ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳು, ಕುಟುಂಬದ ವಿರುದ್ಧ ಹೇಳಿಕೆ ನೀಡೋ ಹಾಗಿಲ್ಲ!
– 70 ಯೂಟ್ಯೂಬರ್ ಗಳ ಮೇಲೆ ನಿರ್ಬಂಧಕ ಆಜ್ಞೆ
– ಕಾರ್ಕಳ: ಅಪಘಾತಕ್ಕೆ ಬೈಕ್ ಸವಾರ ಮೃತ್ಯು
– ಮಂಗಳೂರು :ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 14.50 ಲಕ್ಷ ಮೌಲ್ಯದ ಚಿನ್ನ ವಶ
– ಮೂಡುಬಿದ್ರೆ: ಖಾಸಗಿ ಬಸ್ಸಿನಿಂದ ಬಿದ್ದು ಮಹಿಳೆ ಸಾವು
NAMMUR EXPRESS NEWS
ಬೆಂಗಳೂರು: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳು ಹಾಗೂ ಅವರ ಕುಟುಂಬದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡದಂತೆ ಪ್ರಮುಖರು ಹಾಗೂ ಕೆಲವು ಯೂಟ್ಯೂಬ್ ಚಾನೆಲ್ ಮೇಲೆ ಕೋರ್ಟ್ ಸ್ಟೇ ನೀಡಿದೆ. ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ, ಅಂಬಿಕಾ ಪ್ರಭು ಮತ್ತು 70 ಯೂಟ್ಯೂಬರ್ ಗಳ ಮೇಲೆ ನಿರ್ಬಂಧಕ ಆಜ್ಞೆಯನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿ ನೀಡಿದೆ.
ಬಸ್ ಬೈಕ್ ನಡುವೆ ಅಪಘಾತ, ಬೈಕ್ ಸವಾರ ಮೃತ್ಯು
ಕಾರ್ಕಳ :ಪಡುಬಿದ್ರಿಯಲ್ಲಿ ಖಾಸಗಿ ಬಸ್ ಹಾಗೂ ಬೈಕ್ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಬೈಕ್ ಸವಾರ ಅಜೆಕಾರು ಬೊಂಡುಕುಮೇರಿ ನಿವಾಸಿ ಅಶ್ಚಿತ್ ಶೆಟ್ಟಿ (32) ಸಾವಿಗೀಡಾಗಿದ್ದಾರೆ. ಮಂಗಳೂರಿನಿಂದ ಕಾರ್ಕಳ ಬರುತ್ತಿದ್ದ ನವದುರ್ಗಾ ಬಸ್ ಗೆ ಬೈಕ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿತ್ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ.ಅಜೆಕಾರಿನಲ್ಲಿ ಗೂಡ್ಸ್ ಗಾಡಿ ಬಾಡಿಗೆ ನಡೆಸುತ್ತಿದ್ದ ಅಶ್ವಿತ್ ಶೆಟ್ಟಿ ತಿಂಗಳ ಹಿಂದೆ ಬೈಕ್ನಲ್ಲೇ ಭಾರತ ಪರ್ಯಟನೆ ನಡೆಸಿದ್ದರು.
ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 14.50 ಲಕ್ಷ ಮೌಲ್ಯದ ಚಿನ್ನ ವಶ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 14.50 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಆಗಮಿಸಿದ ಈ ಪ್ರಯಾಣಿಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾನೆ. ಆತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ನಾಲ್ಕು ರಟ್ಟಿನ ಪೆಟ್ಟಿಗೆಯ ಒಳಭಾಗದಲ್ಲಿ ಇರಿಸಲಾಗಿದ್ದ ನಾಲ್ಕು ನೀಲಿ ಬಣ್ಣದ ಕಾರ್ಬನ್ ನ ದಪ್ಪದ ಕಾಗದದ ಹಾಳೆಗಳ ಎರಡು ಪದರಗಳ ನಡುವೆ ಬಚ್ಚಿಟ್ಟು ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಕಸ್ಟಮ್ಸ್ ಆಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡು 242 ಗ್ರಾಂ ಚಿನ್ನದ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 14.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಖಾಸಗಿ ಬಸ್ಸಿನಿಂದ ಬಿದ್ದು ಮಹಿಳೆ ಸಾವು
ಮೂಡುಬಿದಿರೆ: ಬಸ್ ನಿಂದಾ ಬಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟ ಘಟನೆ ಮೂಡುಬಿದಿರೆ ಪೋಲೀಸ್ ಠಾಣಾ ವ್ಯಾಪ್ತಿಯ ಮಾರೂರಿನಲ್ಲಿ ನಡೆದಿದೆ. ಮಾರೂರು ಕುಂಡೋಡಿ ನಿವಾಸಿ ನೀಲಮ್ಮ (66) ದುರ್ಘಟನೆಯಲ್ಲಿ ಸಾವನ್ನಪ್ಪಿದವರು. ನೀಲಮ್ಮ ಅವರು ಬಿಪಿ, ಶುಗರ್ ಚೆಕ್ ಮಾಡಲೆಂದು ತನ್ನ ಮೊಮ್ಮಗನ ಜತೆ ಮೂಡುಬಿದಿರೆ ಆಸ್ಪತ್ರೆಗೆಂದು ಸಾಯಿ ಟ್ರಾವೆಲ್ಸ್ ಎಂಬ ಹೆಸರಿನ ಖಾಸಗಿ ಬಸ್ಸಿಗೆ ಹತ್ತಿದರು. ಈ ಸಂದರ್ಭ ಬಸ್ಸಿನ ನಿರ್ವಾಹಕ ರೈಟ್ ಕೊಟ್ಟಿದ್ದರಿಂದ ಚಾಲಕ ಬಸ್ ಚಲಾಯಿಸಿದಾಗ ನೀಲಮ್ಮ ಅವರು ಆಯತಪ್ಪಿ ಬಸ್ಸಿನ ಕೆಳಗೆ ಬಿದ್ದಿದ್ದಾರೆ.ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.