ಕರಾವಳಿ ಟಾಪ್ ನ್ಯೂಸ್
ಪುತ್ತೂರು ಬಿಜೆಪಿ ನಾಯಕನ ವಿರುದ್ಧ ರೇಪ್ ಕೇಸ್
– 47 ವರ್ಷದ ಮಹಿಳೆಯಿಂದ ದೂರು ದಾಖಲು
– ಬೆಳ್ತಂಗಡಿ: ಕೋಳಿ ಇಟ್ಟ ಬೋನಿಗೆ ಬಿದ್ದ ಚಿರತೆ!
– ಕಾರ್ಕಳ: ಮನೆಗೆ ನುಗ್ಗಿ ಲಕ್ಷಾಂತರ ರೂ.ಚಿನ್ನಾಭರಣ ಕಳವು
NAMMUR EXPRESS NEWS
ಪುತ್ತೂರು: ಕರಾವಳಿ ಹಿಂದೂ ಫೈರ್ ಬ್ರಾಂಡ್ ಖ್ಯಾತಿಯ ಪುತ್ತೂರು ನಾಯಕರೊಬ್ಬರ ವಿರುದ್ಧ ವಿರುದ್ಧ ಪುತ್ತೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ನಂಬಿಕೆ ದ್ರೋಹ, ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಸಾಮೆತ್ತಡ್ಕದ ನಿವಾಸಿ 47 ವರ್ಷದ ಮಹಿಳೆ ದೂರು ನೀಡಿದ್ದಾರೆ.
2023ರ ಜೂನ್ ತಿಂಗಳಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಆ ಬಳಿಕ ಬ್ಲಾಕ್ ಮೇಲ್ ಮಾಡಿಕೊಂಡು ಅವರಿರುವ ಪ್ರದೇಶಕ್ಕೆ ಕರೆಸಿಕೊಳ್ಳುತ್ತಿದ್ದರು ದೂರಿದ್ದಾರೆ. ಎಂದು ಮಹಿಳೆತನಗೆ ಹಾಗೂ ತನ್ನ ಪುತ್ರಿಗೆ ಜೀವನ ಪೂರ್ತಿ ಯಾವುದೇ ಕುಂದು ನೋಡಿಕೊಳ್ಳುವುದಾಗಿ ದೈಹಿಕ ಹಾಗೂ ಬಳಿಕೊ್ಳುತ್ತಿದ್ದರು. ಕೊರತೆಯಾಗದಂತೆ ನಂಬಿಸಿ ಮಾನಸಿಕವಾಗಿ ಅವರೊಂದಿಗೆ ಇದ್ದ ಕ್ಷಣಗಳ ಛಾಯಾ ಚಿತ್ರ, ಸೆಲ್ಸಿ, ಆಡಿಯೋ, ವಿಡಿಯೋಗಳು ಇದೆಯೆಂದು ಹೇಳಿಕೊಂಡು ಬೆದರಿಸಿ ಅವರ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು ಎಂದು ಸಂತ್ರಸ್ತೆ ಎನ್ನಲಾದ ಮಹಿಳೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.ಆದರೆ 2024ರ ಲೋಕಸಭಾ ಚುನಾವಣೆಯ ಬಳಿಕ ಮಾತುಕತೆ ಕಡಿಮೆ ಮಾಡಿದ್ದು, ಭಯಗೊಂಡು ನಾನು ಪುತ್ತೂರಿಗೆ ವಾಸ ಬದಲಾವಣೆ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಉದ್ಯೋಗ ಹಾಗೂ ವರಮಾನವಿಲ್ಲದೆ ಬಾಡಿಗೆ ಮನೆಯಲ್ಲಿದ್ದುಕೊಂಡು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಸಾಮೆತ್ತಡ್ಕ ನಿವಾಸಿ 47 ವರ್ಷದ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ದೂರು ಪ್ರಕರಣ ದಾಖಲಾಗಿದೆ.
ಪ್ರಭಾವಿ ಗುಂಪು ರಾಜಕೀಯವಾಗಿ ಹಣಿಯಲು ಕಾರ್ಯಾಚರಣೆ ನಡೆಸುತ್ತಿದ್ದು, ಅದರ ಕೃಪಾಕಟಾಕ್ಷದಿಂದಲೇ ಈ ದೂರು ದಾಖಲಾಗಿರುವ ಸಾಧ್ಯತೆ ಇದೆ ಎಂದು ಆ ಬಣದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಬೆಳ್ತಂಗಡಿ: ಕೋಳಿ ಇಟ್ಟ ಬೋನಿಗೆ ಬಿದ್ದ ಚಿರತೆ!
ಬೆಳ್ತಂಗಡಿ: ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿನಡೆದಿದೆ. ಕಳೆದ 2 ತಿಂಗಳ ಹಿಂದೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು.ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಗುರಿಕಂಡ ಆನಂದ ಶೆಟ್ಟಿ ಎಂಬವರ ಮನೆಯ ಸಮೀಪ 2 ತಿಂಗಳ ಹಿಂದೆ ಚಿರತೆ ಹಿಡಿಯಲು ಬೋನ್ ಅಳವಡಿಸಿ ಅದರಲ್ಲಿ ಕೋಳಿ ಇರಿಸಲಾಗಿತ್ತು. ಕಳೆದ ಮಧ್ಯರಾತ್ರಿ ಚಿರತೆ ಕೋಳಿಯನ್ನು ಹಿಡಿಯಲು ಬೋನಿನೊಳಗೆ ಹೋಗಿ ಸೆರೆಗೆ ಬಿದ್ದಿದೆ.
ಚಿರತೆ ಬೋನಿನೊಳಗೆ ಬಿದ್ದಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು ಚಿರತೆ ಸೆರೆ ಸಿಕ್ಕಿರುವುದರಿಂದ ಸ್ಥಳೀಯರಲ್ಲಿ ಆತಂಕ ಸ್ಪಲ್ಪ ದೂರಗಿದೆ.
ಕಾರ್ಕಳ: ಮನೆಗೆ ನುಗ್ಗಿ ಲಕ್ಷಾಂತರ ರೂ.ಚಿನ್ನಾಭರಣ ಕಳವು
ಕಾರ್ಕಳ: ಮಹಿಳೆಯೋರ್ವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮುಡಾರು ಗ್ರಾಮದ ಬಜಗೋಳಿ ಸಮೀಪದ ಗುರ್ಗಾಲ್ಗುಡ್ಡೆ ಎಂಬಲ್ಲಿ ನಡೆದಿದೆ.
ಗುರ್ಗಾಲ್ಗುಡ್ಡೆಯ ನಿವಾಸಿ ಪ್ರಭಾ(42) ಎಂಬವರ ಮನೆಯ ಹೊರಗಡೆ ಡಬ್ಬಿಯಲ್ಲಿ ಇರಿಸಿದ ಕೀ ಸಹಾಯದಿಂದ ಒಳಗೆ ನುಗ್ಗಿದ ಕಳ್ಳರು, ಬೆಡ್ ರೂಮ್ನ ಕಾಪಾಟಿನಲ್ಲಿದ್ದ ಸುಮಾರು 33 ಪವನ್ ತೂಕದ 10,05,00. ಮೌಲ್ಯದ ವಿವಿಧ ರೀತಿಯ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.