ಟಾಪ್ ನ್ಯೂಸ್ ಕರಾವಳಿ
– ದೇವರ ಚಿನ್ನಾಭರಣ ಕದ್ದ ದೇವಸ್ಥಾನದ ಅರ್ಚಕ ಸಿಕ್ಕಿ ಬಿದ್ದ!
– ನೀರು ತುಂಬಿದ ಬಕೆಟಿಗೆ ಬಿದ್ದು ಮೃತಪಟ್ಟ ಮಗು
– ದೈವ ನರ್ತಕ ಸಮುದಾಯದ ವಿರುದ್ಧ ಸುಳ್ಳು ಸುದ್ದಿ: ಕೇಸ್?
– ಮರ್ಮಾಂಗ ಹಿಡಿದೆಳೆದ ಹುಡುಗರು: ಬಾಲಕ ಆಸ್ಪತ್ರೆಗೆ ದಾಖಲು
– ಪಿಜಿ ವೈದ್ಯನೊಬ್ಬ ಕಂಠಪೂರ್ತಿ ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ!
NAMMUR EXPRESS NEWS
ಕುಂದಾಪುರ: ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ದೇವಿಗೆ ಅರ್ಪಿಸಿದ 21 ಲಕ್ಷ ಮೌಲ್ಯದ ಚಿನ್ನದ ಅಭರಣಗಳನ್ನು ಕಳವುಗೈದು ಮತ್ತು ಕೆಲವು ಚಿನ್ನಾಭರಣಗಳನ್ನು ನಕಲಿಯಾಗಿ ದೇವರ ಮೂರ್ತಿ ಮೇಲೆ ಹಾಕಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಸಿ ತಾಲೂಕಿನ ಸಾಲಕಣಿ ಗ್ರಾಮದ ಮೂರೆಗಾರ ಎಂಬಲ್ಲಿನ ನರಸಿಂಹ ಭಟ್ (43) ಬಂಧಿತ ಆರೋಪಿಯಾಗಿದ್ದು, ಈತ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದ ಅಚರ್ಕನಾಗಿದ್ದ.ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸೇವೆ, ಹರಕೆ ರೂಪದಲ್ಲಿ ನೀಡಿದ ಚಿನ್ನಾಭರಣಗಳನ್ನು ದೇವರ ಮೂರ್ತಿಗೆ ಅಲಂಕಾರ ಮಾಡಿದ ರೀತಿಯಲ್ಲಿ ಪ್ರತಿದಿನ ದೇವರ ಮೂರ್ತಿಯ ಮೈಮೇಲೆ ಇರುತ್ತಿತ್ತು. ಸೆ. 