ಟಾಪ್ ನ್ಯೂಸ್ ಕರಾವಳಿ
-ಉಡುಪಿ: ಅಪಪ್ರಚಾರ ವಿರುದ್ದ ಪ್ರಸಾದ್ ಕಾಂಚನ್ ಆಕ್ರೋಶ: ಶಿಕ್ಷೆ ಆಗುವವರೆಗೆ ಹೋರಾಟ
– ಮಂಗಳೂರು: ಅಪಾರ ಪ್ರಮಾಣದ ಹೋಮ್ ಮೇಡ್ ವೈನ್ ಪತ್ತೆ!
– ಪುತ್ತೂರು ಅಮಾನುಷ ಗೋವಿನ ಸಾಗಾಟ, ರಕ್ಷಣೆ!
– ಕಿನ್ನಿಗೋಳಿ: ಮಳೆ, ಕೊಳೆಯುವ ಭೀತಿಯಲ್ಲಿ ಭತ್ತದ ಬೆಳೆ
– ಮಂಗಳೂರು: ಸ್ಕೂಟರ್ ಮರಕ್ಕೆ ಡಿಕ್ಕಿ : ಓರ್ವ ಸಾವು
NAMMUR EXPRESS NEWS
ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಅಪಪ್ರಚಾರ ನಡೆಸಿದ್ದಲ್ಲದೇ ಪೋಟೋವನ್ನು ವಿರೂಪಗೊಳಿಸಿ ಎಡಿಟ್ ಮಾಡುವ ಮೂಲಕ ಸಾರ್ವಜನಿಕವಾಗಿ ನನ್ನ ತೇಜೋವಧೆ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೆ ಹೋರಾಟ ಮುಂದುವರೆಸುವುದಾಗಿ ಕಾಂಗ್ರೆಸ್ ಮುಖಂಡ, 2018ರ ವಿಧಾನಸಭಾ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಎಚ್ಚರಿಕೆ ನೀಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಾಗೂ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಅವರು ಸ್ಪಷ್ಟನೆಯನ್ನು ಕೂಡ ನೀಡಿರುತ್ತಾರೆ.
ಉಡುಪಿ- ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ನಡೆದ ದಸರಾಕ್ಕೆ ಸೌಹಾರ್ಧತೆಯ ಸಂಕೇತವಾಗಿ ಮುಸ್ಲಿಂ ಮಾಲಿಕತ್ವದ ಎಕೆಎಂಎಸ್ ಎಂಬ ಸಂಸ್ಥೆಯವರು ಉಚಿತ ಬಸ್ ಸೇವೆಯನ್ನು ಕಲ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೃತಜ್ಞತೆ ಅರ್ಪಿಸುವ ಸಲುವಾಗಿ ಆ ಬಸ್ ಸಂಸ್ಥೆಯ ಉದ್ಯೋಗಿಗಳನ್ನು ದಸರಾ ಕಮಿಟಿಯವರು ಸನ್ಮಾನಿಸಿದ್ದರು. ಸನ್ಮಾನಿಸುವುದು ಸಂಪೂರ್ಣವಾಗಿ ದಸರಾ ಕಮಿಟಿಯ ನಿರ್ಣಯವಾಗಿದ್ದು,ಇದೆಲ್ಲವನ್ನೂ ಮರೆಮಾಚಿ ರಾಜಕೀಯ ದುರುದ್ದೇಶದಿಂದ ಈ ಮದ್ಯೆ ಆ ದಸರಾ ಕಮಿಟಿಗೆ ಸಂಬಂಧವೇ ಇಲ್ಲದ ಹೆಸರನ್ನು ಅನಗತ್ಯವಾಗಿ ಎಳೆದುತಂದು ಸುಳ್ಳು ಪ್ರಚಾರ ಮಾಡುವ ಮೂಲಕ ರಾಜಕೀಯ ಭವಿಷ್ಯವನ್ನು ಹಾಳುಗೆಡಹುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಕಾರಣ ನಾನು ಈ ದುಷ್ಕೃತ್ಯದ ಕುರಿತು ಈಗಾಗಲೇ ಮೊಗವೀರ ಮಹಾಜನ ಸಂಘದ ಅಧ್ಯಕ್ಷರ ಗಮನಕ್ಕೆ ತಂದಿರುತ್ತಾರೆ.ಈ ಕುರಿತು ವಿವರವಾಗಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರನ್ನು ಕೂಡ ದಾಖಲಿಸಿರುತ್ತಾರೆ. ಯಾರು ತೇಜೋವಧೆ ಮಾಡುವ ದುರುದ್ದೇಶದಿಂದ ಈ ದುಷ್ಕೃತ್ಯ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗುವವರೆಗೆ ಹೋರಾಟ ಮುಂದುವರಿಸಲಿದ್ದೇನೆ ಎಂದವರು ಎಚ್ಚರಿಕೆ ನೀಡಿದ್ದಾರೆ. ಈ ದುಷ್ಕೃತ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾದ್ ಕಾಂಚನ್ ಪರ ದೊಡ್ಡ ಸಂಖ್ಯೆಯಲ್ಲಿ ಒಲವು ವ್ಯಕ್ತವಾಗಿದ್ದು, ಪ್ರಸಾದ್ ರಂತಹ ನಿರ್ಮಲ ಮನಸ್ಸಿನ ನಾಯಕರ ತೇಜೋವಧೆ ಮಾಡಿರುವುದನ್ನು ಖಂಡಿಸಿದ್ದಾರೆ.
ಅಪಾರ ಪ್ರಮಾಣದ ಹೋಮ್ ಮೇಡ್ ವೈನ್ ಪತ್ತೆ!
nಸುಳ್ಯ ಗೂನಡ್ಕ ಪ್ರದೇಶದ ಪಯಶ್ವಿನಿ ರಿಫ್ರೆಶ್ಮೆಂಟ್ ಆ್ಯಂಡ್ ಕೂಲ್ ಜೋನ್ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಒಟ್ಟು 111.750 ಲೀಟರ್ ಕೂರ್ಗ್ ವಿಂಟೇಜ್ ಹೋಮ್ ಮೇಡ್ ವೈನ್ನ್ನು ಅಬಕಾರಿ ಇಲಾಖಾ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಸುಳ್ಯ ವಲಯ ವಾಪ್ತಿಯ ಅರಂತೋಡು ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳು ಗಸ್ತು ನಡೆಸುತ್ತಿದ್ದಾಗ ದೊರೆತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯವನ್ನು ಪತ್ತೆ ಹಚ್ಚಿ ಅಂಗಡಿ ಮಾಲಿಕ ಮುರಾರಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತೂರು ಅಮಾನುಷ ಗೋವಿನ ಸಾಗಾಟ, ರಕ್ಷಣೆ
ಪುತ್ತೂರು: ನಗರದ ಬೈಪಾಸ್ ರಸ್ತೆಯಲ್ಲಿ ಅಮಾನುಷವಾಗಿ ಗೋವಿನ ಸಾಗಾಟ ಮಾಡುತ್ತಿದ್ದ ಅಟೋವನ್ನು ಬಜರಂಗದಳ ಕಾರ್ಯಕರ್ತರು ತಡೆದು ಗೋವನ್ನು ರಕ್ಷಿಸಿದ ಘಟನೆ ನಡೆದಿದೆ. ಆಟೋದಲ್ಲಿ ಗೋವನ್ನು ತುಂಬಿಸಿ, ಗೋವಿನ ಕೈಕಾಲುಗಳನ್ನು ಕಟ್ಟಿ, ಅಮಾನುಷವಾಗಿ ಗೋವಿನ ಮೇಲೆ ಇಬ್ಬರು ಮಹಿಳೆಯರು ಕುಳಿತು ಸಾಗಾಟ ಮಾಡುತ್ತಿದ್ದು, ಮಾಹಿತಿ ತಿಳಿದ ಬಜರಂಗದಳದ ಕಾರ್ಯಕರ್ತರು ಪೋಲೀಸರಿಗೆ ಮಾಹಿತಿ ನೀಡಿ ಬೈಪಾಸ್ ರಸ್ತೆಯಲ್ಲಿ ವಾಹನವನ್ನು ತೆರದು ಗೋವನ್ನು ರಕ್ಷಿಸಿದ್ದಾರೆ.
