ಟಾಪ್ ನ್ಯೂಸ್ ಕರಾವಳಿ
ಕರಾವಳಿಯಲ್ಲಿ ಹೆಚ್ಚಾಯ್ತು ಆತ್ಮಹತ್ಯೆ!
– ಕಾಪು: ಕಂದಕಕ್ಕೆ ಬಿದ್ದ ಖಾಸಗಿ ಬಸ್: ಅಪಾಯದಿಂದ ಪಾರು
– ಬ್ರಹ್ಮಾವರ: ಮುಂಡಾಡಿ ಗೋಡಂಬಿ ಫಾಕ್ಟರಿಯಲ್ಲಿ ಕಳವು
– ಪುತ್ತೂರು: ಹೆಲ್ಮಟ್ ಧರಿಸಿಲ್ಲ ಎಂದು ಆಟೋ ಚಾಲಕನಿಗೆ ದಂಡ!
– ಮಂಗಳೂರು: ಯುವಕ ಆತ್ಮಹತ್ಯೆ: ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ!
– ಪಡುಬಿದ್ರಿ:ಬಚ್ಚಲು ಕೋಣೆಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ
NAMMUR EXPRESS NEWS
ಬ್ರಹ್ಮಾವರ: ಕಾಡೂರು ಗ್ರಾಮದ ಮುಂಡಾಡಿ ಗೋಡಂಬಿ ಫಾಕ್ಟರಿಯಲ್ಲಿ 15 ಲಕ್ಷ ರೂ. ಬೆಲೆಬಾಳುವ ವಸ್ತುಗಳು ಕಳವಾಗಿರುವುದಾಗಿ ಪಾಲುದಾರ ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ.
ಸೋಮವಾರ ಬೆಳಗ್ಗೆ ಫ್ಯಾಕ್ಟರಿ ಸಮೀಪ ಹೋದಾಗ ಇಬ್ಬರು ಹಿಂಬದಿ ಬಾಗಿಲು ಮುರಿದು ಮೆಷಿನರಿ ಮತ್ತು ಸಲಕರಣೆಗಳನ್ನು ತೆಗೆಯುತ್ತಿದ್ದು, ತನ್ನನ್ನು ನೋಡಿ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಅನಂತರ ಫ್ಯಾಕ್ಟರಿ ಒಳಗೆ ಹೋ ಪರಿೀಲಿಸುವಗ ಸೊತ್ತು ಕಳವಾಗಿರುವುದು ಕಂಡು ಬಂದಿರುವುದಾಗಿ ಅವರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದಾರೆ.
ಕಾಪು: ಕಂದಕಕ್ಕೆ ಬಿದ್ದ ಖಾಸಗಿ ಬಸ್
ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ವೊಂದು ರಸ್ತೆ ಬದಿಯ ಕಂದಕಕ್ಕೆ ಬಿದ್ದ ಘಟನೆ ಕಾಪುವಿನ ಉಳಿಯಾರಗೋಳಿ ಬಳಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಉಡುಪಿ – ಶಿರ್ವ ನಡುವೆ ಸಂಚರಿಸುತ್ತಿದ್ದ ಮಿಲಾನ್ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಸರಿದು ನಿಂತಿದೆ. ತಕ್ಷಣವೇ ಸ್ಥಳೀಯರು ಕಾರ್ಯಾಚರಣೆ ನಡೆಸಿ, ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಅಪಘಾತದ ರಭಸಕ್ಕೆ ಬಸ್ ಮುಂಭಾಗಕ್ಕೆ ಹಾನಿಯಾಗಿದೆ. ಕಾಪು ಪೋಲಿಸರು ಸ್ಥಳಕ್ಕೆ ಬಂದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಪುತ್ತೂರು: ಹೆಲ್ಮಟ್ ಧರಿಸಿಲ್ಲ ಎಂದು ಆಟೋ ಚಾಲಕನಿಗೆ ದಂಡ!
