ಕರಾವಳಿಯಲ್ಲಿ ಗಣೇಶೋತ್ಸವದ ರಂಗು!
– ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಿದ್ಧತೆ
– ಹಳ್ಳಿ ಹಳ್ಳಿಯಲ್ಲೂ ಗಣೇಶ ಹಬ್ಬದ ಸಂಭ್ರಮ
NAMMUR EXPRESS NEWS
ಉಡುಪಿ/ಕರಾವಳಿ: ಗಣೇಶ ಚತುರ್ಥಿಯ ಸಂಭ್ರಮದ ಎಲ್ಲೆಡೆ ಜೋರಾಗಿದೆ. ಒಂದು ದಿನ ಮಾತ್ರ ಬಾಕಿ ಉಳಿದಿದ್ದು ಎಲ್ಲೆಡೆ ಗಣೇಶೋತ್ಸವಕ್ಕೆ ಅಂತಿಮ ಹಂತದ ಸಿದ್ಧತೆ ನಡೆದಿದೆ.
ಕರಾವಳಿಯಲ್ಲೂ ಗಣೇಶ ಸಂಭ್ರಮ ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿದ್ಧತೆ ನಡೆದಿದೆ. ಶುಕ್ರವಾರ ಗೌರಿ ಹಬ್ಬ ಮತ್ತು ಶನಿವಾರ ಗಣಪತಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಗಣೇಶ ಹಬ್ಬ ನಡೆಯಲಿದೆ.
ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯನ್ನು ಒಳಗೊಂಡಿ ರುವ ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 165 ಕಡೆಗಳಲ್ಲಿ ಮತ್ತು ಜಿಲ್ಲಾ ವ್ಯಾಪ್ತಿಯ 221 ಸೇರಿ ಒಟ್ಟು 386 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಡೆಯಲಿದೆ. ಈಗಾಗಲೇ ಸಂಘ ಸಂಸ್ಥೆಗಳು ಗಣೇಶನ ಹಬ್ಬಕ್ಕೆ ಸಜ್ಜುಗೊಂಡಿದ್ದಾರೆ.
ಪೆಂಡಾಲು ನಿರ್ಮಾಣ, ಸ್ವಾಗತ ಕಮಾನು, ದೀಪಾಲಂಕಾರ ಸಹಿತ ಉತ್ಸವ ಆಚರಣೆಗೆ ಸಂಬಂಧಿಸಿದ ಸಿದ್ದತೆ ಅಂತಿಮ ಹಂತದಲ್ಲಿವೆ.
ಪೊಲೀಸ್ ಲಾಖೆ ಶಾಂತಿ ಕಾಪಾಡಲು ಎಲ್ಲೆಡೆ ಬಂದೋಬಸ್ತ್ ಹಾಕಿದ್ದಾರೆ.
ಉಡುಪಿಯಲ್ಲಿ ಸಂಭ್ರಮದ ಸಿದ್ಧತೆ: ಉಡುಪಿ ಜಿಲ್ಲೆಯಲ್ಲೂ ಗೌರಿ, ಗಣೇಶ ಹಬ್ಬದ ಸಂಭ್ರಮ ಶುರುವಾಗಿದೆ.
ಶುಕ್ರವಾರ ಬಹುಪಾಲು ಮಹಿಳೆಯರು ಮನೆಯಲ್ಲೇ ಪೂಜೆ ಸಲ್ಲಿಸುತ್ತಾರೆ. ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಲಿದೆ.
ಹೂ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೂವುಗಳ ಮಾರಾಟದಲ್ಲಿ ನಿರತರಾಗಿದ್ದಾರೆ. ನಗರದ ಹೂವಿನ ಹಾಗೂ ಹಣ್ಣು ಮಾರಾಟದಲ್ಲೂ ಉತ್ತಮ ವ್ಯಾಪಾರ ನಡೆಯಿತು. ಬೇಕರಿ ತಿನಿಸುಗಳ ಖರೀದಿಗೂ ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಕಂಡುಬಂದಿದೆ.
ಹೊರ ಊರಲ್ಲಿದ್ದವರು ಕೂಡ ಊರಿಗೆ ಬಂದು ಗಣೇಶೋತ್ಸವದಲ್ಲಿ ತೊಡಗಿಸಿಕೊಂಡಿದ್ದಾರೆ.