21 ರಂದು ಸಂಜೆ 7 ಗಂಟೆ ಸುಮಾರಿಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ಮಾಡುತ್ತಿದ್ದ ಅರೊಪಿ ಅರ್ಚಕನಲ್ಲಿ ನವರಾತ್ರಿ ಉತ್ಸವದ ಸಲುವಾಗಿ ದೇವರ ಮೈಮೇಲಿದ್ದ ಚಿನ್ನಾಭರಣಗಳನ್ನು ಶುದ್ಧಚಾರ ಮಾಡಲು ನೀಡುವಂತೆ ಹೇಳಿ ಪಡೆದುಕೊಂಡಾಗ ಆ ಆಭರಣಗಳು ಈ ಹಿಂದೆ ಇದ್ದ ಆಭರಣಗಳಂತೆ ಇರದೇ ಬೇರೆ ರೀತಿಯಲ್ಲಿ ಇದ್ದ ಹಾಗೂ ಅಸಲಿ ಚಿನ್ನದಂತೆ ಕಂಡುಬಂದಿಲ್ಲ. ಈ ಬಗ್ಗೆ ಅಸಲಿ ಚಿನ್ನಾಭರಣಗಳನ್ನು ತಾನು ತೆಗೆದಿರುವುದಾಗಿ ಒಪ್ಪಿಕೊಂಡು ಅವುಗಳನ್ನು ತಾನು ವೈಯಕ್ತಿಕವಾಗಿ ಸ್ವಂತಕ್ಕೆ ಬಳಸಿಕೊಂಡ ಬಗ್ಗೆ ತಿಳಿಸಿದ್ದಾನೆ.ಅಂದಾಜು 21 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೇವರ ಮೂರ್ತಿಯ ಮೇಲಿನಿಂದ ತೆಗೆದು ಕಳವುಗೈದಿದ್ದು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಭಕ್ತರಿಗೆ ಯಾವುದೇ ಸಂಶಯ ಬರಬಾರದೆಂಬ ಉದ್ದೇಶದಿಂದ ಕೆಲವು ನಕಲಿ ಚಿನ್ನಾಭರಣಗಳನ್ನು ದೇವರ ಮೂರ್ತಿಯ ಮೇಲೆ ಹಾಕಿದ್ದರು ಎನ್ನಲಾಗಿದೆ. ಕಳವು ಮಾಡಿದ ಚಿನ್ನಾಭರಣಗಳನ್ನು ತನ್ನ ಸ್ವಂತಕ್ಕೆ ಬೇರೆ ಬೇರೆ ಬ್ಯಾಂಕುಗಳಲ್ಲಿ ಅಡಮಾನ ಇಟ್ಟಿದ್ದಾರೆ ಮೂಲಗಳಿಂದ ತಿಳಿದು ಬಂದಿದೆ.
ಆಟವಾಡುತ್ತಿದ್ದ 1ವರ್ಷದ ಮಗು ನೀರು ತುಂಬಿದ ಬಕೆಟ್ ಗೆ ಬಿದ್ದು ಸಾವು
ಮಂಜೇಶ್ವರ: ಆಟವಾಡುತ್ತಿದ್ದ 1ವರ್ಷದ ಮಗು ನೀರು ತುಂಬಿದ ಬಕೆಟ್ ಗೆ ಬಿದ್ದು ಮೃತಪಟ್ಟ ಘಟನೆ ಮಂಜೇಶ್ವರ ಸಮೀಪದ ಕಡಂಬಾರ್ ಎಂಬಲ್ಲಿ ನಡೆದಿದೆ.
ಕಡಂಬಾರ್ ನ ಹ್ಯಾರಿಸ್ ಹಾಗೂ ಕೈರುನ್ನಿಸ ದಂಪತಿ ಯವರ ಒಂದು ವರ್ಷದ ಫಾತಿಮಾ ಎಂಬ ಮಗು ಮನೆಯಲ್ಲಿ ಆಟ ಆಡುತ್ತಾ ಬಾತ್ ರೂಮ್ ಒಳ ಬಂದು ಅಲ್ಲಿ ನೀರು ತುಂಬಿದ ಬಕೆಟ್ ಗೆ ತಲೆ ಹಾಕಿದ ಪರಿಣಾಮ ಉಸಿರುಕಟ್ಟಿ ಮೃತಪಟ್ಟಿರುತ್ತದೆ.
