ಕರಾವಳಿ ಟಾಪ್ ನ್ಯೂಸ್
ಬೆಳ್ತಂಗಡಿಯಲ್ಲಿ ನಿವೃತ್ತ ಶಿಕ್ಷಕನ ಮರ್ಡರ್!
– ಕೊಲೆಗೆ ಕಾರಣ ನಿಗೂಢ: ಭಾರೀ ಸಂಚಲನ- ಕಡಬ: ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಬಾವಿಯಲ್ಲಿ ಪತ್ತೆ
– ಬಂಟ್ವಾಳ: ಕೆರೆಗೆ ಹಾರಿ ಯುವಕ ಆತ್ಮಹತ್ಯೆ
– ಉಡುಪಿ: ಮದುವೆ ಹಿಂದಿನ ದಿನ ಮದುಮಗ ನಾಪತ್ತೆ!
– ಪುತ್ತೂರು: ನೇಣು ಬಿಗಿದುಕೊಂಡು ಭಜರಂಗದಳದ ಮುಖಂಡ ಆತ್ಮಹತ್ಯೆ
NAMMUR EXPRESS NEWS
ಬೆಳ್ತಂಗಡಿ: ಮನೆ ಅಂಗಳದಲ್ಲಿಯೇ ನಿವೃತ್ತ ಶಿಕ್ಷಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳ್ತಂಗಡಿಯ ಬೆಳಾಲು ಗ್ರಾಮದ ಎಸ್ಪಿಬಿ ಕಂಪೌಂಡ್ ನಲ್ಲಿ ನಡೆದಿದೆ.
ನಿವೃತ್ತ ಶಿಕ್ಷಕ ಎಸ್.ಪಿ ಬಾಲಕೃಷ್ಣ ಭಟ್(73) ಹತ್ಯೆಯಾದವರು.
ಬಾಲಕೃಷ್ಣ ಅವರು ಕೊಲ್ಪಾಡಿ ಮತ್ತು ಕೊಯ್ಯೂರು ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮಂಗಳವಾರ ಮಧ್ಯಾಹ್ನದ ನಂತರ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಕೊಲೆ ಮಾಡಿದ ವ್ಯಕ್ತಿ ಯಾರೂ, ಕೊಲೆ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ನ್ನು ಾವುದೇ ಮಾಹಿತಿ ಲಭಿಸಿಲ್ಲ.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಇಬ್ಬರು ಪುತ್ರರನ್ನು ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಓರ್ವ ಪುತ್ರ ಬೆಂಗಳೂರಿನಲ್ಲಿ ನೆಲೆಸಿದ್ದು, ಇನ್ನೋರ್ವ ಪುತ್ತೂರಿನಲ್ಲಿ ಉದ್ಯೋಗದಲ್ಲಿದ್ದು, ಪುತ್ರಿ ವಿವಾಹಿತೆ. ಶಿಕ್ಷಕಿಯೂ ಆಗಿದ್ದ ಅವರ ಪತ್ನಿ ಐದು ವರ್ಷಗಳ ಹಿಂದೆ ನಿಧನರಾಗಿದ್ದರು ಎಂದು ಹೇಳಲಾಗಿದೆ.
ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಬಾವಿಯಲ್ಲಿ ಪತ್ತೆ
ಕಡಬ: ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ವರದಿಯಾಗಿದೆ. ಕಡಬದ ಕೇನ್ಯದ ಶಾಲಾ ಬಳಿ ನಿವಾಸಿ ಬಾಬು ಪೂಜಾರಿ ಎಂಬವರು ಆ.19ರ ಮುಂಜಾನೆ ಮನೆಯಿಂದ ನಾಪತ್ತೆಯಾಗಿದ್ದರು. ಅವರ ಮೃತದೇಹ ಸಮೀಪದ ಶಾಲಾ ಬಾವಿಯಲ್ಲಿ ಪತ್ತೆಯಾಗಿದೆ.
