ಟಾಪ್ ನ್ಯೂಸ್ ಕರಾವಳಿ
ಕುಂದಾಪುರ: ಐಷಾರಾಮಿ ಕಾರಿನಲ್ಲಿ ದನ ಕಳ್ಳತನ!
– ಮಣಿಪಾಲ: ಪೊಲೀಸ್ ಎಂದು ನಂಬಿಸಿ ಮಹಿಳೆಗೆ 7 ಲಕ್ಷಕ್ಕೂ ಹೆಚ್ಚು ವಂಚನೆ
– ಕುಂದಾಪುರ: ಸಮುದ್ರಪಾಲು ಆಗಿದ್ದ ವ್ಯಕ್ತಿ ಕಾರವಾರದಲ್ಲಿ ಮೃತದೇಹ ಪತ್ತೆ
NAMMUR EXPRESS NEWS
ಕುಂದಾಪುರ : ಶಂಕರನಾರಾಯಣ ಪೊಲೀಸ್ ಠಾಣೆ ಸಮೀಪದ ಸರ್ಕಲ್ನಿಂದ ಸ್ವಲ್ಪ ದೂರದಲ್ಲಿ ಮಲಗಿದ್ದ ಹಸುವನ್ನು ಮುಂಜಾನೆ ಹೈ ಎಂಡ್ ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು ಕದ್ದೊಯ್ದಿದ್ದಾರೆ. ಈ ಕೃತ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂರ್ನಾಲ್ಕು ದನಗಳ್ಳರು ಐಷಾರಾಮಿ ಕಾರಿನಲ್ಲಿ ಬಂದು ತಮ್ಮ ಕಾರಿನ ಬಳಿ ಮಲಗಿದ್ದ ಹಸುವನ್ನು ಎಳೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಇತರ ಹಸುಗಳು ತಮ್ಮ ಆಕ್ಷೇಪಣೆಯನ್ನು ತೋರಿಸಿದರೂ, ದುಷ್ಕರ್ಮಿಗಳು ಬಲವಂತವಾಗಿ ಮತ್ತೊಂದು ಹಸುವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು. ಬಸ್ ನಿಲ್ದಾಣದ ಬಳಿ ಬೀಟ್ ಪೊಲೀಸರು ಓಡಿ ಬಂದು ಕಳ್ಳರನ್ನು ಹಿಡಿಯಲು ಯತ್ನಿಸಿದರು. ಕಳ್ಳರು ಪೊಲೀಸರ ಮೇಲೆ ತಮ್ಮ ಕಾರನ್ನು ಚಲಾಯಿಸಲು ಪ್ರಯತ್ನಿಸಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದ ಕಾರಣ ಇತರ ಹಸುಗಳು ಸುರಕ್ಷಿತವಾಗಿವೆ. ಇತರ ಹಸುಗಳು ತಮ್ಮ ಆಕ್ಷೇಪಣೆಯನ್ನು ತೋರಿಸಿದರೂ, ದುಷ್ಕರ್ಮಿಗಳು ಬಲವಂತವಾಗಿ ಮತ್ತೊಂದು ಹಸುವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು. ಬಸ್ ನಿಲ್ದಾಣದ ಬಳಿ ಬೀಟ್ ಪೊಲೀಸರು ಓಡಿ ಬಂದು ಕಳ್ಳರನ್ನು ಹಿಡಿಯಲು ಯತ್ನಿಸಿದರು. ಕಳ್ಳರು ಪೊಲೀಸರ ಮೇಲೆ ತಮ್ಮ ಕಾರನ್ನು ಚಲಾಯಿಸಲು ಪ್ರಯತ್ನಿಸಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದ ಕಾರಣ ಇತರ ಹಸುಗಳು ಸುರಕ್ಷಿತವಾಗಿವೆ.
– ಮಣಿಪಾಲ: ಪೊಲೀಸ್ ಎಂದು ನಂಬಿಸಿ ಮಹಿಳೆಗೆ 7 ಲಕ್ಷಕ್ಕೂ ಹೆಚ್ಚು ವಂಚನೆ.!!
