ಮಲ್ಪೆಯಲ್ಲಿ ಗ್ರಾನೈಟ್ ಬಿದ್ದು ಇಬ್ಬರು ದುರ್ಮರಣ!
– ಲಾರಿಯಲ್ಲಿದ್ದ ಗ್ರಾನೈಟ್ ಇಳಿಸುವಾಗ ದುರಂತ
– ಉಜಿರೆ: ರಿಕ್ಷಾ, ಟೆಂಪೊ, ಲಾರಿ ಅಪಘಾತ
– ಬಂಟ್ವಾಳ: ಅಕ್ರಮ ಮರ ಸಾಗಾಟ ಪ್ರಕರಣ
NAMMUR EXPRESS NEWS
ಉಡುಪಿ: ಕಂಟೇನರ್ ಲಾರಿಯಲ್ಲಿ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಲ್ಪೆಯ ತೊಟ್ಟಂನಲ್ಲಿ ಗುರುವಾರ ನಡೆದಿದೆ. ಮೃತರನ್ನು ಒರಿಸ್ಸಾ ಮೂಲದ ಬಾಬುಲ್ಲ (38) ಹಾಗೂ ಭಾಸ್ಕರ್ (40) ಎಂದು ಗುರುತಿಸಲಾಗಿದೆ. ತೊಟ್ಟಂನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮನೆಗೆ ಗ್ರಾನೈಟ್ ತರಲಾಗಿದ್ದು ಕಂಟೇನರ್ ಲಾರಿಯಲ್ಲಿದ್ದ ಗ್ರಾನೈಟ್ ಇಳಿಸುವಾಗ ಆಕಸ್ಮಿಕವಾಗಿ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಜೀವ ರಕ್ಷಕ ಈಶ್ವರ್ ಮಲ್ಪೆ ತಂಡದವರು ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಉಜಿರೆ: ರಿಕ್ಷಾ, ಟೆಂಪೊ, ಲಾರಿ ನಡುವೆ ಭೀಕರ ಅಪಘಾತ
ಬೆಳ್ತಂಗಡಿ: ರಿಕ್ಷಾ, ಟೆಂಪೊ, ಲಾರಿಗಳ ನಡುವೆ ಭೀಕರ ಅಪಘಾತ ಮೂವರು ಗಾಯಗೊಂಡ ಘಟನೆ ಬುಧವಾರ ರಾಷ್ಟ್ರೀಯ ಹೆದ್ದಾರಿ 73ರ ಉಜಿರೆ ಸಮೀಪದ ಟಿಬಿ ಕ್ರಾಸ್ ಬಳಿಯ ನಡೆದಿದೆ ಬೆಳ್ತಂಗಡಿ ಯಿಂದ ಉಜಿರೆ ಕಡೆಗೆ ಹೋಗುತ್ತಿದ್ದ ವೇಳೆ ಆಟೋ ರಿಕ್ಷಾದ ಮುಂದೆ ಇದ್ದ ಲಾರಿಯೊಂದು ಬ್ರೇಕ್ ಹಾಕಿ ನಿಲ್ಲಿಸಿದ ಕಾರಣ ರಿಕ್ಷಾವನ್ನೂ ನಿಲ್ಲಿಸಬೇಕಾಯಿತು. ಆದರೆ ದುರದೃಷ್ಟವಷಾತ್ ಹಿಂದಿನಿಸಿದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡಿದಿದೆ. ಎರಡೂ ಲಾರಿಗಳ ಮಧ್ಯೆ ಸಿಲುಕಿಕೊಂಡ ಆಟೋ ರಿಕ್ಷಾ ಸಂಪೂರ್ಣ ಹಾನಿಗೊಳಗಾಗಿದೆ.ರಿಕ್ಷಾ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಕ್ರಮ ಮರ ಸಾಗಾಟ: ಆರೋಪಿ ವಶ
ಬಂಟ್ವಾಳ : ಅಕ್ರಮವಾಗಿ ಮರ ಮಟ್ಟುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇಲೆ ದಾಳಿ ಮಾಡಿ ಆರೋಪಿ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಬಂಟ್ವಾಳದ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ವಾಹನ ಮತ್ತು ಸೊತ್ತಿನ ಮೌಲ್ಯ ರೂ.3 ಲಕ್ಷ ಎಂದು ಅಂದಾಜಿಸಲಾಗಿದೆ. ಸೆಪ್ಟೆಂಬರ್ 12 ರಂದು ರಂದು ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ಗ್ರಾಮದ ಸಾರು ಎರ್ಮಾಳ್ ಪದವು ರಸ್ತೆ ಯ ಪಟ್ಟಾಜೆ ಎಂಬಲ್ಲಿ ಅಕ್ರಮವಾಗಿ ಕಾಡು ಜಾತಿಯ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ಪಡೆದ ಅಧಿಕಾರಿಗಳು ಪತ್ತೆ ಹಚ್ಚಿ ಕೇಸು ದಾಖಲಿಸಿಕೊಂಡಿದ್ದಾರೆ. ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ, ಉಪವಲಯ ಅರಣ್ಯಾಧಿಕಾರಿ ಯಶೋಧರ ,ಗಸ್ತು ಅರಣ್ಯ ಪಾಲಕರಾದ ಜಿತೇಶ್ ಪಿ.,ಶೋಭಿತ್ ,ಹಾಗೂ ಇಲಾಖಾ ವಾಹನ ಹಂಗಾಮಿ ಚಾಲಕ ಜಯರಾಮ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.