ಮದುವೆ ಸಂಭ್ರಮದಲ್ಲಿದ್ದ ಯುವತಿ ಅಪಘಾತಕ್ಕೆ ಬಲಿ!
– ಮಂಗಳೂರಲ್ಲಿ ವಿದ್ಯುತ್ ಕಂಬಕ್ಕೆ ಆಟೋ ಡಿಕ್ಕಿಯಾಗಿ ಘಟನೆ
– ಸುರತ್ಕಲ್: ರಸ್ತೆ ದಾಟಲು ನಿಂತಿದ್ದ ಯುವಕರಿಗೆ ಬಸ್ ಡಿಕ್ಕಿ
ಮಂಗಳೂರು: ಮನೆಯ ಅಂಗಳದಲ್ಲೇ ಮಹಿಳೆ ಕುತ್ತಿಗೆಯಿಂದ ಚಿನ್ನದ ಕರಿಮಣಿ ಎಗರಿಸಿ ಪರಾರಿ
ಸುಳ್ಯ: ಮಹಿಳೆಗೆ ವಿದೇಶದಲ್ಲಿರುವ ಪತಿ ವಾಟ್ಸಪ್ ಮೂಲಕ ತ್ರಿವಳಿ ತಲಾಕ್…!
ಜೋಡುಕಲ್ಲು: ಬಾಣಂತನದ ನೋವು ತಾಳಲಾರದೆ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
NAMMUR EXPRESS NEWS
ಸುರತ್ಕಲ್: ರಸ್ತೆ ದಾಟಲು ನಿಂತಿದ್ದ ಬೈಕ್ ಗೆ ಎಕ್ಸ್ ಪ್ರೆಸ್ ಬಸ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರ ಗಾಯಗೊಂಡಿರುವ ಘಟನೆ ಹೊಸಬೆಟ್ಟು ಎಂಬಲ್ಲಿ ನಡೆದಿದೆ.ಹಳೆಯಂಗಡಿ ಇಂದಿರಾ ನಗರ ನಿವಾಸಿ ಮುಹಮ್ಮದ್ ಶಾಹಿಲ್(20) ಮತ್ತು ಅರಾಫತ್(19) ಎಂದು ಗುರುತಿಸಲಾಗಿದೆ. ಶಾಹಿಲ್ ಮತ್ತು ಅರಾಫತ್ ಬೈಕ್ ನಲ್ಲಿ ರಸ್ತೆ ದಾಟಲು ನಿಂತಿದ್ದ ವೇಳೆ ಮಂಗಳೂರು ನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ಬಸ್ ಚಾಲಕನ ನಿರ್ಲಕ್ಷ್ಯದಿಂದ ಯುವಕರಿಗೆ ಡಿಕ್ಕಿ ಹಿಡೆದಿದೆ. ಘಟನೆಯಿಂದ ಅರಾಫತ್ ಅವರಿಗೆ ಕೈ, ಕಾಲು, ತಲೆಗೆ ಗಂಭೀರ ಗಾಯಗಳಾಗಿದೆ. ಸಾಹಿಲ್ ಅವರೂ ಗಂಭೀರ ಗಾಯಗೊಂಡಿದ್ದು, ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯ ಅಂಗಳದಲ್ಲೇ ಮಹಿಳೆ ಕುತ್ತಿಗೆಯಿಂದ ಚಿನ್ನದ ಕರಿಮಣಿ ಎಗರಿಸಿ ಪರಾರಿ
ಮಂಗಳೂರು: ಮನೆಯ ಅಂಗಳದಲ್ಲೇ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಎಗರಿಸಿ ಪರಾರಿಯಾದ ಘಟನೆ ಮೂಲ್ಕಿ ಸಮೀಪದಲ್ಲಿ ನಡೆದಿದೆ. ಕರಿಮಣಿ ಕಳೆಕೊಂಡವರನ್ನು ಬೆಳ್ಳಾಯರು ನಿವಾಸಿ ವಸಂತಿ ಶೆಟ್ಟಿ ಎಂದು ಗುರುತಿಸಲಾಗಿದೆ. ವಸಂತಿ ಶೆಟ್ಟಿಯವರ ಮನೆಯ ಅಂಗಳಕ್ಕೆ ಬಳಿ ಓರ್ವ ಅಪರಿಚಿತ ಬಂದು ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ, ಪೆಟ್ರೋಲ್ ತುಂಬಿಸಲು ಬಾಟಲಿ ಬೇಕು ಎಂದು ಹೇಳಿದ್ದಾನೆ. ಈ ಸಂದರ್ಭ ವಸಂತಿ ಶೆಟ್ಟಿ ನೀರಿನ ಖಾಲಿ ಬಾಟಲಿ ಕೊಟ್ಟಿದ್ದು ವ್ಯಕ್ತಿ ಅಲ್ಲಿಂದ ತೆರಳಿದ್ದಾನೆ ಸ್ವಲ್ಪ ಸಮಯದ ಬಳಿಕ ಮತ್ತೆ ಅದೇ ವ್ಯಕ್ತಿ ಬಂದು ಬೇರೆ ಬಾಟಲಿ ಕೇಳಿದ್ದು, ವಸಂತಿ ಶೆಟ್ ಅವರು ಮನೆಯ ಹೊರಗಡೆ ಬಂದಾಗ ಮೂವರು ದುಷ್ಕರ್ಮಿಗಳು ಮನೆಯ ಅಂಗಳದಲ್ಲಿ ಕುತ್ತಿಗೆಯ ಬದಿ ಎರಡು ಚೂರಿಯಿಂದ ಬೆದರಿಸಿ ಕರಿಮಣಿ ಸರವನ್ನು ಎಳೆದಿದ್ದಾರೆ. ಆಗ ವಸಂತಿ ಶೆಟ್ಟಿ ಜೋರಾಗಿ ಬೊಬ್ಬೆ ಹಾಕಿದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಈ ಸಂದರ್ಭ ಕರಿಮಣಿ ಸರದ ಒಂದು ತುಂಡು ಸ್ಥಳದಲ್ಲಿ ಬಿದ್ದಿದೆ. ಸುಮಾರು ಐದು ಪವನ್ ಚಿನ್ನದ ಕರಿಮಣಿ ಸರ ಎಂದು ವಸಂತಿ ಶೆಟ್ಟಿ, ಮುಲ್ಕಿ ಪೊಲೀಸರಿಗೆ ನೀಡುವ ದೂರಿನಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಕಂಬಕ್ಕೆ ಆಟೋ ಡಿಕ್ಕಿ: ಮದುವೆ ಸಂಭ್ರಮದಲ್ಲಿದ್ದ ಯುವತಿ ಮೃತ್ಯು
ಮಂಗಳೂರು: ಆಟೋ ರಿಕ್ಷಾವೊಂದು ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಯುವತಿಯೋರ್ವಳು ಸ್ಥಳದಲ್ಲಿಯೇ ಮೃತಪಟ್ಟು, ಮೂವರು ಪರಿಣಾಮ ಗಾಯಗೊಂಡ ಘಟನೆನಗರದ ಹೊರವಲಯದ ಬಜ್ಜೆ ಠಾಣಾ ವ್ಯಾಪ್ತಿಯ ಗುರುಪುರಬಳಿ ನಡೆದಿದೆ. ಅರ್ಕುಳ ತುಪ್ಪೆಕಲ್ಲಿನ ಕುಟುಂಬವೊಂದು ಆಟೋ ರಿಕ್ಷಾ ಮೂಲಕ ದೇವಸ್ಥಾನಕ್ಕೆ ತೆರಳಿ ಹಿಂದಿರುತ್ತಿದ್ದ ವೇಳೆ ಬಂಗ್ಲೆಗುಡ್ಡೆಯಿಂದ ಈ ಅಪಘಾತ ಸಂಭವಿಸಿದೆ. ಮೃತ ಯುವತಿಯನ್ನು ತುಪ್ಪೆಕಲ್ಲು ನಿವಾಸಿ ಪ್ರೀತಿ ಸಪಲಿಗ(25) ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಆಕೆಯ ತಾಯಿ ಮೀನಾಕ್ಷಿ(55), ತಂಗಿ ಸ್ವಾತಿ (23), ಅತ್ತಿಗೆ ಶೋಭಾ (37), ಬಾಲಕ ಭವಿಷ್ (09) ಹಾಗೂ ಚಾಲಕ ಪದ್ಮನಾಭ ಎಂದು ಗುರುತಿಸಲಾಗಿದೆ.
ಮಹಿಳೆಗೆ ವಿದೇಶದಲ್ಲಿರುವ ಪತಿ ವಾಟ್ಸಪ್ ಮೂಲಕ ತ್ರಿವಳಿ ತಲಾಕ್
ಸುಳ್ಯ : ಸುಳ್ಯ ಜಯನಗರದ ಮಹಿಳೆಗೆ ವಿದೇಶದಲ್ಲಿರುವ ಪತಿ ವಾಟ್ಸಪ್ ಸಂದೇಶದ ಮೂಲಕ ತ್ರಿವಳಿ ತಲಾಖ್ ನೀಡಿರುವ ಘಟನೆ ನಡೆದಿದೆ. ಈ ಬಗ್ಗೆ ಮಹಿಳೆ ಸುಳ್ಯ ಪೊಲೀಸ್ ಠಾಣೆಗೆ ಪತಿಯ ವಿರುದ್ಧ ದೂರು ನೀಡಿದ್ದಾರೆ. ಕೇರಳ ತ್ರಿಶೂರ್ ಮೂಲದ ಅಬ್ದುಲ್ ರಾಶಿದ್ ಎಂಬವರು ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಯುವತಿಯನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಆಕೆಯನ್ನು ಉತ್ತಮವಾಗಿ ನೋಡಿಕೊಂಡಿದ್ದು, ಅವರಿಗೆ ಇದೀಗ ಎರಡು ಹೆಣ್ಣುಮಕ್ಕಳು ಕೂಡ ಇದ್ದಾರೆ. ಎರಡು ವರ್ಷಗಳ ಮೊದಲು ಪತಿ ಪತ್ನಿಯನ್ನು ವಿದೇಶಕ್ಕೆ ಕರೆಸಿಕೊಂಡಿದ್ದರು. ಬಳಿಕ ಎರಡನೇ ಮಗುವಿನ ಹೆರಿಗೆಗಾಗಿ ಪತ್ನಿಯನ್ನು ಸುಳ್ಯದ ಪತ್ನಿ ಮನೆಯಲ್ಲಿ ಬಿಟ್ಟು ವಿದೇಶಕ್ಕೆ ಉದ್ಯೋಗಕ್ಕೆ ತರೆಳಿದ್ದರು.