ಮಣಿಪಾಲ: ಫೆಡೆಕ್ಸ್ ಕಂಪೆನಿಯ ಹೆಸರಿನಲ್ಲಿ ಮುಂಬಯಿ ಪೊಲೀಸ್ ಎಂದು ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಸಂಭವಿಸಿದೆ. ಕುಂಜಿಬೆಟ್ಟುವಿನ ನಮೃತಾ ವಂಚನೆಗೊಳಗಾದವರು. ಇವರು ಮಣಿಪಾಲದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಅವರ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ತನ್ನ ಹೆಸರು ಸಂಜಯ್ ಕುಮಾರ್ ಎಂದು ತಿಳಿಸಿ ತಾನು ಫೆಡೆಕ್ಸ್ ಕಂಪೆನಿ ಉದ್ಯೋಗಿ ಎಂದು ತಿಳಿಸಿದ್ದಾನೆ. ನಿಮ್ಮ ಹೆಸರಿನಲ್ಲಿ ಒಂದು ಪಾರ್ಸಲ್ ಬಂದಿದ್ದು, ಅದರಲ್ಲಿ 5 ಇರಾನಿ ಪಾಸ್ಪೋರ್ಟ್, 5 ಡೆಬಿಟ್ , 150 , ಈ ಬಗ್ಗೆ ಮುಂಬಯಿ ಪೊಲೀಸರಿಗೆ ತಿಳಿಸಿದ್ದು, ಈ ಬಗ್ಗೆ ಎಫ್ಐಆರ್ ಆಗಿರುವುದಾಗಿ ನಂಬಿಸಿದ್ದಾನೆ. ಅನಂತರ ನೀವು ಮುಂಬಯಿ ಪೊಲೀಸರೊಂದಿಗೆ ಮಾತನಾಡುವಂತೆ ಅಪರಿಚತ ವ್ಯಕ್ತಿ ಬೇರೊಬ್ಬ ವ್ಯಕ್ತಿಗೆ ಕರೆ ಮಾಡಿದ್ದಾನೆ. ಅನಂತರ ಆ ವ್ಯಕ್ತಿ ಮಾತನಾಡಿ, ತಾನು ಮುಂಬಯಿ ಪೊಲೀಸ್ ಪ್ರದೀಪ್ ಸಾವಂತ್ ಎಂದು ತಿಳಿಸಿ, ಅವರ ಆಧಾರ್ ಕಾರ್ಡ್, ಬ್ಯಾಂಕ್ ಡೆಬಿಟ್ ಕಾರ್ಡ್ಗಳ ಮಾಹಿತಿ ಪಡೆದು ಅವರ ಖಾತೆಯಿಂದ 7,90,000 ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಕುಂದಾಪುರ: ಸಮುದ್ರಪಾಲು ಆಗಿದ್ದ ವ್ಯಕ್ತಿ ಕಾರವಾರದಲ್ಲಿ ಮೃತದೇಹ ಪತ್ತೆ
ಕುಂದಾಪುರ : ವಾರದ ಹಿಂದೆ ಬೀಜಾಡಿಯಲ್ಲಿ ಸಮುದ್ರಪಾಲಾಗಿದ್ದ ತುಮಕೂರು ತಿಪಟೂರು ಮೂಲದ ಟಿ.ಆರ್.ಯೋಗೀಶ್(23) ಎಂಬ ಯುವಕನ ಮೃತದೇಹವು ಮಂಗಳವಾರ ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಜೂ.20ರಂದು ನಡೆಯಲಿದ್ದ ವಿವಾಹ ಕಾರ್ಯಕ್ರಮಕ್ಕೆ ಸ್ನೇಹಿತನ ಆಮಂತ್ರಣದಂತೆ ಯೋಗೀಶ್ ಹಾಗೂ ಸಂದೀಪ್ ಎಂಬವರು ತಿಪಟೂರಿನಿಂದ ಬೈಕಿನಲ್ಲಿ ಬೀಜಾಡಿಗೆ ಜೂ.19ರಂದು ಆಗಮಿಸಿದ್ದರು. ಸಂಜೆ ವೇಳೆ ಸಮುದ್ರದ ಬಳಿ ತೆರಳಿದ್ದ ಇವರು ನೀರಿಗಿಳಿದು ಆಡುತ್ತಿದ್ದರು. ಈ ವೇಳೆ ಇವರಿಬ್ಬರು ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿಕೊಂಡು ಹೋದರು. ಇವರಲ್ಲಿ ಸಂದೀಪ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಆದರೆ ಯೋಗೀಶ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಆತನ ಸ್ನೇಹಿತನನ್ನು ಸ್ಥಳೀಯರು ಬಚಾವ್ ಮಾಡಿದ್ದರು. ಯೋಗೀಶ್ ಐಟಿಐ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.