ದೈವ ನರ್ತಕ ಸಮುದಾಯದ ವಿರುದ್ಧ ಸುಳ್ಳು ಸುದ್ದಿ: ದೂರು
ಕಬ್ಬಿಗ ಎಂಬ ಸಿನೇಮಾದಲ್ಲಿರುವ ದೈವ ಕೋಲದ ದೃಶ್ಯಗಳನ್ನು ನಲಿಕೆ ಸಮುದಾಯವರು ಮಾಡಿದ್ದಾರೆ ಎಂದು ಚಿತ್ರ ತಂಡ ಸುಳ್ಳು ಹೇಳಿರುವುದನ್ನು ಖಂಡಿಸಿ ಹಾಗೂ ದೈವನರ್ತಕರನ್ನು ಕಮೆಂಟ್ ಮೂಲಕ ಅಶ್ಲೀಲವಾಗಿ ನಿಂದಿಸಿದ ವ್ಯಕ್ತಿಯ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ನಲಿಕೆ ಸಮಾಜ ಬಾಂಧವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಪ್ರಭಾಕರ ಓಡಿಲ್ನಾಳ, ಸಂಘದ ಸದಸ್ಯರಾದ ಸಂತೋಷ್ ನಾರಾವಿ, ಮಾಜಿ ಅಧ್ಯಕ್ಷರಾದ ಸೇಸಪ್ಪ ಅಳದಂಗಡಿ, ಹಿರಿಯ ದೈವ ನರ್ತಕರಾದ ವೀರಪ್ಪ ಈದು, ಗಿರಿಯಪ್ಪ ಎಲ್ಲೂರು, ಗೋಪಾಲ ಕೇಲ, ನಾರಾಯಣ ವೇಣೂರು, ಬಾಬು ಪೊಸಲಾಯ ಕಾಂತಪ್ಪ ಪೆರಿಂಜೆ, ರಮೇಶ್ ಪೆರಿಂಜೆ, ಪ್ರಮುಖರಾದ ಗಣೇಶ್ಕಬ್ಬಿಗ ಎಂಬ ಸಿನೇಮಾದಲ್ಲಿರುವ ದೈವ ಕೋಲದ ದೃಶ್ಯಗಳನ್ನು ನಲಿಕೆ ಸಮುದಾಯವರು ಮಾಡಿದ್ದಾರೆ ಎಂದು ಚಿತ್ರ ತಂಡ ಸುಳ್ಳು ಹೇಳಿರುವುದನ್ನು ಖಂಡಿಸಿ ಹಾಗೂ ದೈವನರ್ತಕರನ್ನು ಕಮೆಂಟ್ ಮೂಲಕ ಅಶ್ಲೀಲವಾಗಿ ನಿಂದಿಸಿದ ವ್ಯಕ್ತಿಯ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಿಜಿ ವೈದ್ಯನೊಬ್ಬ ಕಂಠಪೂರ್ತಿ ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ!
ಮಂಗಳೂರು: ಪಿಜಿ ವೈದ್ಯನೊಬ್ಬ ಕಂಠಪೂರ್ತಿ ಮದ್ಯ ಸೇವಿಸಿ ಎಲ್ಲೋ ಬಿದ್ದು, ಮಣ್ಣಿನಿಂದ ಆವೃತವಾಗಿದ್ದ ಬಟ್ಟೆಯಲ್ಲೇ ಆಸ್ಪತ್ರೆಯ ಐಸಿಯು ಪ್ರವೇಶಿಸಿರುವ ಘಟನೆ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಆಸ್ಪತ್ರೆಯ ಐಸಿಯುನಲ್ಲಿ ಆತನನ್ನು ನೋಡಿದ ಅಲ್ಲಿದ್ದ ರೋಗಿಯ ಕಡೆಯವರು ಆಕ್ರೋಶ ವ್ಯಕ್ತಪಡಿಸಿ, ಪೊಲೀಸರನ್ನು ಕರೆಯುವುದಾಗಿಯೂ ಹೇಳಿದರು. ಕೊನೆಗೆ ಆಸ್ಪತ್ರೆಯ ಭದ್ರತ ವಿಭಾಗದ ಸಿಬ್ಬಂದಿ ಆತನನ್ನು ಹೊರಗೆ ಕಳುಹಿಸಿದ್ದಾರೆ. ಇಡೀ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮರ್ಮಾಂಗ ಹಿಡಿದೆಳೆದ ಸಹಪಾಠಿಗಳು,ಬಾಲಕ ಆಸ್ಪತ್ರೆಗೆ ದಾಖಲು!
