ಮಲ್ಪೆ: ಮೀನುಗಾರಿಕೆ ಬೋಟ್ ನಲ್ಲಿ ಪ್ರಜ್ನಾಹೀನರಾದ ಕಾರ್ಮಿಕರು
– ಕಾರ್ಕಳ :ಸೆ. 5 ಕಾರ್ಕಳ – ಅಜೆಕಾರು ಭಾಗದ ಕೆಲವು ಕಡೆ ಕರೆಂಟ್ ಇರೋದಿಲ್ಲ
– ಕೊಲ್ಲೂರು : ಕೊಲ್ಲೂರು ದೇವಿಯ ದರ್ಶನಕ್ಕೆ ಭಕ್ತ ನೀರು ಪಾಲು
– ಸುಳ್ಯ : ಹಲ್ಲೆ ಆರೋಪಿಗೆ ನಿರೀಕ್ಷಣಾ ಜಾಮೀನು .
– ಉಡುಪಿ : ಪದ್ಮಶ್ರೀ ಮಂಜಮ್ಮ ಜೋಗತಿಯವರೊಂದಿಗೆ ಸಂವಾದ
ಮಲ್ಪೆ: ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಟ್ರಾಲ್ ಲೈಲ್ಯಾಂಡ್ ಬೋಟ್ ನಲ್ಲಿ ಚಲ್ಟ್ ಮೀನು ಖಾಲಿ ಮಾಡಲು ಬೋಟ್ ನ ಸ್ಟೋರೇಜ್ ಗೆ ಇಳಿದಿದ್ದ ಓರಿಸ್ಸಾ ಮೂಲದ ಇಬ್ಬರು ಕಾರ್ಮಿಕರು ಮೀನಿನ ಗ್ಯಾಸ್ ನಿಂದಾಗಿ ಉಸಿರಾಟದ ತೊಂದರೆಗೊಳಗಾದ ಘಟನೆ ಮಲ್ಪೆಯಲ್ಲಿ ನಡೆದಿದೆ. ಆಪದ್ಬಾಂಧವ ಈಶ್ವರ್ ಮಲ್ಪೆರವರು ಪ್ರಜ್ನಾಹೀನರಾಗಿ ಬೋಟ್ ನ ಸ್ಟೋರೇಜ್ ನಲ್ಲಿದ್ದ ಇಬ್ಬರನ್ನು ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಆಂಬುಲೆನ್ಸ್ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಕಾರ್ಮಿಕರೂ ಚೇತರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸೆ. 5 : ಕಾರ್ಕಳ – ಅಜೆಕಾರು ಭಾಗದ ಕೆಲವು ಕಡೆ ಕರೆಂಟ್ ಇರೋದಿಲ್ಲ
ಕಾರ್ಕಳ : ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಸೆ. 5 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ನಿಟ್ಟೆ ನಿಟ್ಟೆ ಕಾಲೇಜು, ನಿಟ್ಟೆ ವಾಟರ್ ಸಪ್ಪೆ ಬೊರ್ಗಲ್ ಗುಡ್ಡೆ, ಹಾಮಾಜಿ, ಕುಂಟಾಡಿ, ಕೆರಬೆಟ್ಟು, ನಿಟ್ಟೆ ಪಂಚಾಯತ್, ನಿಟ್ಟೆ ಮಸೀದಿ, ಲೆಮಿನಾ ಇಂಡಸ್ಟ್ರೀಸ್, ದೂಪದಕಟ್ಟೆ, ಕೆಮ್ಮಣ್ಣು ನೆಲ್ಲಿಗುಡ್ಡೆ, ಬಾರಾಡಿ, ಬೇಲಾಡಿ, ಕಾಂತಾವರ, ಕಲ್ಯಾ, ಬೆಳಣ್, ಬೆಳಣ್ ದೇವಸ್ಥಾನ, ಗೋಳಿಕಟ್ಟೆ, ನಂದಳಿಕೆ, ಜಂತ್ರ, ನೀಚಾಲು, ಕೆದಿಂಜೆ, ಅಂಬರಾಡಿ, ಪಿಲಿಯೂರು, ಕೆರೆಕೋಡಿ, ಒಂಜಾರೆ ಕಟ್ಟೆ, ಬಾರಬೈಲು, ಪುಕ್ಕಲು, ಕೆಂಪುಜೋರ, ಬಜಗೋಳಿ, ಮಿಯ್ಯಾರು, ಕುಂಟಿಬೈಲು, ರೆಂಜಾಳ, ರಾಮೇರಗುತ್ತು ಬೋರ್ಕಟ್ಟೆ, ಕಲತ್ರಪಾದೆ, ಮುಡಾರು, ಮಾಳ, ನಲ್ಲೂರು, ಹುಕಟ್ಟೆ, ಹೊಸ್ಮಾರು, ಈದು, ನೆಲ್ಲಿಕಾರು, ನೂರಾಳ್ ಬೆಟ್ಟು, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಕೊರಜೆ, ಮುಂಡೂರು, ಕಾಂಜರಕಟ್ಟೆ, ಸಚ್ಚರಿಪೇಟೆ,ಮುಲ್ಲಡ್ಕ ಕೋಡಿಮಾರು, ಸಂಕಲಕರಿಯ, ನಾನಿಲ್ತಾರ್, ಜಾರಿಗೆಕಟ್ಟೆ, ಗುಂಡ್ಯಡ್ಕ, ಕಲ್ಲಂಬಾಡಿ, ಪದವು, ಪರಪ್ಪಾಡಿ, ಲೆಮಿನಾ ಕ್ರಾಸ್ ಮತು ಸುತಮುತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿವ್ಯತ್ಯಯವಾಗುತ್ತದೆ.
ಅಜೆಕಾರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ ಸೆ.5 ರಂದು 110/116ಕೆವಿ ಕಾರ್ಕಳ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11ಕೆವಿ ಅಜೆಕಾರು ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಡ್ತಲ, ದೊಂಡೆರಂಗಡಿ, ದರ್ಬುಜೆ, ಎಳ್ಳಾರೆ, ಕಾಡುಹೊಳೆ, ಗುಡ್ಡೆಯಂಗಡಿ, ಅಜೆಕಾರು ಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಕೊಲ್ಲೂರು ದೇವಿಯ ದರ್ಶನಕ್ಕೆ ಭಕ್ತ ನೀರು ಪಾಲು
ಕೊಲ್ಲೂರು: ಕೊಲ್ಲೂರು ದೇವರ ದರ್ಶನಕ್ಕೆ ಬಂದಿದ್ದ ಕೇರಳದ ವ್ಯಕ್ತಿಯೊಬ್ಬರು ಸೌಪಾರ್ಣಿಕ ಸ್ನಾನ ಘಟ್ಟದಲ್ಲಿ ಮುಳುಗಿ ಮೃತಪಟ್ಟ ಘಟನೆ ಆ.30ರಂದು ನಡೆದಿದೆ. ಕೇರಳ ಎರ್ನಾಕುಲಾಂ ಜಿಲ್ಲೆಯ ಅಶೋಕನ್ (55) ಮೃತ ದುದೈರ್ವಿ. ಇವರು ಕೊಲ್ಲೂರಿಗೆ ಬಂದು ದೇವರ ದರ್ಶನ ಮುಗಿಸಿ ಸೌಪಾರ್ಣಿಕ ಸ್ನಾನ ಘಟ್ಟದಲ್ಲಿ ತೀರ್ಥ ಸ್ನಾನ ಮಾಡಲು ನದಿ ಬಳಿ ಹೋಗಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಆರೋಪಿಗೆ ನಿರೀಕ್ಷಣಾ ಜಾಮೀನು .
ಸುಳ್ಯ: ಅರಂತೋಡು ತೊಡಿಕಾನದ ಅಡ್ಯಡ್ಕ ಎಂಬಲ್ಲಿ ಅನ್ಯ ಕೋಮಿನ ಯುವಕನೊಬ್ಬ ಮೇಲೆ ಹಲ್ಲೆ ಮಾಡಿರುವ ಆರೋಪದಡಿಯಲ್ಲಿ ಕೇಸು ದಾಖಲಾಗಿದ್ದ ಸುಳ್ಯದ ಯುವಕರಿಗೆ ನಿರೀಕ್ಷಣಾ ಜಾಮೀನು ಮಂಜೂರು ಗೊಂಡಿದೆ
ಹಲ್ಲೆ ಪ್ರಕರಣದಲ್ಲಿ ಲತೀಶ್ ಗುಂಡ್ಯ ಮತ್ತು ವರ್ಷಿತ್ ಕೆ.ಪಿ. ಎಂಬವರ ಮೇಲೆ ಕೇಸು ದಾಖಲಾಗಿತ್ತು. ಪ್ರಕರಣದ ಇಬ್ಬರು ಆರೋಪಿಗಳು ಪುತ್ತೂರಿನ ನ್ಯಾಯಾಲಯದಲ್ಲಿ ಹಾಜರಾಗಿದ್ದು ಜಾಮೀನು ಮಂಜೂರುಗೊಳಿಸಿದೆ.
ಆರೋಪಿಗಳ ಪರವಾಗಿ ನ್ಯಾಯವಾದಿ ಮಾಧವ ಪೂಜಾರಿ ವಾದಿಸಿದ್ದರು.
ಪದ್ಮಶ್ರೀ ಮಂಜಮ್ಮ ಜೋಗತಿಯವರೊಂದಿಗೆ ಸಂವಾದ
ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಜಿಲ್ಲಾ ಗ್ರಂಥಾಲಯ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಶ್ರಯದಲ್ಲಿ ಸೋಮವಾರ (ಸೆ 4) ಬೆಳಗ್ಗೆ 11:30 ರಿಂದ 1 ಗಂಟೆಯವರೆಗೆ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರೊಂದಿಗೆ ಉಡುಪಿ ಅಜ್ಜರಕಾಡಿನ ಜಿಲ್ಲಾ ಗ್ರಂಥಾಲಯದ ಎ ಸಿ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂವಾದದಲ್ಲಿ ಮಾಜಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗ, ಕಲಾವಿದ ಹಾಗೂ ಮೂಳೆ ರೋಗ ತಜ್ಞ ಡಾ. ಸುರೇಶ್ ಶೆಣೈ, ಕವಯತ್ರಿ ಜ್ಯೋತಿ ಮಹಾದೇವ್ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಉಪನ್ಯಾಸಕಿ ಡಾ. ಪ್ರಜ್ಞಾ ಮಾರ್ಪಳ್ಳಿ ಇರುತ್ತಾರೆ.
ನಂತರ ಮುಖ್ಯ ಗ್ರಂಥಾಧಿಕಾರಿ ಜಯಶ್ರೀ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ್ ಶೆಣೈ , ಅಧ್ಯಕ್ಷ ಪ್ರೊ. ಶಂಕರ್, ತುಳುಕುಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ , ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ. ಹರೀಶ್ಚಂದ್ರ, ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್ ಪಿ ಉಪಸ್ಥಿತಿಯಲ್ಲಿ ಮಂಜಮ್ಮ ಜೋಗತಿ ಅವರನ್ನು ಗೌರವಿಸಲಾಗುವುದು.