ಉಡುಪಿ ಜಿಲ್ಲೆಯಲ್ಲಿ ಹೆಚ್ಚಾದ ಡೆಂಗ್ಯು!
– ಜ್ವರ, ಶೀತ, ಸಂಕ್ರಾಮಿಕ ರೋಗ ಹೆಚ್ಚಳ
ಬೆಳ್ತಂಗಡಿ: ಮಕ್ಕಳನ್ನು ಕರೆದೊಯ್ಯುತ್ತಿದ್ದ ರಿಕ್ಷಾ ಪಲ್ಟಿ
ಮಂಗಳೂರು :ರಿಕ್ಷಾದಲ್ಲಿ ದನದ ಮಾಂಸ ಸಾಗಾಟ
– ಸವಣೂರು: ಬಸ್ ಚರಂಡಿಗೆ, ಅಪಾಯದಿಂದ ಪಾರು
– 90 ಲಕ್ಷ ಮೌಲ್ಯದ ತಿಮಿಂಗಿಲ ವಾಂತಿ ಪತ್ತೆ!
NAMMUR EXPRESS NEWS
ಉಡುಪಿ ಜಿಲ್ಲೆಯಲ್ಲಿ ಡೆಂಗು ಪ್ರಕರಣಗಳು ಕೇವಲ ಒಂದೇ ವಾರದಲ್ಲಿ 160 ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲವು ದಿನಗಳ ಹಿಂದೆ 189 ಪ್ರಕರಣಗಳು ಈಗ ಅದರ ಸಂಖ್ಯೆ 350ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ನಗರ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಬಿಸಿಲು ಮಳೆಯಿಂದಾಗಿ ಸೊಳ್ಳೆ ಉತ್ಪಾದನೆ ಹೆಚ್ಚಾಗಿ ಜೂನ್ ತಿಂಗಳಿನಿಂದ ಪ್ರಕರಣಗಳು ಜಾಸ್ತಿಯಾಗಿದೆ.
ಬೆಳ್ತಂಗಡಿ: ಮಕ್ಕಳನ್ನು ಕರೆದೊಯ್ಯುತ್ತಿದ್ದ ರಿಕ್ಷಾ ಪಲ್ಟಿ!
ಬೆಳ್ತಂಗಡಿ : ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಅಟೋ ರಿಕ್ಷಾವೊಂದು ಮಗುಚಿ ಬಿದ್ದು ಒಂಬತ್ತು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯ ಗೊಂಡಿರುವ ಘಟನೆ ನಡೆದಿದೆ. ಕಲ್ಲೇರಿ ಆಸುಪಾಸಿನಿಂದ ಮೂಡಡ್ಕದ ಅಲ್ ಮದೀನಾತುಲ್ ಮುನಾವರ ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಅಟೋರಿಕ್ಷಾ ಮೂರುಗೋಳಿ ಬಳಿ ಪಲ್ಟಿಯಾಗಿದೆ ದ್ವಿಚಕ್ರ ವಾಹನವೊಂದು ಅಡ್ಡ ಬಂದ ಕಾರಣ ಚಾಲಕನ ನಿಯಂತ್ರಣ ಕಳೆದುಕೊಂಡು ರಿಕ್ಷಾ ಮಗುಚಿ ಬಿದ್ದಿದೆ. ಘಟನೆಯಿಂದ ರಿಕ್ಷಾದಲ್ಲಿದ್ದ 8 ಮಂದಿ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾರೆ.
