ದಕ್ಷಿಣ ಕನ್ನಡದ ಬೆಳ್ತಂಗಡಿಯ ಚಿನ್ಮಯ್ ರಾಜ್ಯಕ್ಕೆ ದ್ವಿತೀಯ, ಉಡುಪಿ ಕಾರ್ಕಳದ ಸಹನಾಗೆ ತೃತೀಯ ಸ್ಥಾನ!
– ರಾಜ್ಯದಲ್ಲಿ ಕರಾವಳಿ ಸಾಧನೆ: ಸರ್ವರ ಅಭಿನಂದನೆ
– ಬೆಳ್ತಂಗಡಿ ಎಸ್ ಡಿ ಎಂ ಶಾಲೆ, ಜ್ಞಾನ ಸುಧಾ ಶಾಲೆಯ ವಿದ್ಯಾರ್ಥಿನಿಗೆ 3ನೇ ಸ್ಥಾನ
NAMMUR EXPRESS NEWS
ಕರಾವಳಿ: 2023 – 24ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕರಾವಳಿಯ ಅವಿಭಜಿತ ಜಿಲ್ಲೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಒಲಿದು ಬಂದಿದೆ. ಈ ಉಡುಪಿ ಜಿಲ್ಲೆ ಈ ಬಾರಿ 94% ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇ 92.12 ದ್ವಿತೀಯ ಸ್ಥಾನದಲ್ಲಿದ್ದು ಶಿವಮೊಗ್ಗ ಜಿಲ್ಲೆ ಶೇ 88.67 ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು 625/625ಕ್ಕೆ ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಜ್ಯದಲ್ಲಿ ದ್ವಿತೀಯ ಸ್ಥಾನ ಒಟ್ಟು 7 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಬೆಳ್ತಂಗಡಿ ಎಸ್ ಡಿ ಎಂ ಶಾಲೆಯ ವಿದ್ಯಾರ್ಥಿನಿ ಎರಡನೇ ಸ್ಥಾನ
ದ.ಕ ಜಿಲ್ಲೆಯ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ವಿದ್ಯಾರ್ಥಿಯಾದ ಚಿನ್ಮಯ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಜ್ಞಾನ ಸುಧಾ ಶಾಲೆಯ ವಿದ್ಯಾರ್ಥಿನಿಗೆ 3ನೇ ಸ್ಥಾನ
ಕಾರ್ಕಳ ತಾಲೂಕು ಕುಕ್ಕುಂದೂರಿನ ಜ್ಞಾನಸುಧಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹನಾ 623 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.