ಬಾವಿಯಲ್ಲಿ ಎರಡು ಅಪರಿಚಿತ ಶವ ಪತ್ತೆ!
– ತುಮಕೂರಲ್ಲಿ ನಡೆದ ಅನುಮಾನಸ್ಪದ ಘಟನೆ
– ಕಾರ್ಕಳ: ದೇವರ ಕೋಣೆಯಲ್ಲಿಯೇ ಸಾವಿಗೆ ಶರಣಾದ ಯುವಕ
– ಮಂಗಳೂರು: ಬಸ್ಸಿನಲ್ಲಿ ಮೊಬೈಲ್ ನಂಬರ್ ಬರೆದು ಚೀಟಿ ನೀಡಿದ- ಮಹಿಳೆಯಿಂದ ಟ್ವಿಟ್ಟರ್ ನಲ್ಲಿ ಪೋಸ್ಟ್, ಆರೋಪಿ ಅರೆಸ್ಟ್.
– ಸುಳ್ಯ: ಮಸೂದ್ ಕೊಲೆ: ಮೂವರಿಗೆ ಜಾಮೀನು.
NAMMUR EXPRESS NEWS
ತುಮಕೂರು: ಶಿರಾ ನಗರದ ಚಿಕ್ಕಕೆರೆ ಹಿಂಭಾಗದಲ್ಲಿ ಅಪರಿಚಿತ ಶವ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ನಡೆದಿದೆ. ಬೊಪ್ಪಜ್ಜ ಎಂಬುವವರಿಗೆ ಸೇರಿದ ಬಾವಿಯಲ್ಲಿ ಒಬ್ಬ ಮಹಿಳೆ, ಹಾಗೂ ಮತ್ತೊಂದು ಹೆಣ್ಣು ಮಗುವಿನ ಶವ ಪತ್ತೆಯಾಗಿದೆ. ಹಾಜಿರಾ (40) ಮತ್ತು ಅಮ್ಮನ್ ಪಾಷಾ (12) ಮೃತ ದುರ್ದೈವಿಗಳು ತುಮಕೂರು ಮೂಲದವರಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನ ಹೊರತೆಗೆದ ಅಗ್ನಿಶಾಮಕ ದಳದ ಸಿಬ್ಬಂದಿ ಯಾರೋ ಕೊಲೆ ಮಾಡಿ ತಂದು ಬಾವಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಶಿರಾ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯ ದೇವರ ಕೋಣೆಯಲ್ಲಿಯೇ ಸಾವಿಗೆ ಶರಣಾದ ಯುವಕ
ಕಾರ್ಕಳ: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮನೆಯ ದೇವರ ಕೋಣೆಯಲ್ಲಿಯೇ ಸಾವಿಗೆ ಶರಣಾಗಿರುವ ಘಟನೆ ಸೆ.7ರಂದು ಬೆಳಗ್ಗೆ ಮಿಯ್ಯೆರು ಗ್ರಾಮದ ಜೋಡುಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ಜೋಡುಕಟ್ಟೆಯ ಪದ್ದು ಪೂಜಾರ್ತಿ ಎಂಬವರ ಮಗ ಸುರೇಶ ಪೂಜಾರಿ (48) ಎಂದು ಗುರುತಿಸಲಾಗಿದೆ.
ಹಲವು ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಇವರು, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ದೇವರು ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯದ ಮಸೂದ್ ಕೊಲೆ: ಮೂವರಿಗೆ ಜಾಮೀನು.
ಸುಳ್ಯ: ಸುಳ್ಯದ ಕಳಂಜ ಎಂಬಲ್ಲಿ ನಡೆದಿರುವ ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಆರೋಪಿಗಳಾದ ರಂಜಿತ್, ಸದಾಶಿವ, ಸುಧೀರ್ ಎಂಬವರಿಗೆ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ವಿಶ್ವಜಿತ್ ಎಸ್. ಶೆಟ್ಟಿ ಜಾಮೀನು ಮಂಜೂರು ಮಾಡಿದರು.
ಆರೋಪಿಗಳ ಪರವಾಗಿ ಹಿರಿಯ ವಕೀಲಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ವಕೀಲರಾದ ಸುಯೋಗ್ ಹೇರಳೆ ಮತ್ತು ನಿಶಾಂತ್ ಕುಶಾಲಪ್ಪ ವಕಾಲತ್ತು ಮಾಡಿದ್ದರು. ಒಟ್ಟು ಎಂಟು ಆರೋಪಿಗಳ ಪೈಕಿ ಈ ಮೊದಲು ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು.
