ಮಂಗಳೂರು ವಿವಿ ಪದವಿ ಕಾಲೇಜಿಗಾಗಿ ಹೋರಾಟ
– ಕಾಲೇಜು ಉಳಿಸಲು ಡಿವೈಎಫ್ಐನಿಂದ ಹೋರಾಟ ಸಮಿತಿ ರಚನೆ
– ಜುಲೈ 15ರಂದು ಮಂಗಳೂರು ವಿವಿ ಮುಂದೆ ಸಾಮೂಹಿಕ ಜನಾಗ್ರಹ
NAMMUR EXPRESS NEWS
ಮಂಗಳೂರು: ಕೊಣಾಜೆಯಲ್ಲಿರುವ ಮಂಗಳೂರಿನ ವಿವಿ ಕ್ಯಾಂಪಸ್ ಒಳಗಡೆ ಇರುವ ಪದವಿ ಕಾಲೇಜು ಸಹಿತ ಆರ್ಥಿಕ ಮುಗ್ಗಟ್ಟುವಿನಿಂದ ಮುಚ್ಚುವ ಭೀತಿ ಎದುರಿಸುತ್ತಿದೆ.
ಮಂಗಳೂರು ವಿವಿ ಪದವಿ ಸಂಧ್ಯಾ ಕಾಲೇಜು, ಮೂಡಬಿದಿರೆಯ ಬನ್ನಡ್ಕ, ನೆಲ್ಯಾಡಿಯಲ್ಲಿರುವ ಪದವಿ ಕಾಲೇಜುಗಳನ್ನು ಉಳಿಸುವ ನಿಟ್ಟಿನಲ್ಲಿ ನಡೆಸಬೇಕಾದ ಹೋರಾಟದ ಕುರಿತು ಚರ್ಚಿಸಲು ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿಯು ದೇರಳಕಟ್ಟೆಯಲ್ಲಿ ಸಭೆ ನಡೆಸಿ ಹೋರಾಟ ಸಮಿತಿಯನ್ನು ರಚಿಸಿದೆ.
ಕೊಣಾಜೆ ವಿವಿ ಕ್ಯಾಂಪಸ್ನಲ್ಲಿರುವ ಪದವಿ ಕಾಲೇಜು ಸಹಿತ ಮುಚ್ಚುವ ಭೀತಿಯಲ್ಲಿರುವ ನಾಲ್ಕು ಕಾಲೇಜುಗಳನ್ನು ಉಳಿಸಲು ಶಾಶ್ವತ ಪರಿಹಾರದ ಕುರಿತು ಸಭೆಯು ಚರ್ಚಿಸಿತಲ್ಲದೆ ವಿವಿ ಆಡಳಿತದ ಪದವಿ ಕಾಲೇಜುಗಳನ್ನು ಸರ್ಕಾರವೇ ವಶಕ್ಕೆ ಪಡೆದುಕೊಂಡು ಪದವಿ ಶಿಕ್ಷಣ ಇಲಾಖೆ ಮೂಲಕ ನಡೆಸಬೇಕೆಂದು ಸಮುತಿ ಆಗ್ರಹಿಸಿದೆ.
ಜುಲೈ 15ರಂದು ಮಂಗಳೂರು ವಿವಿ ಮುಂದೆ ಸಾಮೂಹಿಕ ಜನಾಗ್ರಹ ಧರಣಿ ನಡೆಸಿ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲು ಸಭೆ ನಿರ್ಧರಿಸಿದೆ. ಅಲ್ಲದೆ, ಮಂಗಳೂರು ವಿವಿ ಪದವಿ ಕಾಲೇಜುಗಳ ಉಳಿಸಿ ಹೋರಾಟ ಸಮಿತಿ ರಚಿಸಲಾಯಿತು.
ಸಭೆ ಅಧ್ಯಕ್ಷತೆಯನ್ನು ಡಿವೈಎಫ್ಐನ ಉಳ್ಳಾಲ ಘಟಕ ಅಧ್ಯಕ್ಷ ನಿತಿನ್ ಕುತ್ತಾರ್ ವಹಿಸಿದ್ದರು. ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಸ್ತಾವಿಕವಾಗಿ ಮಾತನಾಡಿದರು. ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.