ಮಂಗಳೂರು: ಶಾಲೆಗೆ ಹೋಗುತ್ತಿದ್ದ ಬಾಲಕನ ಮರ್ಮಾಂಗವನ್ನು ಇಬ್ಬರು ವಿದ್ಯಾರ್ಥಿಗಳು ಹಿಡಿದೆಳೆದ ಪರಿಣಾಮವಾಗಿ ಮರ್ಮಾಂಗ ಊದಿಕೊಂಡು ಬಾಲಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ಆಲಡ್ಕ ನಿವಾಸಿಯಾಗಿರುವ 12 ವರ್ಷದ ಬಾಲಕ ಕಳೆದ ಕೆಲ ಸಮಯಗಳಿಂದ ಕೊಡಗು ಸಂಪಾಜೆಯ ವಸತಿ ನಿಲಯದಲ್ಲಿ ಶಾಲೆಗೆ ಹೋಗುತ್ತಿದ್ದು,ಸೆ.14ರಂದು ರಾತ್ರಿ ವಸತಿ ನಿಲಯದಲ್ಲಿ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು ಬಾಲಕನ ಮರ್ಮಾಂಗವನ್ನು ಹಿಡಿದೆಳೆದಿದ್ದರು.
ಬಳಿಕ ಬಾಲಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವಾಗುತ್ತಿದ್ದ ಪರಿಣಾಮ ಮನೆಗೆ ಬಂದಿದ್ದನು. ಬಾಲಕ ಮರ್ಮಾಂಗ ಊದಿಕೊಂಡಿದ್ದರಿಂದ ತಾಯಿಯೊಡನೆ ವಿಷಯ ತಿಳಿಸಿದನೆನ್ನಲಾಗಿದೆ. ಬಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಈಗ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲು ಜಾರಿ ಹೊಳೆಗೆ ಬಿದ್ದು ಬಾಲಕ ಮೃತ್ಯು!
ಕಾರ್ಕಳ: ತಾಲೂಕಿನ ಇರ್ವತ್ತೂರು ಗ್ರಾಮದ ಗೊಲ್ದಿಂಡಿ ಎಂಬಲ್ಲಿ ಬಾಲಕನೋರ್ವ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಸೆ.21ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಗೊಲ್ದಿಂಡಿ ನಿವಾಸಿ ಪುಷ್ಪಎಂಬವರ ಮಗ ಚರಣ್ರಾಜ್(13) ಎಂದು ಗುರುತಿಸಲಾಗಿದೆ.
ಸಾಣೂರು ಹೈಸ್ಕೂಲಿ ನಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ, ಮಧ್ಯಾಹ್ನ ಶಾಲೆಗೆ ರಜೆ ಇದ್ದ ಕಾರಣ ಇತರ ಮಕ್ಕಳ ಜೊತೆ ಆಟ ಆಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಆತ ಆಕಸ್ಮಿಕವಾಗಿ ಕಾಲು ಜಾರಿ ಶಾಂಭವಿ ಹೊಳೆಗೆ ಬಿದ್ದಿದ್ದು, ಕೂಡಲೇ ಸಾರ್ವಜನಿಕರು ಆತನನ್ನು ನೀರಿನಿಂದ ಮೇಲಕ್ಕೆ ಎತ್ತಿ ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಚರಣ್ರಾಜ್, ದಾರಿ ಮಧ್ಯೆ ಮೃತಪಟ್ಯಿರುವುದಾಗಿ ವೈದ್ಯರು ತಿಳಿಸಿದರು.
ಹಿರಿಯಡ್ಕ:ಮಾನಸಿಕ ಖಿನ್ನತೆಯಿಂದ ಕೆರೆಗೆ ಹಾರಿ ಆತ್ಮಹತ್ಯೆ!!
ಹಿರಿಯಡ್ಕ: ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆತ್ರಾಡಿ ಗ್ರಾಮದ ಮದಗ ಚೆನ್ನಿಬೆಟ್ಟಿನ ನಿವಾಸಿ ಶ್ರೀಧರ(58) ಎಂಬವರು ಸೆ.20ರಂದು ಸಂಜೆ ಮನೆಯ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.