ಟಾಪ್ ನ್ಯೂಸ್ ಕರಾವಳಿ
ನಾಪತ್ತೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಯುವಕನೊಂದಿಗೆ ಪತ್ತೆ!
– ಧರ್ಮಸ್ಥಳ: ದಕ್ಷ ಅಧಿಕಾರಿ ಅನಿಲ್ ಕುಮಾರ್ ವರ್ಗಾವಣೆ
– ಕುಂದಾಪುರ: ಮಾತಾ ಆಸ್ಪತ್ರೆಯ ಮಾಲಿಕ ಡಾ.ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ
NAMMUR EXPRESS NEWS
ಮಂಗಳೂರು: ಮಂಗಳೂರಿನ ಕಾಲೇಜೊಂದರಲ್ಲಿ ಓದುತ್ತಿದ್ದ ಹಿಂದೂ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಕೆಲವು ದಿನಗಳ ಹಿಂದೆ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದ್ದರು. ನನ್ನ ಮಗಳನ್ನು ಮುಸ್ಲಿಂ ಯುವಕ ಅಪಹರಣ ಮಾಡಿದ್ದು, ಆಕೆಯನ್ನು ಮತಾಂತರ ಮಾಡಿದ್ದಾನೆಎಂದು ಆರೋಪಿಸಿದ್ದರು. ಅದರಂತೆ ಇದೀಗ ಯುವತಿಯನ್ನು ಮುಸ್ಲಿಂ ಯುವಕನೊಂದಿಗೆ ಪಾಂಡೇಶ್ವರ ಪೊಲೀಸರು ಪತ್ತೆ ಹಚ್ಚಲಾಗಿದೆ.
ಯುವತಿಯನ್ನುಮಹಮ್ಮದ್ ಅಶ್ವಕ್ ಎಂಬಾತನ ಜೊತೆ ಪತ್ತೆ ಹಚ್ಚಲಾಗಿದೆ. ಇನ್ನು ಈತನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ ಈತನ ವಿರುದ್ಧ ಎಂಟು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ.ಸದ್ಯ ರಕ್ಷಿಸಿರುವ ಯುವತಿಯನ್ನು ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಇರಿಸಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಹಿಂದೂ ಪರಿಷದ್ ಶರಣ್ ಪಂಪ್ವೆಲ್ ಲವ್ ಜಿಹಾದ್ ಕರಾವಳಿಯಲ್ಲಿ ಇತ್ತೀಚೆಗೆ ಹೆಚ್ಚುತ್ತಿದ್ದು ಇದರ ವಿರುದ್ಧ ಹಿಂದೂ ಸಮಾಜ ಜಾಗರೂಕರಾಗಿರಬೇಕು. ಹೆಣ್ಮಕ್ಕಳನ್ನು ಪ್ರೀತಿ, ಮದುವೆ ಎಂಬ ಹೆಸರಿನಲ್ಲಿ ಲವ್ ಜಿಹಾದ್ ಮಾಡಿ, ಮೋಸ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪ್ರಬಲ ಕಾನೂನೊಂದು ದೇಶದಲ್ಲಿ ಬರಬೇಕಿದೆ ಎಂದು ಆಗ್ರಹಿಸಿದ್ದಾರೆ.
ಧರ್ಮಸ್ಥಳದ ದಕ್ಷ ಅಧಿಕಾರಿ ಅನಿಲ್ ಕುಮಾರ್ ವರ್ಗಾವಣೆ
ಮಂಗಳೂರು : ಪೊಲೀಸ್ ಇಲಾಖೆಯ 24 ಸಬ್ ಇನ್ಸೆಕ್ಟರ್ ಗಳನ್ನು ಜು.10 ರಂದು ವರ್ಗಾವಣೆ ಪಶ್ಚಿಮ ವಲಯ ಐಜಿಪಿ ಆದೇಶ ಮಾಡಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷ ಹನ್ನೊಂದು ತಿಂಗಳು ಕರ್ತವ್ಯ ನಿರ್ವಹಿಸುತ್ತಿದ್ದ ದಕ್ಷ ಅಧಿಕಾರಿಯಾಗಿರುವ ಸಬ್ ಇನ್ಸೆಕ್ಟರ್-1 ಅನಿಲ್ ಕುಮಾರ್ ಡಿ ಅವರನ್ನು ಮಂಗಳೂರು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಿದ್ದು ಅವರ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್-1 ಕಿಶೋರ್.ಪಿ ಅವರನ್ನು ನೇಮಕ ಮಾಡಲಾಗಿದೆ.
ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ.ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ
ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಅವರು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮಾಲೀಕ ಹಾಗೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.ಮೃತರು ಹೆಂಡತಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.