ಪ್ರವೀಣ್ ನೆಟ್ಟಾರು ಹತ್ಯೆ: ಐವರಿಗಾಗಿ ತೀವ್ರ ಶೋಧ!
– ಕರಾವಳಿ, ಕೊಡಗು ಜಿಲ್ಲೆಗಳಲ್ಲಿ ಆಪರೇಷನ್
– 21 ಆರೋಪಿಗಳ ಪೈಕಿ 16 ಮಂದಿ ಅರೆಸ್ಟ್
NAMMUR EXPRESS NEWS
ಮಂಗಳೂರು: ಬಿಜೆಪಿ ಮುಖಂಡ ಸುಳ್ಯ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ತಲೆಮರೆಸಿಕೊಂಡಿರುವ ಐವರು ಆರೋಪಿಗಳಿಗಾಗಿ ಮಂಗಳವಾರ ಮತ್ತೊಮ್ಮೆ ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳ ತಂಡ ಮಂಗಳವಾರ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿದೆ.
ಐವರು ಆರೋಪಿಗಳಾದ ಮುಸ್ತಫಾ ಪೈಚಾರ್, ಅಬೂಬಕ್ಕರ್ ಸಿದ್ಧಿಕ್, ಉಮರ್ ಫಾರೂಕ್, ನೌಷದ್ ಹಾಗೂ ಮಸೂದ್ ಅಗ್ನಾಡಿಗಾಗಿ ತೀವ್ರ ಶೋಧನಡೆಯುತ್ತಿದೆ. ಈಗಾಗಲೇ ಆರೋಪಿಗಳ ಭಾವಚಿತ್ರ ಇರುವ ವಾಂಟೆಡ್ ಲಿಸ್ಟ್ನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿತ್ತು. ಆರೋಪಿಗಳು ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಮಂಗಳವಾರ ಆರೋಪಿಗಳ ಮನೆಗಳಿಗೆ ಭೇಟಿ ನೀಡಿ, ಮನೆಯವರ ವಿಚಾರಣೆ ನಡೆಸಿ, ಮನೆಗಳಿಗೆ ನೋಟಿಸ್ ಅಂಟಿಸಿದೆ.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಎಂಬಲ್ಲಿ ನೌಷದ್ನ ಮನೆಗೆ ಭೇಟಿ ನೀಡಿದ ತಂಡ, ಮನೆಯವರ ವಿಚಾರಣೆ ನಡೆಸಿತು. ನೆಟ್ಟಾರು ಹತ್ಯೆಯ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಈತನ ಮೇಲಿದೆ.
ಆರೋಪಿಗಳಿಗೆ ನೌಷಾದ್ ತಮಿಳ್ಳಾಡಿನ ಈರೋಡ್ನಲ್ಲಿ ಆಶ್ರಯ ಕಲ್ಪಿಸಿದ್ದ ಬಳಿಕ, ಬೆಳ್ಳಾರೆ, ಸುಳ್ಯಗಳಿಗೂ ತಂಡ ಭೇಟಿ ನೀಡಿತು. ಕೊಡಗಿನ ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮದ ಕಾನ್ವೆಂಟ್ ಬಾಣೆಯ ನಿವಾಸಿ ಅಬ್ದುಲ್ ನಜೀರ್ ಮತ್ತು ಕಲ್ಕಂದೂರು ಗ್ರಾಮದ ನಿವಾಸಿ ಅಬ್ದುಲ್ ರೆಹಮಾನ್ ಅಲಿಯಾಸ್ ಅದ್ರಾಮನ ಮನೆಗಳಿಗೆ ತೆರಳಿ ವಿಚಾರಣೆ ನಡೆಸಿತು. ಇಬ್ಬರೂ ವಿದೇಶಕ್ಕೆ ತೆರಳಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇವರಿಬ್ಬರೂ ನಿಷೇಧಿತ ಪಿಎಫ್ಐ ಸಂಘಟನೆಗೆ ಸೇರಿದ ಕಾರ್ಯಕರ್ತರಾಗಿದ್ದು, ಕೃತ್ಯ ಎಸಗಲು ಆರೋಪಿಗಳಿಗೆ ಸಹಾಯ ಮಾಡಿದ ಆರೋಪ ಇವರ ಮೇಲಿದೆ.
ಏನಿದು ಘಟನೆ?
2022ರ ಜು.26ರಂದು ಬೆಳ್ಳಾರೆಯ ನೆಟ್ಟಾರಿನಲ್ಲಿ ಪ್ರವೀಣ್ನ್ನು ದುಷ್ಕರ್ಮಿಗಳು ಇರಿದು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕೈವಾಡವಿರುವ ಶಂಕೆ ಮೇರೆಗೆ ಇದನ್ನು ಎನ್ಐಎ ತನಿಖೆಗೆ ಸರ್ಕಾರ ವಹಿಸಿತ್ತು. ಪ್ರಕರಣದ 21 ಆರೋಪಿಗಳ ಪೈಕಿ 16 ಮಂದಿಯನ್ನು ಎನ್ಐಎ ತಂಡ ಈಗಾಗಲೇ ಬಂಧಿಸಿದೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023