ರಿಕ್ಷಾದಲ್ಲಿ ದನದ ಮಾಂಸ ಸಾಗಾಟ
ಮಂಗಳೂರು: ಆಟೋ ರಿಕ್ಷಾದಲ್ಲಿ ಕ್ವಿಂಟಾಲ್ಗಟ್ಟಲೆ ದನದ ಮಾಂಸ ಸಾಗಾಟ ಮಾಡುತ್ತಿದ್ದವರನ್ನ ಬಜರಂಗದಳದ ಕಾರ್ಯಕರ್ತರು ಭಾನುವಾರ ಮುಂಜಾನೆ ತಡೆದು ನಿಲ್ಲಿಸಿ, ವಾಹನದಲ್ಲಿದ್ದವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆಗೆ ಸಂಬಂಧಪಟ್ಟ0ತೆ ಮೂವರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಆರೋಪಿಗಳನ್ನು ಕಳವಾರು ಗ್ರಾಮದ ದಾವೂದ್, ಜೋಕಟ್ಟೆಯ ಬದ್ರುದ್ದೀನ್ ಮತ್ತು ಯಾಸೀನ್ ಎಂದು ಗುರುತಿಸಲಾಗಿದೆ. ವಾಹನದಲ್ಲಿ 2.5 ಕ್ವಿಂಟಾಲ್ಗಿಂತಲೂ ಹೆಚ್ಚಿನ ಪ್ರಮಾಣದ ದನದ ಮಾಂಸವನ್ನು ಜೋಕಟ್ಟೆಯಿಂದ ನಗರದ ಬೀಫ್ ಸ್ಟಾಲ್ಗಳಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ತಡೆದು ವಿಚಾರಿಸಿದಾಗ ಆರೋಪಿ ಎಲ್ಲಾ ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ. ಸದ್ಯ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋ ಹತ್ಯಾ ನಿಷೇಧ ಕಾಯ್ದೆಯಡಿ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ ಬಸ್ ಚರಂಡಿಗೆ
ಸವಣೂರು: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಸಾರ್ಟಿಸಿ ಬಸ್ಸೊಂದು ರಸ್ತೆ ಬದಿಯ ಚರಂಡಿಗೆ ಉರುಳಿದ ಘಟನೆ ಸವಣೂರಿನಲ್ಲಿ ಸಂಭವಿಸಿದೆ. ಜಲಜೀವನ್ ಯೋಜನೆಯಡಿ ಮಣ್ಣು ಅಗೆದು ಪೈಪ್ ಅಳವಡಿಸಲಾಗಿತ್ತು. ಮಳೆ ಬಂದ ಕಾರಣ ಆ ಮಣ್ಣು ಮೆದುವಾಗಿತ್ತು. ಪುತ್ತೂರಿನಿಂದ ಸವಣೂರು ಮೂಲಕ ಪಂಜ ಕಡೆಗೆ ಹೋಗುತ್ತಿದ್ದ ಬಸ್ ಸರ್ವೆಯಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ದಾರಿ ಬಿಡಲೆಂದು ಬದಿಗೆ ಸರಿಯಿತು.ಬದಿಯ ಮಣ್ಣು ಮೃದುವಾಗಿದ್ದ ಕಾರಣ ಚರಂಡಿಗೆ ವಾಲಿ ನಿಂತಿದೆ.
90 ಲಕ್ಷ ಮೌಲ್ಯದ ತಿಮಿಂಗಿಲ ವಾಂತಿ ಪತ್ತೆ!
ಮಂಗಳೂರು: ಪಣಂಬೂರು ಬೀಚ್ ಬಳಿ ಸೋಮವಾರ ದಾಳಿ ನಡೆಸಿ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಹೊಂದಿದ್ದ ಮೂವರನ್ನು ಮಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮೂವರ ವಶದಿಂದ 90 ಲಕ್ಷ ರೂ. ಮೌಲ್ಯದ 900 ಗ್ರಾಂ ಅಂಬರ್ ಗ್ರೀಸ್ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮೂವರ ವಶದಿಂದ 90 ಲಕ್ಷ ರೂ. ಮೌಲ್ಯದ 900 ಗ್ರಾಂ ಅಂಬರ್ ಗ್ರೀಸ್ ವಶಪಡಿಸಿಕೊಂಡಿದ್ದಾರೆ.