ಮಂಗಳೂರು: ಮನೆಯನ್ನು ಖರೀದಿಸಿ ಅದರ ಗೃಹಪ್ರವೇಶ ನಡೆದ ಕೇವಲ ಐದೇ ದಿನಕ್ಕೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆಗೆ ಶರಣಾದ ಘಟನೆಯು ಉಳ್ಳಾಲದ ಕುಂಪಲ ಚಿತ್ರಾಂಜಲಿ ನಗರದಲ್ಲಿ ಸಂಭವಿಸಿದೆ.
ವಿದೇಶದಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಅಶ್ವಿನಿ ಬಂಗೇರ ಮೂಲತಃ ಫರಂಗಿಪೇಟೆಯ ನಿವಾಸಿ. ಕುಂಪಲದ ಚಿತ್ರಾಂಜಲಿ ನಗರದಲ್ಲಿ ಸಂಗೀತಾ ಎಂಬವರಿಂದ ಅಶ್ವಿನಿ ಈ ಮನೆಯನ್ನು ಖರೀದಿ ಮಾಡಿದ್ದರು.
ಜೂನ್ ಮೂರರಂದು ಮನೆಯ ಗೃಹಪ್ರವೇಶ ಕಾರ್ಯ ನಡೆದಿತ್ತು. ಈ ಮನೆಯನ್ನು ಅಶ್ವಿನಿ ಬ್ಯಾಂಕ್ನಲ್ಲಿ ಸಾಲ ಮಾಡಿ ಖರೀದಿ ಮಾಡಿದ್ದಳು ಎನ್ನಲಾಗಿದೆ. ಈ ಮನೆಯಲ್ಲಿ ಅಶ್ವಿನಿ ತಾಯಿ ದೇವಕಿ ಹಾಗೂ ದೊಡ್ಡಮ್ಮನ ಮಕ್ಕಳು ವಾಸವಿದ್ದರು. ಬುಧವಾರ ರಾತ್ರಿ ಮನೆಯ ಕೋಣೆಯಲ್ಲಿಯೇ ಅಶ್ವಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸರಿಗೆ 24 ಪುಟಗಳ ಡೆತ್ ನೋಟ್ ಸಿಕ್ಕಿದೆ. ಡೆತ್ನೋಟ್ನಲ್ಲಿ ಅಶ್ವಿನಿ ಬ್ಯಾಂಕ್ ಸಿಬ್ಬಂದಿ ನೀಡುತ್ತಿರುವ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ. ಎನ್ನಲಾಗಿದೆ. ತಾನು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದು ಬ್ಯಾಂಕ್ನಲ್ಲಿ ಸಾಲ ಪಡೆದಿದ್ದೆ. ಆದರೆ ಸಾಲ ತೀರಿಸುವ ವಿಚಾರವಾಗಿ ಬ್ಯಾಂಕ್ನಿಂದ ಕಿರುಕುಳವಾಗಿತ್ತು ಎಂದು ಡೆತ್ನೋಟ್ನಲ್ಲಿ ಅಶ್ವಿನಿ ಬರೆದುಕೊಂಡಿದ್ದಾರೆ.ಅಲ್ಲದೇ ಪ್ರಿಯಕರನ ಹೆಸರನ್ನೂ ಡೆತ್ನೋಟ್ನಲ್ಲಿ ಉಲ್ಲೇಖಿಸಿರುವ ಅಶ್ವಿನಿ ಐ ಲವ್ ಯೂ ಎಂದು ಬರೆದಿದ್ದಾಳೆ. ಅಲ್ಲದೇ ನನ್ನ ಐ ಫೋನ್ನ್ನು ನನ್ನ ಪ್ರಿಯಕರನಿಗೆ ನೀಡಿ ಎಂದೂ ಸಹ ಬರೆದಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.ಕೊಲ್ಲೂರಿಗೆ ಬಂದವರ ಚಿನ್ನ ಕಳ್ಳತನ!: ಕೇರಳದ ಕಾಸರಗೋಡು ಶಾರದಾ ನಗರದ ಹಣಂಗೋಡಿನ ದಂಪತಿ ತಮ್ಮ ಮಕ್ಕಳೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಜೂ 4ರಂದು ಶ್ರೀ ದೇವಿಯ ದರ್ಶನಕ್ಕೆಂದು ಆಗಮಿಸಿದ ಸಂದರ್ಭ ಅವರ ವ್ಯಾನಿಟಿ ಬ್ಯಾಗ್ನಲ್ಲಿ ಇಟ್ಟಿದ್ದ ಚಿಕ್ಕ ಪರ್ಸ್ನಲ್ಲಿದ್ದ ಹದಿಮೂರೂವರೆ ಪವನ್ ಚಿನ್ನಾಭರಣ ಕಳವು ಆದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು, ದಾಖಲಾಗಿದೆ.
ಕೋಝಿಕ್ಕೋಡ್/ಕಣ್ಣೂರು
ವಿಮಾನ ನಿಲ್ದಾಣದಲ್ಲಿ 2 ಕೋಟಿ ರೂ.ಗೂ ಅಧಿಕ ಮೌಲ್ಯದ 3.635 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿ ಕಾರಿಗಳು
ವಶಪಡಿಸಿಕೊಂಡಿದ್ದು, ಒಟ್ಟು ನಾಲ್ವರು ಆರೋಪಿಗಳನ್ನು ವಿಮಾನ ಬಂಧಿಸಿದ್ದಾರೆ.ನಿಲ್ದಾಣದಲ್ಲಿ ಕೋಝಿಕೋಡ್
ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ 1 ಕೋಟಿ ಮೌಲ್ಯದ 1,838 ಕೆಜಿ ಚಿನ್ನದ ಮಿಶ್ರಣ ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಸ್ಟೈಸ್ ಜೆಟ್ ಏರ್ಲೈನ್ಸ್ನಲ್ಲಿ ಬಂದಿಳಿದ ಮಲಪುರಂ ವಳ್ಳುವಂಬಂ ನಿವಾಸಿ ನೂರೆಮುಚ್ಚಿ
ಮುಹಮ್ಮದ್ ಶಾಫಿ(33) ಮತ್ತು ಇಂಡಿಗೋ ಏರ್ ಲೈನ್ಸ್ನಲ್ಲಿ ಬಂದಿಳಿದ ಚಕಿಡಿಪುರಂ ನಿವಾಸಿ ಎಂಬವರನ್ನು
ವಶಕ್ಕೆ ಪಡೆಯಲಾಗಿದೆ.
ಕ್ಯಾಪ್ಯೂಲ್
ಗಳಾಗಿ ದೇಹದಲ್ಲಿ ಬಚ್ಚಿಟ್ಟಿದ್ದ 30 ಲಕ್ಷ ಮೌಲ್ಯದ 578 ಗ್ರಾಂ ಚಿನ್ನದ ಮಿಶ್ರಣ ವಶಪಡಿಸಿಕೊಳ್ಳಲಾಗಿದೆ.
ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಶಿರಗುಪ್ಪಿ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಪಾದಚಾರಿ ಸಾವನ್ನಪ್ಪಿದ್ದು, ನಡು ರಸ್ತೆಯಲ್ಲಿಯೇ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರಸ್ತೆ ದಾಟುತ್ತಿದ್ದ ಪಾದಚಾರಿ ಬಸವರಾಜ್ ಮಲನಾಡ ಎಂಬವರು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.