ಮಹೇಶ್ ತಿಮರೋಡಿ ಬಂಧನಕ್ಕೆ ಹೈಕೋರ್ಟ್ ಆದೇಶ?
– ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ಹೇಳಿದ್ದೇನು? ಏನಿದು ಕೇಸ್?
– ಅಂಕೋಲಾ: ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್
– ವಿಟ್ಲ: ಡೆಂಗ್ಯೂ ಜ್ವರಕ್ಕೆ ಯುವತಿ ಬಲಿ
– ಬೆಳ್ತಂಗಡಿ: ಆಸ್ಪತ್ರೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳವು
NAMMUR EXPRESS NEWS
ಮಂಗಳೂರು: ಭಾಸ್ಕರ್ ನಾಯ್ಕ ಎಂಬುವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿರುವ ಅಟ್ರಾಸಿಟಿ ಕೇಸಿನಲ್ಲಿ ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸಂಗಡಿಗರ ವಿರುದ್ಧ ಕ್ರಮ ಕೈಗೊಳ್ಳದ ಕುರಿತು ಪ್ರಶ್ನಿಸಿ, ವರದಿ ಸಲ್ಲಿಸುವಂತೆ ದಕ್ಷಿಣಕನ್ನಡ ಜಿಲ್ಲಾ ಎಸ್ಪಿಗೆ ಹೈಕೋರ್ಟ್ ಆದೇಶ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಮಹೇಶ್ ಶೆಟ್ಟಿ ತಿಮರೋಡಿಯ ಮಾಜಿ ಆಪ್ತ ಬಾಸ್ಕರ್ ನಾಯ್ಕ ಸೆ.3ರಂದು ಸಂಜೆ ಮಂಗಳೂರಿನಲ್ಲಿ ಯೂಟ್ಯೂಬ್ ಚಾನಲ್ ಗೆ ಸಂದರ್ಶನ ನೀಡಿ ವಾಪಸ್ ಬರುವಾಗ ಮಹೇಶ್ ಶೆಟ್ಟಿ ತಿಮರೋಡಿ,ಮೋಹನ್ ಶೆಟ್ಟಿ ,ಮುಖೇಶ್ ಶೆಟ್ಟಿ,ಶೆಟ್ಟಿ,ನಿತೀನ್ @ ನೀತು, ಪ್ರಜ್ವಲ್ ಕೆವಿ ಗೌಡ, ಪ್ರಮೋದ್ ಶೆಟ್ಟಿ ಮತ್ತಿತರರು ಕಾರು ಅಡ್ಡ ಹಾಕಿ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು.ಪ್ರಕರಣ ನಡೆದು ಒಂಬತ್ತು ದಿನ ಕಳೆದರೂ ಈ ವರೆಗೆ ಪ್ರಕರಣದಲ್ಲಿ ಯಾವುದೇ ಬೆಳವಣಿಗೆಯಾಗಿರಲಿಲ್ಲ. ಅಲ್ಲದೆ ಬೆಳ್ತಂಗಡಿ ಮತ್ತು ಕಟೀಲಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಭಾಗವಹಿಸಿದ್ದರು. ಈ ಬಗ್ಗೆ ಬಾಸ್ಕರ್ ನಾಯ್ಕ ಹೈ ಕೋರ್ಟ್ ಮೊರೆ ಹೋಗಿದ್ದರು ಎನ್ನಲಾಗಿದೆ. ಅರ್ಜಿ ಪರಿಶೀಲನೆ ನಡೆಸಿದ ಹೈ ಕೋರ್ಟ್ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ತಕ್ಷಣ ಆರೋಪಿಗಳನ್ನು ಬಂಧಿಸಲು ಆದೇಶ ಹೊರಡಿಸಿದೆ ಎನ್ನುವ ವಿಚಾರ ಎಲ್ಲೆಡೆ ಹರಿದಾಡಿತ್ತು.
ದೂರುದಾರ ಭಾಸ್ಕರ ನಾಯ್ಕ ನೀಡಿರುವ ದೂರಿನಲ್ಲಿ ಘಟನೆ ನಡೆದ ವೇಳೆ ನೀಡಿರುವ ಸಮಯ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲೇ ಇದ್ದರು ಎಂಬ ಬಗ್ಗೆ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸದ್ಯ ಪ್ರಕರಣದ ವಿಚಾರಣೆ ನಡೆಸಲಿರುವ ತನಿಖಾಧಿಕಾರಿಗೆ ಇದೇ ಒಂದು ಮೂಲ ಸಾಕ್ಷಿಯಾಗಲಿದ್ದು, ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಕಷ್ಟ ಸಾಧ್ಯ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆ ರೀತಿಯ ಯಾವುದೇ ಆದೇಶ ನಮಗೆ ಬಂದಿಲ್ಲ. ಹೈಕೋರ್ಟ್ ಆದೇಶ ನೀಡಿದೆ ಎಂಬುದು ಗಾಳಿ ಸುದ್ದಿ’ ಎಂದು ಹೇಳಿದ್ದಾರೆ.
ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್
ಅಂಕೋಲಾ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಆವರಣದಲ್ಲಿಯೇ ಚಾಲಕನ ನಿಯಂತ್ರಣ ತಪ್ಪಿದ ಬಸ್ ಇಳಿಜಾರಿನಲ್ಲಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 15ಕ್ಕೂ ಹೆಚ್ಚು ಪ್ರಯಾಣಕರು ಗಾಯಗೊಂಡು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಡೆದಿದೆ. ಕಾರವಾರ ಘಟಕಕ್ಕೆ ಸಂಬಂಧಿಸಿದ ಕಾರವಾರ ಶಿರಸಿ ಮಾರ್ಗವಾಗಿ ಬೆಂಗಳೂರಿಗೆ ಹೊರಟ್ಟಿದ ಬಸ್ ಅಪ ಘಾತಕ್ಕಿಡಾಗಿರುವುದು. ಅಂಕೋಲಾ ಬಸ್ ನಿಲ್ದಾಣದಿಂದ ಚಾಲಕ ಎಚ್.ಬಿ.ಸ್ವಾಮಿ ಬಸ್ ಬಿಡಬೇಕಾದ ವೇಳೆ ಬಸ್ ಮುಂಭಾಗದಲ್ಲಿ ಪ್ರಯಾಣಿಕರೊಬ್ಬರು ಇಟ್ಟಿರುವ ಲೆಗೇಜ್ ಬಾಕ್ಸ್ ಕೆಳಗೆ ಬಿದ್ದಕಾರಣ ಚಾಲಕನು ಅದನ್ನು ನೋಡುತ್ತಿದ್ದಂತೆಯೇ ಬಸ್ ಮುಂದಕ್ಕೆ ಚಲಿಸಿ 30-40 ಅಡಿ ದೂರದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅಪಘಾತದ ರಭಸಕ್ಕೆ ಬಸ್ಸಿನ ಎಡ ಮುಂಭಾಗ ಜಖಂಗೊಂಡು ಬಸ್ನಲ್ಲಿದ್ದ 15 ಕ್ಕೂ ಹೆಚ್ಚು ಪ್ರಯಾಣ ಕರಿಗೆ ಅಲ್ಪಸ್ವಲ್ಪ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ವಿಟ್ಲ: ಡೆಂಗ್ಯೂ ಜ್ವರಕ್ಕೆ ಯುವತಿ ಬಲಿ
ವಿಟ್ಲ : ಡೆಂಗ್ಯೂ ಜ್ವರದಿಂದ ಯುವತಿ ಮೃತಪಟ್ಟ ಘಟನೆ ವಿಟ್ಲದಪೆರುವಾಯಿಯಲ್ಲಿ ನಡೆದಿದೆ.
ಪೆರುವಾಯಿ ನಿವಾಸಿ ಆಶಾ (25 ವರ್ಷ) ಮೃತಪಟ್ಟಿ ಯುವತಿ,ಕಳೆದ ಎರಡು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾರೆ.
ಆಸ್ಪತ್ರೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳವು
ಬೆಳ್ತಂಗಡಿ : ಪಶು ವೈದ್ಯಾಧಿಕಾರಿಯೋರ್ವರ ಆಸ್ಪತ್ರೆಯ ಶೆಡ್ಡಿನಲ್ಲಿ ನಿಲ್ಲಿಸಿದ್ದ ಬೈಕ್ ಕಳುವಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಟಿ ಸಿ ಮಂಜನಾಯ್ಕ ಆಸ್ಪತ್ರೆಯ ಶೆಡ್ಡಿನಲ್ಲಿ ಎಂದಿನಂತೆ ಬೆಳಿಗ್ಗೆ ಬೈಕ್ ( KA 21 U 6849) ನಿಲ್ಲಿಸಿ ತೆರಳಿದ್ದು, ವಾಪಾಸು ರಾತ್ರಿ ಬಂದು ನೋಡಿದಾಗ ಬೈಕ್ ಕಾಣದಾಗಿದೆ. ಕಳುವಾದ ಬೈಕಿನ ಅಂದಾಜು ಮೌಲ್ಯ ಸುಮಾರು 35,000/- ರೂಪಾಯಿ ಎಂದು ಅಂದಾಜಿಸಲಾಗಿದೆ.