– ಉಡುಪಿ: ಕಾರು ಢಿಕ್ಕಿ, ಸ್ಕೂಟರ್ ಸವಾರ ಆಸ್ಪತ್ರೆಗೆ!
– ಉದ್ಯಾವರ : ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ!
– ಅಕ್ರಮ ಆಸ್ತಿಗಳಿಕೆ ಪ್ರಕರಣ: ವಿವಿಧೆಡೆ ಲೋಕಾಯುಕ್ತ ದಾಳಿ!
– ಮಾದರಿ ನೀತಿ ಸಂಹಿತೆ ಉಲ್ಲಂಘನೆ; ವಿವಿಧೆಡೆ ಪ್ರಕರಣ ದಾಖಲು
– ಆಂಧ್ರದಿಂದ ಮಂಗಳೂರಿಗೆ ಗಾಂಜಾ ಸಾಗಿಸಿ ಮಾರಾಟ: ಆರೋಪಿ ಅರೆಸ್ಟ್!
NAMMUR EXPRESS NEWS
ಉಡುಪಿ: ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯಗೊಂಡ ಘಟನೆ ಅಂಬಾಗಿಲು- ಕಲ್ಸಂಕ ರಸ್ತೆಯಲ್ಲಿ ಸಂಭವಿಸಿದೆ. ಅಂಬಾಗಿಲಿನ ಪ್ರಶಾಂತ್ ತನ್ನ ಸ್ಕೂಟರ್ನಲ್ಲಿ ಕಲ್ಸಂಕದಿಂದ ಅಂಬಾಗಿಲಿನತ್ತ ತೆರಳುತ್ತಿದ್ದಾಗ ಎದುರುಗಡೆಯಿಂದ ಅತಿವೇಗದಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗಾಯಗೊಂಡಿರುವ ಪ್ರಶಾಂತ್ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ವಿರುದ್ಧ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಾವರ : ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ:
ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಜಂಕ್ಷನ್ ಬಳಿಯ ಚೆಕ್ ಪೋಸ್ಟ್ನಲ್ಲಿ ಪೊಲೀಸರ ಸೂಚನೆಯಂತೆ ನಿಲ್ಲಿಸಿದ್ದ ಕಾರಿಗೆ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಮಹಿಳೆ ಗಾಯಗೊಂಡ ಘಟನೆ ಮಾ. 26ರಂದು ಸಂಜೆ ಸಂಭವಿಸಿದೆ. ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಸಂಪತ್ ಅವರ ಪತ್ನಿ, ಬ್ಯಾಂಕ್ ಆಫ್ ಬರೋಡಾ ಪಾಂಗಾಳ ಶಾಖೆ ಸಿಬಂದಿ ರೇಣುಕಾ ಗಾಯಗೊಂಡವರು. ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಸಂಪತ್ ಅವರ ಪತ್ನಿ, ಬ್ಯಾಂಕ್ ಆಫ್ ಬರೋಡಾ ಪಾಂಗಾಳ ಶಾಖೆ ಸಿಬಂದಿ ರೇಣುಕಾ ಗಾಯಗೊಂಡವರು. ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ರೇಣುಕಾ ಅವರ ಬಲಗಾಲಿನ ಮಂಡಿ, ಕತ್ತು ಹಾಗೂ ಬೆನ್ನಿನ ಭಾಗಕ್ಕೆ ಏಟಾಗಿದ್ದು, ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಆಸ್ತಿಗಳಿಕೆ ಪ್ರಕರಣ: ವಿವಿಧೆಡೆ ಲೋಕಾಯುಕ್ತ ದಾಳಿ:
ಉಡುಪಿ: ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಬುಧವಾರ ವಿವಿಧೆಡೆ ದಾಳಿ ನಡೆಸಿದ್ದಾರೆ. ಎರಡು ವರ್ಷಗಳಿಂದ ಉಡುಪಿಯಲ್ಲಿ ಅಬಕಾರಿ ಇಲಾಖೆಯ ಉಪಆಯುಕೆಯಾಗಿದ್ದು, ಪ್ರಸ್ತುತ ಕಾರವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರೂಪಾ ಅವರ ಬೆಂಗಳೂರಿನಲ್ಲಿರುವ ಎರಡು ಮನೆಗಳು, ಶಿವಮೊಗ್ಗದಲ್ಲಿರುವ ಒಂದು ತೋಟದ ಮನೆ, ಕಾರವಾರದಲ್ಲಿರುವ ಮನೆ ಹಾಗೂ ಕಚೇರಿಗೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಅಪಾರ ಪ್ರಮಾಣದಲ್ಲಿ ಆಸ್ತಿ ಗಳಿಕೆ ಮಾಡಿರುವ ವಿಚಾರ ಲಭಿಸಿದ್ದು, ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ದ.ಕ. ಲೋಕಾಯುಕ್ತ ಎಸ್ಪಿ (ಪ್ರಭಾರ) ಮಲ್ಲಿಕ್ ಸಿ. ನೇತೃತ್ವದಲ್ಲಿ ಉಡುಪಿ ಡಿವೈಎಸ್ಪಿ. ಪಿ.ಪ್ರಕಾಶ್, ಇನ್ಸ್ಪೆಕ್ಟರ್ಗಳಾದ ಮಂಜುನಾಥ್, ರಫಿಕ್ ಅವರನ್ನೊಳಗೊಂಡ 3 ತಂಡಗಳನ್ನು ರಚಿಸಲಾಗಿತ್ತು. ಸ್ಥಳೀಯ ಲೋಕಾಯುಕ್ತ ಪೊಲೀಸರು ಸಹಕರಿಸಿದರು.
ಉಡುಪಿ: ಮಾದರಿ ನೀತಿ ಸಂಹಿತೆ ಉಲ್ಲಂಘನೆ; ವಿವಿಧೆಡೆ ಪ್ರಕರಣ ದಾಖಲು:
ಉಡುಪಿ: ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಾವರ ಚೆಕ್ಪೋಸ್ಟ್ನಲ್ಲಿ 4.51 ಲಕ್ಷ, ಶಿರೂರು ಚೆಕ್ ಪೋಸ್ಟ್ನಲ್ಲಿ 3.50 ಲಕ್ಷ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 7 ಎಫ್ಐಆರ್ ದಾಖಲಾಗಿದ್ದು, ಅದರಲ್ಲಿ 4 ಚುನಾವಣೆಗೆ ಸಂಬಂಧಿಸಿದ್ದಾಗಿದೆ.
ಆಂಧ್ರದಿಂದ ಮಂಗಳೂರಿಗೆ ಗಾಂಜಾ ಸಾಗಿಸಿ ಮಾರಾಟ: ಆರೋಪಿ ನಿಶಾಂತ್ ಶೆಟ್ಟಿ ಅರೆಸ್ಟ್..!
ಮಂಗಳೂರು : ಆಂಧ್ರಪ್ರದೇಶದಿಂದ ಮಂಗಳೂರಿಗೆ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು 6.325 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ವಾಮಂಜೂರು ಸಮೀಪದ ಕುಡುಪು ಪೆದಮಲೆಯ ನಿಶಾಂತ್ ಶೆಟ್ಟಿ (36) ಬಂಧಿತ ಆರೋಪಿಯಾಗಿದ್ದಾನೆ. ಈತ ಸಣ್ಣ ಸಣ್ಣ ಪ್ಯಾಕೆಟ್ನಲ್ಲಿ ರೈಲಿನಲ್ಲಿ ಸಾಗಾಟ ಮಾಡಿಕೊಂಡು ಬಂದು ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ತೊಕ್ಕೊಟ್ಟು ಒಳಪೇಟೆಯ ಕೃಷ್ಣನಗರ ಪರಿಸರದಲ್ಲಿ ಗೂಡ್ಸ್ ಟೆಂಪೋವೊಂದರಲ್ಲಿ ಗಾಂಜಾ ಸಾಗಿಸಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯಿಂದ ಗೂಡ್ಸ್ ಟೆಂಪೋ. 1.50 ಲಕ್ಷ ರೂ.ಮೌಲ್ಯದ 6 ಕೆಜಿ 325 ಗ್ರಾಂ ಗಾಂಜಾ, 2 ಮೊಬೈಲ್ ಫೋನ್ಗಳು, ಡಿಜಿಟಲ್ ತೂಕ ಮಾಪಕ ಮತ್ತಿತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ 9,11,500 ರೂ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.