ಹೆಲೈಟ್ ಧರಿಸದಿದ್ದಕ್ಕಾಗಿ ಉಪ್ಪಿನಂಗಡಿಯ ಆಟೋರಿಕ್ಷಾ ಚಾಲಕನಿಗೆ ದಂಡ ವಿಧಿಸಿ ಮೈಸೂರಿನ ತಲಕಾಡು ಪೊಲೀಸರು ನೋಟಿಸ್ ನೀಡಿದ್ದಾರೆ.ಉಪ್ಪಿನಂಗಡಿಯಲ್ಲಿ ಅಟೋ ಚಲಾಯಿಸುವ ರೋಹಿತ್ ಎಂಬುವವರಿಗೆ ಸೆಪ್ಟೆಂಬರ್ 12ರಂದು ಮಧ್ಯಾಹ್ನ 3.18 ಗಂಟೆಗೆ ಮೈಸೂರು ರಸ್ತೆಯ ತಲಕಾಡು ಜಂಕ್ಷನ್ನಲ್ಲಿ ಹೆಲ್ಮಟ್ ಧರಿಸದೆ ವಾಹನ ಸವಾರಿ ಮಾಡಿದ್ದರಿಂದ ಮೋಟಾರು ವಾಹನ ಕಾಯಿದೆಯ ಸಂಚಾರಿ ನಿಯಮದಡಿ 500 ರೂಪಾಯಿ ದಂಡ ಪಾವತಿಸಿ ಎಂದು ಸಂದೇಶ ಬಂದಿದೆ. ಪೊಲೀಸರು ದಂಡ ವಿಧಿಸಿರುವ ಕೆಎ 21 ಬಿ 3862 ಎಂಬ ಹೆಸರಿನ ವಾಹನವು ಆಟೋವಾಗಿದೆ. ಆದರೆ ಪೊಲೀಸರು ದ್ವಿಚಕ್ರ ವಾಹನವೆಂದು ದಂಡ ವಿಧಿಸಲಾಗಿದೆ.
ಉಪ್ಪಿನಂಗಡಿಯ ಪೆರಿಯಡ್ಕ ನಿವಾಸಿ ರೋಹಿತ್ ಅವರು ಸೆಪ್ಟೆಂಬರ್ 12ರಂದು ತನ್ನ ಆಟೋ ಉಪ್ಪಿನಂಗಡಿಯಲ್ಲೇ ಇತ್ತು. ಹಾಗೂ ತನಗೆ ಯಾವುದೇ ಸ್ವಂತ ದ್ವಿಚಕ್ರ ವಾಹನವಿಲ್ಲ ಎಂದು ತಿಳಿಸಿದ್ದಾರೆ.
ಹೆಲ್ಕೆಟ್ ಧರಿಸದೆ ನಿಯಮ ಉಲ್ಲಂಘಿಸಿರುವುದರಿಂದ ದಂಡ ವಿಧಿಸುವಂತೆ ರೋಹಿತ್ ಅವರಿಗೆ ಸಂದೇಶ ಬಂದಿದೆ. ಹೀಗಾಗಿ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ಸದೇಶ ಕಳುಹಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಸಿ.ಸಿ.ಕ್ಯಾಮರಾದಲ್ಲಿ ನಂಬರ್ ತಪ್ಪಾಗಿ ದಾಖಲಾಗುವ ಸಾಧ್ಯವಿಲ್ಲ. ಜೊತೆಗೆ ಸಿ.ಸಿ.ಕ್ಯಾಮೆರಾ ಆಧರಿಸಿ ಯಾವುದೇ ದಂಡದ ಮೆಸೇಜ್ಗಳು ತಕ್ಷಣವೇ ಬರುವುದಿಲ್ಲ.
