– ಬೆಳ್ತಂಗಡಿ : ಚಿರತೆ ದಾಳಿಗೆ ದನದ ಕರು ಬಲಿ
– ರಸ್ತೆ ಅಪಘಾತ ಆಟೋ ರಿಕ್ಷಾ ಚಾಲಕನಿಗೆ ಗಾಯ
– ಕಾಸರಗೋಡು : ಶಸ್ತ್ರಕ್ರಿಯೆಗೆ ರೋಗಿಯಿಂದ ಲಂಚ ಪಡೆದ ವೈದ್ಯ
– ಪುತ್ತೂರು : ಬೈಕ್ ಗಳೆರಡು ಮುಖಾಮುಖಿ ಡಿಕ್ಕಿ
– ಬಂಟ್ವಾಳ: ಬಸ್ ಹತ್ತುವ ವೇಳೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ
NAMMUR EXPRESS NEWS
ಬೆಳ್ತಂಗಡಿ: ಮುಂಡೂರು ಗ್ರಾಮದ ಕೇರಿಯಾರ್ ಗುರುವಪ್ಪ ಸಾಲಿಯಾನ್ ಅವರ ಮನೆಯ ಕರುವೊಂದನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಅ. 2ರ ತಡ ರಾತ್ರಿ ಸಂಭವಿಸಿದೆ.ಈ ಬಗ್ಗೆ ವಲಯ ಅರಣ್ಯಾಧಿಕಾರಿ ಮಾಹಿತಿ ನೀಡಲಾಗಿದೆ. ಅರಣ್ಯ ಇಲಾಖೆ ಬೋನು ಇಡಲು ಮುಂದಾಗಿದೆ. ಆದರೆ ನಾರಾವಿಯಲ್ಲೂ ಚಿರತೆ ಹಾವಳಿಯಿದ್ದು ಅಲ್ಲೂ ಬೋನು ಇಡಲಾಗಿದೆ ಕೋಟಿಕಟ್ಟೆಯಿಂದ ಕಾಡಬಾಗಿಲು ರಸ್ತೆಯಲ್ಲಿ ಸಂಚರಿಸುವ ಜನರಿಗೆ, ಜೀವ ಭಯ ಉಂಟಾಗಿದೆ.
ರಸ್ತೆ ಅಪಘಾತ ಆಟೋ ರಿಕ್ಷಾ ಚಾಲಕನಿಗೆ ಗಾಯ
ಕುಂಬಳೆ: ಕುಂಬಳೆ ಚರ್ಚ್ ಪರಿಸರದಲ್ಲಿ ಕಾರು ಢಿಕ್ಕಿ ಹೊಡೆದು ಆಟೋ ರಿಕ್ಷಾ ಚಾಲಕ ಕುಂಬಳೆ ಸ್ಕೂಲ್ ಸಮೀಪದ ನಿವಾಸಿ ಮುರಳಿ(39) ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ರಿಕ್ಷಾ ಸಂಪೂರ್ಣ ಹಾನಿಗೀಡಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಸ್ತ್ರಕ್ರಿಯೆಗೆ ರೋಗಿಯಿಂದ ಲಂಚ ಪಡೆದ ವೈದ್ಯ!