ಬಸ್ಸಿನಲ್ಲಿ ಮೊಬೈಲ್ ನಂಬರ್ ಬರೆದು ಚೀಟಿ ನೀಡಿದ- ಮಹಿಳೆಯಿಂದ ಟ್ವಿಟ್ಟರ್ ನಲ್ಲಿ ಪೋಸ್ಟ್, ಆರೋಪಿ ಅರೆಸ್ಟ್.
ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಮೊಬೈಲ್ ನಂಬರ್ ಇರುವ ಚೀಟಿ ಕೊಟ್ಟು ಕರೆ ಮಾಡಲು ತಿಳಿಸಿದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಸೆ.6 ರಂದು ಸಂತ್ರಸ್ಥ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣ ದಲ್ಲಿ ತಾನು ಪುತ್ತೂರಿನಿಂದ ಕೆ.ಎಸ್.ಆರ್.ಟಿ.ಸಿ.ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ, ತನ್ನ ಪಕ್ಕದಲ್ಲಿದ್ದ ಆರೋಪಿಯು ಅನುಚಿತವಾಗಿ ವರ್ತಿಸಿದ್ಧನು, ಬಸ್ನಿಂದ ಇಳಿಯುವ ವೇಳೆ ಚೀಟಿಯೊಂದರಲ್ಲಿ ಮೊಬೈಲ್ ನಂಬರನ್ನು ನೀಡಿ ಕರೆಮಾಡುವಂತೆ ಕೈ ಸನ್ನೆ ಮಾಡಿರುವುದಾಗಿ ಪೋಸ್ಟ್ ಮಾಡಿದ್ದರು. ಈ ಮೇರೆಗೆ, ಮಹಿಳೆಯಿಂದ ದೂರನ್ನು ಸ್ವೀಕರಿಸಿಕೊಂಡು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ : 354A(1)(i) 354(ಡಿ)ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿಎ ಹಾಗೂ ಈ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮದುವೆ ಕಾರ್ಡ್ ಕೊಡಲು ಹೋದ ವರ ನಾಪತ್ತೆ; ಮದುವೆ ದಿನ ಮೃತದೇಹ ಪತ್ತೆ.!
ಸಂಬಂಧಿಕರಿಗೆ ತನ್ನ ಮದುವೆ ಕಾರ್ಡ್ ಹಂಚಲು ಹೋಗಿ ನಾಪತ್ತೆಯಾಗಿದ್ದ ಮದುಮಗ ಮದುವೆ ದಿನ ಶವವಾಗಿ ಪತ್ತೆಯಾದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮದುವೆ ದಿನ ಆತನ ಮೃತದೇಹ ಪತ್ತೆಯಾಗಿರುವ ಹಿನ್ನಲೆಯಲ್ಲಿ ಕುಟುಂಬಸ್ಥರು ಹಾಗೂ ಊರಿನವರು ದುಃಖತಪ್ತರಾಗಿದ್ದಾರೆ. ಮೃತ ವರನನ್ನು ರಾಜೇಂದರ್ (29) ಎಂದು ಗುರುತಿಸಲಾಗಿದ್ದು, ಸದಾಶಿವನಗರ ಮಂಡಲದ ಅಡ್ಡರು ಎಲ್ಲರೆಡ್ಡಿ ಗ್ರಾಮದ ನಿವಾಸಿಯಾಗಿದ್ದಾನೆ. ಇತನ ಮೃತದೇಹ ಮರಕ್ಕೆ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾಜೇಂದರ್, ಇತನು ಕೆಲ ದಿನಗಳ ಹಿಂದೆ ರಾಂಪುರ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದ. ಇದೇ 3ರಂದು ಸಂಬಂಧಿಕರಿಗೆ ಮದುವೆ ಕಾರ್ಡ್ ಹಂಚುವ ವೇಳೆ ಮನೆಯಿಂದ ಹೊರ ಹೋದ ರಾಜೇಂದರ್ ಮನೆಗೆ ಬಾರದೆ, ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ಎಷ್ಟು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ಮದುವೆಯ ದಿನ ಲಿಂಗಂಪೇಟ ಮಂಡಲದ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.