಬದುಕು ಬೀದಿಗೆ ತಳ್ಳದಿರಿ: ಒತ್ತಾಯ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತನ್ನ ಗ್ರಾಮದ ರೈತರ ಹಿತದೃಷ್ಟಿಯಿಂದ ಮಾಡದಿರುವಂತೆ ಗ್ರಾಮ ಪಂಚಾಯ್ತಿ ವತಿಯಿಂದ ಅರಣ್ಯ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆಯವರಿಗೆ ಮನವಿ ಪತ್ರ ಸಲ್ಲಿಕೆಯಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪಂಚಾಯ್ತಿಗಳಿಂದ ಮನವಿ ಸಲ್ಲಿಕೆಯಾಗಿದ್ದು ಕ್ರಮೇಣ ಜಿಲ್ಲೆಯ ಎಲ್ಲಾ ಪಂಚಾಯ್ತಿಗಳಿಗೆ ವಿಸ್ತರಣೆಗೊಂಡರೂ ಅಚ್ಚರಿಯಿಲ್ಲ.
ಮನವಿಯಲ್ಲಿ ಏನಿದೆ..?
ಸರ್ಕಾರದ ಆದೇಶದಂತೆ ಒತ್ತುವರಿ ತೆರವಿಗೆ ಮುಂದಾದಲ್ಲಿ ರೈತರ ಮತ್ತು ಕಾರ್ಮಿಕರ ಬದುಕು ಬೀದಿಗೆ ಬೀಳಲಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ಕೃಷಿ ಭೂಮಿಗೆ ಈವರೆಗೆ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿದೆ 50,53,57,94C ಪಾರಂಪರಿಕ ಅರಣ್ಯ ಹಕ್ಕು ಅನ್ವಯ ಯಾವುದೇ ಹಕ್ಕುಪತ್ರ ಮಂಜೂರು ಮಾಡಿಲ್ಲ. ಅನಧಿಕೃತ ಹೋಂ ಸ್ಟೇ,ರೆಸಾರ್ಟ್,ಬಡಾವಣೆಗಳು ನಮ್ಮ ಗ್ರಾ ಪಂ ವ್ಯಾಪ್ತಿಯಲ್ಲಿ ಇಲ್ಲ ಆದರೆ ಹಕ್ಕಪತ್ರ ಇಲ್ಲದೆ ಸಾಗುವಳಿ ಕೃಷಿ. ಭೂಮಿಯಲ್ಲಿ ರೈತರು ಅಡಿಕೆ,ಕಾಫಿ,ಏಲಕ್ಕಿ,ಕಾಳುಮೆಣಸು ಬೆಳೆದಿದ್ದಾರೆ ಮತ್ತು ವಾಸ ಮಾಡಲು ಮನೆಗಳನ್ನ ರಚಿಸಿಕೊಂಡು ಮನೆಯ ಸುತ್ತ ಜೀವನೋಪಾಯಕ್ಕಾಗಿ ಕೃಷಿ ನಡೆಸಿಕೊಂಡು ಬಂದಿರುತ್ತಾರೆ ಹಾಗಾಗಿ ರೈತರ ಸಾಗವಳಿ ಭೂಮಿಯನ್ನು ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ವಶಪಡಿಸಿಕೊಳ್ಳದಂತೆ ರೈತರು ಹಾಗೂ ಕಾರ್ಮಿಕರ ಹಿತ ಕಾಪಾಡಬೇಕು.. ಇಲ್ಲದೇ ಹೋದರೆ ಕೃಷಿಯನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ರೈತರು ಹಾಗೂ ಕಾರ್ಮಿಕರ ಬದುಕು ಬೀದಿಗೆ ಬೀಳುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಒತ್ತುವರಿಯನ್ನು ತೆರವುಗೊಳಿಸದೇ ಈ ಮನವಿಯನ್ನು ಪುರಸ್ಕರಿಸಬೇಕೆಂದು ಗ್ರಾಮ ಪಂಚಾಯ್ತಿ ಹಾಗೂ ಗ್ರಾಮಸ್ಥರ ಪರವಾಗಿ ನಿಮ್ಮಲ್ಲಿ ವಿನಂತಿಸುತ್ತೇವೆ ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.