ಕಳೆದ ಆರು ತಿಂಗಳಿನಿಂದ ಸಂಸಾರದಲ್ಲಿ ಅಲ್ಪ ಸ್ವಲ್ಪ ಕಿರಿಕಿರಿ ಉಂಟಾಗಿತ್ತು ಎನ್ನಲಾಗಿದ್ದು ಆದರೆ ಸಂಬಂಧಿಕರು, ಹಿರಿಯರು ಇದರ ಬಗ್ಗೆ ಮಾತನಾಡಿ ಸರಿಪಡಿಸಲು ಪ್ರಯತ್ನಿಸಿದ್ದರು. ಆದರೆ ಇದು ಯಾವುದನ್ನು ಕೇಳದೆ ಏಕಾಏಕಿ ಪತಿ ರಾಶಿದ್, ಪತ್ನಿಯ ಮೊಬೈಲ್ಗೆ ಮೂರು ತಲಾಖ್ನ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ. ಇದರಿಂದ ಮನನೊಂದ ಮಹಿಳೆ ಸುಳ್ಯ ಪೊಲೀಸರಿಗೆ ತನಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಣಂತನದ ನೋವು ತಾಳಲಾರದೆ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
ಜೋಡುಕಲ್ಲು : ಪೈವಳಿಕೆ ಜೋಡುಕಲ್ಲು ಬಳಿಯ ಅರಿಯಾಳ ನಿವಾಸಿ ಜಯ್ ಕುಮಾರ್ ಆಚಾರ್ಯ ಅವರ ಪತ್ನಿ ಸುರೇಖಾ ಹತ್ತು ದಿನಗಳ ಹಿಂದೆ ಬಾಣಂತಿಯಾಗಿ ತವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಶನಿವಾರ ರಾತ್ರಿ ಊಟ ಮಾಡಿ ಮಲಗಿದ್ದ ಸುರೇಖಾ ಅವರ ಬಳಿ ಅವರ ತಾಯಿ, ಅತ್ತೆ ಹಾಗೂ ಸಮೀಪದ ಕೊಠಡಿಯಲ್ಲಿ ಪತಿ ಮಲಗಿದ್ದರು. ರಾತ್ರಿ 1 ಗಂಟೆಯ ಸುಮಾರಿಗೆ ನವಜಾತ ಶಿಶು ಅಳುತ್ತಿದ್ದು, ಮನೆಯವರು ಎದ್ದು ನೋಡಿದಾಗ ಸುರೇಖಾ ಮಲಗಿದಲ್ಲಿ ಇರಲಿಲ್ಲ. ಬಳಿಕ ನಡೆಸಿದ ಹುಡುಕಾಟದಲ್ಲಿ ಮನೆ ಸಮೀಪದ ಬಾವಿ ಬಳಿ ಟಾರ್ಚ್ ಲೈಟ್ ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಮೃತದೇಹ ಚಾವಿಯಲ್ಲಿ ಹತ್ತಿಯತ್ತು, ಬಾಣಂತಿ ಸಮಯದಲ್ಲಿ ಆಪರೇಷನ್ ಮಾಡಿದ್ದ ಸುರೇಖಾರಿಗೆ ತೀವ್ರ ಹೊಟ್ಟೆ ನೋವು ಕಾಡುತ್ತಿರುವುದಾಗಿ ತಿಳಿಸುತ್ತಿದ್ದು, ಇದರಿಂದ ಮಾನಸಿಕ ಖನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರಬೇಕೆಂದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ಅವರು ಪೋಸ್ಟ್ ಮಾಸ್ತರ್ ಹುದ್ದೆ ನಿರ್ವಹಿಸುತ್ತಿದ್ದರು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತ ಪರೀಕ್ಷೆ ನಡೆಸಿದ್ದಾರೆ.