ರೋಹಿತ್ ಅವರು ಈ ಸಂದೇಶ ನೋಡಿ ಕಂಗಾಲಾಗಿದ್ದು, ತಕ್ಷಣವೇ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ನೋಟಿಸ್ ಬಾರದೆ ಯಾವುದೇ ನಿರ್ಧಾರ ಕೈಗೊಳ್ಳಬೇಡಿ ಎಂದಿದ್ದಾರೆ. ಬಳಿಕ ರೋಹಿತ್ ಮೈಸೂರಿನ ತಲಕಾಡು ಪೊಲೀಸ್ ಠಾಣೆಯ ನಂಬರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ತಲಕಾಡು ಪೊಲೀಸರು ನಮ್ಮಲ್ಲಿ ಸಿ.ಸಿ. ಕ್ಯಾಮೆರಾದ ಮೂಲಕ ವಾಹನಗಳಿಗೆ ದಂಡ ಹಾಕುವ ವ್ಯವಸ್ಥೆಯಿಲ್ಲ ಎಂದು ಹೇಳಿದ್ದಾರೆ. ಇದರಿಂದ ಈ ಸಂದೇಶ ವಂಚನೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಯುವಕ ಆತ್ಮಹತ್ಯೆ: ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ!
ಮಂಗಳೂರು: ಕಾಲೇಜಿನ ವಿದ್ಯಾರ್ಥಿಯೊಬ್ಬ ಸುರತ್ಕಲ್ನ ಪ್ರಗತಿನಗರದಲ್ಲಿರುವ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಚಿಕ್ಕಬಳ್ಳಾಪುರ ಮೂಲದ ಮೋಹನ್ ಕುಮಾರ್ ಮೇಟಿ (22) ಮೃತ ಯುವಕ.ಸೆ. 12ರಂದು ಮೋಹನ್ ಕುಮಾರ್ ಮೇಟಿ ಅವರ ತಾಯಿ ಆತನಿಗೆ ಕರೆ ಮಾಡಿದ್ದರು. ಮೋಹನ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಮೋಹನ್ ಕರೆ ಸ್ವೀಕರಿಸದ ಕಾರಣ, ಅವರ ತಾಯಿ ಗಾಬರಿಗೊಂಡು, ಆತ ವಾಸಿಸುತ್ತಿದ್ದ ನಿವಾಸವನ್ನು ಪರಿಶೀಲಿಸಲು ಮನೆಯ ಮಾಲೀಕರ ಬಳಿ ಕೇಳಿಕೊಂಡಿದ್ದಾರೆ. ಅದರಂತೆ ಮನೆ ಮಾಲೀಕರು ಬಾಡಿಗೆ ಮನೆ ಬಳಿ ಹೋಗಿ ನೋಡಿದಾಗ ಮೋಹನ್ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದು, ದೇಹ ಬಹುತೇಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಪಡುಬಿದ್ರಿ:ಬಚ್ಚಲು ಕೋಣೆಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ
ಪಡುಬಿದ್ರಿ: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊರ್ವ ಮನೆಯ ಬಚ್ಚಲು ಕೋಣೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಬೇಂಗ್ರೆ ನಿವಾಸಿ ್ರಧರ ಪೂಜಾರಿ (67). ಸೆ.15ರಂದು ಸಂಜೆಯ ವೇಳೆ ಕುತ್ತಿಗೆಗೆ ನೈಲಾನ್ ಹಗ್ಗ ಬಿಗಿದು ಕೊಂಡು ಬಚ್ಚಲು ಕೋಣೆಯಲ್ಲಿ ವಿಷ ಸೇವಿಸಿ ಬಿದ್ದಿದ್ದವರನ್ನು ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಅವರು ಸಾವನ್ನಪ್ಪಿದ್ದಾರೆ.
ಮನೆಯ ಕೋಣೆಯಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಮೃತರಿಗೆ ರಕ್ತದೊತ್ತಡ ಹಾಗೂ ಕಾಲು ನೋವು ಇದ್ದು, ಇದರ ಕೊರಗಿನಿಂದ ಅಥವಾ ಇನ್ಯಾವುದೋ ಕಾರಣದಿಂದ ಕೃತ್ಯವೆಸಗಿರಬಹುದು ಎಂದು ಅವರ ಪುತ್ರ ಸುಧೀರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.