ಮನೆಯವರು ಹುಡುಕಾಟ ನಡೆಸಿದಾಗ ಶಾಲಾ ಬಾವಿ ಕಟ್ಟೆಯಲ್ಲಿ ಲುಂಗಿ, ಚಪ್ಪಲಿ, ಟಾರ್ಚ್ ಪತ್ತೆಯಾಗಿತ್ತು. ಹೀಗಾಗಿ ಬಾವಿ ಹಾರಿರಬಹುದೆಂಬ ಶಂಕೆಯಿಂದ ಸ್ಥಳೀಯರು ಬಾವಿಗೆ ದೋಟಿ ಇಳಿಸಿ ಶೋಧ ನಡೆಸಿದಾಗ ಶವ ಪತ್ತೆಯಾಗಿದೆ. ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ
ಪುತ್ತೂರು : ಬಜರಂಗದಳದಲ್ಲಿ ಸಕ್ರಿಯನಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ತಾಲೂಕು ಕೆಯ್ಯರು ಗ್ರಾಮದ ಉದ್ದಳೆ ನಿವಾಸಿ ಸಚಿನ್ ಕೆಯ್ಯರು (27) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.ಸಚಿನ್ ಕೊಯ್ಯರು ಘಟಕದ ಸುರಕ್ಷಾ ಪ್ರಮುಖ್ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ಬಿಸಿಎ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ಸಚಿನ್ ಉದ್ಯೋಗದ ಹುಡುಕಾಟದಲ್ಲಿದ್ದರು. ಗ್ರಾಮದ ಪಂಚಾಯತ್ ಸಮೀಪ ಗೇರು ಮರವೊಂದಕ್ಕೆ ಕೇಸರಿ ಶಾಲು ಬಿಗಿದು ನೇಣಿಗೆ ಶರಣಾಗಿದ್ದಾರೆ. ಅತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬದಿಲ್ಲ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ: ಕೆರೆಗೆ ಹಾರಿ ಯುವಕ ಆತ್ಮಹತ್ಯೆ
ಬಂಟ್ವಾಳ: ಕೆರೆಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆಯ ಕೋಕಲ ಎಂಬಲ್ಲಿ ಸಂಭವಿಸಿದೆ. ಕೋಕಲದ ನಿವಾಸಿ ಸಾಯಿ ಶಾಂತಿ ಅವರ ಪುತ್ರ ಸುಮಂತ್ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಮುಂಜಾನೆ 5ಗಂಟೆಯ ಹೊತ್ತಿಗೆ ಎದ್ದು ತೋಟಕ್ಕೆ ತೆರಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಆತ ಉಜಿರೆಯ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನಲ್ಲಿ ಎಲ್ಲರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ: ಮದುವೆ ಹಿಂದಿನ ದಿನ ಮದುಮಗ ನಾಪತ್ತೆ!
ಉಡುಪಿ: ಮದುವೆ ಹಿಂದಿನ ದಿನ ಮದುಮಗ ನಾಪತ್ತೆಯಾದ ಕಾರಣ ನಡೆಯಬೇಕಿದ್ದ ಮದುವೆ ರದ್ದಾಗಿದೆ. ಅಳಿವೆಕೋಡಿ ಗ್ರಾಮದ ವರನೊಂದಿಗೆ ಉಪ್ಪುಂದ ಗ್ರಾಮದ ಯುವತಿಯ ಮದುವೆ ನಾಗೂರಿನಲ್ಲಿ ನಿಗದಿಯಾಗಿತ್ತು. ಆದರೆ ವರ ನಾಪತ್ತೆಯಾದ ಹಿನ್ನಲೆ ಮದುವೆ ರದ್ದಾಗಿದೆ.
ಹುಡುಗ ಖಾಸಗಿ ಸಂಸ್ಥೆಯಲ್ಲಿ ವೃತ್ತಿಯಲ್ಲಿದ್ದ. ಈ ಹಿಂದೆ ಎರಡು ಕಡೆಯ ಮನೆಯವರು ಸೇರಿ ಮದುವೆ ನಿಶ್ಚಯಿಸಿದ್ದರು. ಆ.18 ರಂದು ಹುಡುಗನ ಮನೆಯಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ಸಕಲ ತಯಾರಿ ಆಗಿತ್ತು. ಮದುಮಗ ಆ.18ರಂದು ಮದುವೆಗೆ ಅಗತ್ಯವಿರುವ ಚಿನ್ನಾಭರಣಗಳನ್ನು ಅಂಗಡಿಯಿಂದ ಪಡೆದು, ಚಿನ್ನಾಭರಣ ಗಳನ್ನು ಮನೆಯಲ್ಲಿಟ್ಟು ಕೆಲವು ವಸ್ತುಗಳನ್ನು ತರಲು ಇದೆ ಎಂದು ಮನೆಯವರಲ್ಲಿ ಹೇಳಿ, ಮೊಬೈಲ್, ಕೈಯಲ್ಲಿದ್ದ ಚಿನ್ನದ ಬ್ರಾಸ್ಲೇಟ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ. ಮೆಹಂದಿಯ ಸಂಭ್ರಮದಲ್ಲಿ ಇದ್ದ ಮನೆಯವರು ಹುಡುಗ ಮನೆಗೆ ಬಾರದೆ ಇರುವುದರಿಂದ ಗಾಬರಿಯಿಂದ ಹುಡುಕಾಟದಲ್ಲಿ ತೊಡಗಿದರು. ಬಳಿಕ ಹುಡುಗ ನಾಪತ್ತೆ ವಿಷಯ ತಿಳಿದು ಬಂದ ಅತಿಥಿಗಳೆಲ್ಲಾರೂ ವಾಪಸು ತೆರಳಿದ್ದಾೆ. ವನ ನಾಪತ್ತೆ ಪ್ರಕರಣ ಕುಟುಂಬಸ್ಥರಿಗೆ ಇರಿಸು ಮುರಿಸು ಉಂಟುಮಾಡಿದೆ. ರದ್ದಾಗಿದೆ.