ಕಾಸರಗೋಡು : ಶಸ್ತ್ರಕ್ರಿಯೆಗೆ ರೋಗಿಯಿಂದ ಲಂಚ ಪಡೆದ ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯನನ್ನು ವಿಜಿಲೆನ್ಸ್ ಬಂಧಿಸಿದೆ. ವೈದ್ಯ ಡಾ ವೆಂಕಟಗಿರಿಯನ್ನು ಮನೆಯಲ್ಲಿ ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್ ಬಂಧಿಸಿದೆ. ಲಂಚ ಕೊಟ್ಟ ನಿವಾಸಿಯೊಬ್ಬರು ನೀಡಿದ ದೂರಿನಂತೆ ದಾಳಿ ನಡೆಸಿ ಕ್ರಮ ತೆಗೆದುಕೊಳ್ಳಲಾಗಿದೆ. ಹರ್ನಿಯಾ ರೋಗದ ಚಿಕಿತ್ಸೆಗೆ ಆಗಮಿಸಿದ್ದು ಈ ವೇಳೆ ಶಸ್ತ್ರಕ್ರಿಯೆ ಅಗತ್ಯ ಇರುವುದಾಗಿ ವೈದ್ಯ ಸೂಚಿಸಿದ್ದು, ಡಿಸೆಂಬರ್ ತಿಂಗಳಲ್ಲಿ ಶಸ್ತ್ರಕ್ರಿಯೆ ನಡೆಸುವುದಾಗಿ ಎರಡು ಸಾವಿರ ರೂ. ನೀಡುವಂತೆ ಈ ವ್ಯಕ್ತಿಗೆ ವೈದ್ಯ ತಿಳಿಸಿದ್ದನು ಎನ್ನಲಾಗಿದೆ. ಮಂಗಳವಾರ ಸಂಜೆ ನುಳ್ಳಿಪ್ಪಾಡಿಯಲಿರುವ ಮನೆಗೆ ತೆರಳಿ ಎರಡು ಸಾವಿರ ರೂ. ಹಸ್ತಾಂತರಿಸಿದ್ದು ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿ, ವೈದ್ಯನನ್ನು ವಶಕ್ಕೆ ಪಡೆದುಕೊಡರು. ಅಬ್ಬಾಸ್ ನೀಡಿದ ಎರಡು ಸಾವಿರ ರೂ. ವನ್ನು ವಶಕ್ಕೆ ಪಡೆದುಕೊಂಡರು.
ಬೈಕ್ ಗಳೆರಡು ಮುಖಾಮುಖಿ ಡಿಕ್ಕಿ
ಪುತ್ತೂರು: ಪುತ್ತೂರಿನ ಕೇಪುಳು ಸರ್ಕಲ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಬೈಕ್’ ಗಳೆರಡು ಮುಖಾಮುಖಿ ಡಿಕ್ಕಿ ಘಟನೆಯಲ್ಲಿ ಬೈಕ್ ಸವಾರಿ ಹಾಗೂ ಸ್ಕೂಟರ್ ಸವಾರ ಅಬ್ದುಲ್ ಚಂದ್ರ ರಜಾಕ್ ಗೆ ಗಂಭೀರ ಗಾಯ ಅಗಿದು. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಬಸ್ ಹತ್ತುವ ವೇಳೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ!
ಬಂಟ್ವಾಳ: ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಸ್ ಹತ್ತುವ ಸಂದರ್ಭ ಅಪರಿಚಿತ ಪ್ರಯಾಣಿಕ ನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.
ಮಂಗಳೂರು ಕಾಲೇಜಿಗೆ ತೆರಳುವ ಸಮಯದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್ ಹತ್ತುವ ಸಮಯದಲ್ಲಿ ಹಿಂಬದಿಯಲ್ಲಿ ಇದ್ದ ಅಪರಿಚಿತ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಆತ ವಿದ್ಯಾರ್ಥಿನಿಗೆ ಬೆದರಿಸಿದ್ದಲ್ಲದೆ
ಮುಂದೆಯೂ ಇದೇ ರೀತಿ ಕಿರುಕುಳ ನೀಡುತ್ತೇನೆ, ಏನು ಮಾಡುತ್ತಿ ? ಎಂದು ಹೆದರಿಸಿದ್ದಾನೆ. ಘಟನೆ ಬಗ್ಗೆ ನಿರ್ವಾಹಕನಿಗೆ ವಿದ್ಯಾರ್ಥಿನಿ ದೂರು ನೀಡಿದ್ದು, ಪ್ರಯಾಣಿಕ ಹಾಗೂ ನಿರ್ವಾಹಕನ ನಡುವೆ ಮಾತಿನ ಚಕಮುಖಿ ನಡೆದಿದೆ ಎಂದು ತಿಳಿದು ಬಂದಿದೆ. ಬಸ್ನಲ್ಲಿ ನಡೆದ ಘಟನೆ ಬಗ್ಗೆ ಸ್ಥಳದಿಂದಲೇ ವಿದ್ಯಾರ್ಥಿನಿ ಫೋನ್ ಮೂಲಕ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ಪೋಷಕರು ಮತ್ತು ವಿದ್ಯಾರ್ಥಿನಿ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.