ಕರಾವಳಿ ಪ್ರಮುಖ ಸುದ್ದಿಗಳು
ಉಡುಪಿ ಪ್ರಕರಣ: ವಿದ್ಯಾರ್ಥಿನಿಯರಿಗೆ ಜಾಮೀನು!
– ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ
– ಹೆಬ್ರಿಯಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ!
– ಪಡುಬಿದ್ರೆ: ಕ್ರೇನ್ ದುರಂತಕ್ಕೆ ಇಬ್ಬರು ಬಲಿ!
– ಬಿಜೆಪಿಯ ಕಾರ್ಯಕರ್ತನಿಗೆ ಹಲ್ಲೆ: ಓರ್ವ ಅರೆಸ್ಟ್!
NAMMUR EXPRESS NEWS
ಉಡುಪಿ: ( Udupi ) ನೇತ್ರಾ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದ ಮೂವರು ವಿದ್ಯಾರ್ಥಿನಿಯರಿಗೆ ಉಡುಪಿ ನ್ಯಾಯಾಲಯವು ಇಂದು ಷರತ್ತುಬದ್ಧ ಜಾಮೀನು ಮಂಜೂರು ಆದೇಶಿಸಿದೆ. ಆರೋಪಿ ವಿದ್ಯಾರ್ಥಿನಿಯರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಮೂವರು ವಿದ್ಯಾರ್ಥಿನಿಯರು ಜು. 28 ರಂದು ಉಡುಪಿಯ ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಒಂದನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಂ ಪ್ರಕಾಶ್ ಅವರು ತೀರ್ಪು ನೀಡಿದ್ದಾರೆ. ಮೂವರು ವಿದ್ಯಾರ್ಥಿನಿಯರ ಪರವಾಗಿ ನ್ಯಾಯವಾದಿ ಅಸದುಲ್ಲ ವಾದಿಸಿದರು. ತನಿಖಾಧಿಕಾರಿಗಳಿಗೆ ತನಿಖೆಗೆ ಸಹಕರಿಸುವುದು, ವಿಚಾರಣೆ ದಿನ ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗುವುದು, ಸಾಕ್ಷಿಗಳಿಗೆ ಯಾವುದೇ ಬೆದರಿಕೆಯೊಡ್ಡದಿರುವುದು ಮತ್ತು ತಲಾ 20,000ರೂ. ಮೊತ್ತ ಬಾಂಡ್ ನ್ಯಾಯಾಲಯಕ್ಕೆ ಸಲ್ಲಿಸುವುದು ಸೇರಿದಂತೆ ಹಲವು ಶರತುಗಳನ್ನು ನ್ಯಾಯಾಲಯ ವಿಧಿಸಿದೆ.
ಹೆಬ್ರಿಯಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ!
ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ರಿಯ ಶಿವಪುರದಲ್ಲಿ ಜು. 26 ರಂದು ಸಂಭವಿಸಿದೆ. ರಂಗನಾಥ ಶೆಟ್ಟಿ (33) ಎಂಬವರೇ ನೇಣಿಗೆ ಶರಣಾದವರು. ಇವರು ಹಿರಿಯಡ್ಕ ಸೌಹಾರ್ದ ಸೊಸೈಟಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಬುಧವಾರದಂದು ಶಿವಪುರ ಮೇಲ್ ಮುಕ್ಕಾಣಿ ಎಂಬಲ್ಲಿರುವ ಸರಕಾರಿ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿಜೆಪಿಯ ಕಾರ್ಯಕರ್ತನಿಗೆ ಹಲ್ಲೆ: ಓರ್ವ ಅರೆಸ್ಟ್!
ಬಂಟ್ವಾಳದ ಬಡಗಬೆಳ್ಳೂರು ಪ್ರಕರಣವೊಂದರಲ್ಲಿ ಬಿಜೆಪಿ ಕಾರ್ಯಕರ್ತನೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಯೋರ್ವ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆತನನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ.
ಪೊಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನ ಕರ್ತವ್ಯಕ್ಕೆ ಅಡ್ಡಿ : ಇಬ್ಬರು ಆರೋಪಿಗಳ ಬಂಧನ
ಬಂಟ್ವಾಳ: ಪೊಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನಿಸಿದಲ್ಲದೆ, ಕರ್ತವ್ಯಕ್ಕೂ ಅಡ್ಡಿಪಡಿಸಿದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದುಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ್ ಆಚಾರ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಕ್ರೇನ್ ದುರಂತಕ್ಕೆ ಇಬ್ಬರು ಬಲಿ!
– ಅದಾನಿ ಪವರ್ ಪ್ಲಾಂಟ್ ಕಂಪನಿಯಲ್ಲಿ ಅವಘಡ
ಪಡುಬಿದ್ರೆ: ನಂದಿಕೂರು ಅದಾನಿ ಪವರ್ ಪ್ಲಾಂಟ್ ಕಂಪನಿಯಲ್ಲಿ ಕ್ರೇನ್ ಅವಘಡ ಸಂಭವಿಸಿದ್ದು, ರಾಜಸ್ಥಾನ ಮೂಲದ ಇಬ್ಬರು ಮೃತಪಟ್ಟರುವುದಾಗಿ ತಿಳಿದುಬಂದಿದೆ. ಯಾವುದೇ ಸುರಕ್ಷತೆ ಇಲ್ಲದೆ ಕೆಲಸ ಮಾಡುತ್ತಿದ್ದ ಸಂಧರ್ಭ ಕ್ರೇನ್ ರೋಪ್ ತುಂಡಾಗಿ ಕಟ್ಟಡದ ಭೀಮ್ ನೆಲಕ್ಕುರುಳಿ ಅವಘಡ ಸಂಭವಿಸಿದ್ದು, 23ರ ಹರೆಯದ ಯುವಕನೊಬ್ಬ ಸಾವನ್ನಪ್ಪಿದ್ದು, ಇನ್ನೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ನಂತರ ಮೃತಪಟ್ಟಿದ್ದಾರೆ. ಇದಕ್ಕೆಲ್ಲಾ ನೇರ ಹೊಣೆ ಕೇರಳ ಮೂಲದ ಸನ್ನಿ ಮತ್ತು ವೆಲ್ವೆಕ್ ಕಂಪನಿ ಎಂದು ಕೆಲಸಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾದ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಇದ್ದ ಕಾರಣ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023