ಲವರ್ ಪಿಜಿಗೆ ಕಲ್ಲೆಸೆದ ಪಾಗಲ್ ಪ್ರೇಮಿ!
– ತನ್ನ ಜತೆ ಹೊರಗೆ ಬರಲಿಲ್ಲ ಎಂದು ಸಿಟ್ಟು: ಮಂಗಳೂರಿನಲ್ಲಿ ಘಟನೆ
ಮಂಗಳೂರು: ಅಪಾರ್ಟ್ಮೆಂಟ್ ಮ್ಯಾನೇಜರ್ ಆತ್ಮಹತ್ಯೆ
NAMMUR EXPRESS NEWS
ಮಂಗಳೂರು : ತನ್ನ ಲವರ್ ಔಟಿಂಗಿಗೆ ಕರೆದರೆ ಬರಲಿಲ್ಲ ಎಂದು ಸಿಟ್ಟಿಗೆದ್ದ ಯುವಕ ಆಕೆಯ ಪಿಜಿಗೆ ಕಲ್ಲು ತೂರಿದ ಘಟನೆ ಮಂಗಳೂರಿನ ಸೆಂಟ್ ಆಗ್ನೆಸ್ ಕಾಲೇಜು ಬಳಿ ನಡೆದಿದೆ., ಕಲ್ಲು ಹೊಡೆದ ಯುವಕನನ್ನು ಸುಳ್ಯ ನಿವಾಸಿ ವಿವೇಕ್ (18) ಎಂದು ಗುರುತಿಸಲಾಗಿದೆ. ಈತ ಸೆಂಟ್ ಆಗ್ನೆಸ್ ಕಾಲೇಜ್ ಬಳಿ ಇರುವ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಆಕೆಗೆ ಔಟಿಂಗ್ ಗೆ ಬರಲು ಹೇಳಿದಾಗ ಯುವತಿ ನಿರಾಕರಿಸಿದ್ದಾಳೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ. ಘಟನೆಯಲ್ಲಿ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್ ನನ್ನು ಹಿಡಿದು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಅಪಾರ್ಟ್ಮೆಂಟ್ ಮ್ಯಾನೇಜರ್ ಆತ್ಮಹತ್ಯೆ
ಮಂಗಳೂರು: ಮಂಗಳೂರು ನಗರದ ಕದ್ರಿ ಕಂಬಳದಲ್ಲಿರುವ ಅಪಾರ್ಟ್ಮೆಂಟ್ ವೊಂದರ ಫೆಸಿಲಿಟಿ ಮ್ಯಾನೇಜರ್, ಬಂಟ್ವಾಳ ನಿವಾಸಿ ಹರೀಶ್ ಕುಮಾರ್ (38) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್ ಕುಮಾರ್ ಅವರ ಮೃತದೇಹ ಸೋಮವಾರ ಮಧ್ಯಾಹ್ನದ ವೇಳೆ ಅಪಾರ್ಟ್ ಮೆಂಟ್ನ ಅವರ ಕೊಠಡಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.