ಕಿನ್ನಿಗೋಳಿ:ಮಳೆ; ಕೊಳೆಯುವ ಭೀತಿಯಲ್ಲಿ ಭತ್ತದ ಬೆಳೆ!
ಕಿನ್ನಿಗೋಳಿ: ಕರಾವಳಿಯಲ್ಲಿ ಪ್ರತಿ ದಿನವೂ ಮಳೆ ಸುರಿಯುತ್ತಿದೆ. ಮಳೆ ಸುರಿದಾಗ ವಾತಾವರಣ ತಂಪಾದರೂ ಉಳಿದ ಹೊತ್ತಿನಲ್ಲಿ ಬಿಸಿಲು ವಿಪರೀತ ಸುಡುತ್ತದೆ. ಈ ರೀತಿಯ ಮಳೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಜತೆಗೆ ಭತ್ತದ ಬೆಳೆಗೆ ಅಪಾಯಕಾರಿಯಾಗಿದೆ.
ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಕಟಾವು ಯಂತ್ರದ ಮೂಲಕವೇ ನಡೆಯುತ್ತದೆಯಾದರೂ ಯಂತ್ರಗಳನ್ನು ಗದ್ದೆಗೆ ಇಳಿಸುವ ಸ್ಥಿತಿ ಇಲ್ಲ. ಹೆಚ್ಚಿನ ಕಡೆ ದಿನದ ಒಂದೆರಡು ಹೊತ್ತು ಖಾಯಂ ಮಳೆ ಸುರಿಯುವುದರಿಂದ ಬೈಲು ಗದ್ದೆಗಳಲ್ಲಿ ನೀರು ನಿಂತಿದೆ. ಹೀಗಾಗಿ ಯಂತ್ರಗಳನ್ನು ಇಳಿಸುತ್ತಿಲ್ಲ. ಬಹುತೇಕ ಗದ್ದೆಗಳಲ್ಲಿ ಪೈರು ಬೆಳೆದು ನಿಂತಿದೆ. ಉಳಿದವು ಮುಂದಿನ ವಾರದೊಳಗೆ ಕಟಾವಿಗೆ ಸಿದ್ಧವಾಗುತ್ತಿವೆ. ಆದರೆ, ನಿತ್ಯ ಮಳೆಯಿಂದಾಗಿ ಕಟಾವಿಗೆ ಸಾಧ್ಯವಾಗುತ್ತಿಲ್ಲ.ಕಟಾವಿಗೆ ಸಿದ್ಧವಾಗಿರುವ ಪೈರನ್ನು ಕಟಾವು ಮಾಡಲು ಆಗದೆ ಇದ್ದರಿಂದ ಭಾರಿ ಸಮಸ್ಯೆಗಳು ಎದುರಾಗುತ್ತಿವೆ.
ಸ್ಕೂಟರ್ ಮರಕ್ಕೆ ಡಿಕ್ಕಿ ಸಾವು!
ಮಂಗಳೂರು: ಸ್ಕೂಟರ್ ಸವಾರ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಮಾಡೂರು ಶಾರದಾ ನಗರ ಎಂಬಲ್ಲಿ ಬುಧವಾರ ಸಂಭವಿಸಿದೆ.ಮಾಡೂರು ನಿವಾಸಿ ನಾಗೇಶ್(51) ಮೃತರು. ಮೃತರು ಖಾಸಗಿ ಆಸ್ಪತ್ರೆಯಲ್ಲಿ ಬಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ರಜೆಯಿದ್ದ ಕಾರಣ ಮನೆಗೆ ಬೀರಿ ಪೇಟೆಯಿಂದ ತೆಂಗಿನಕಾಯಿ ತರುವ ಸಂದರ್ಭ ಘಟನೆ ಸಂಭವಿಸಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಎಎಸ್ಐ ಯಶವಂತ್ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.