ಕುಕ್ಕೆಯಲ್ಲಿ ಅ.28ಕ್ಕೆ ಪೂಜೆ ಸಮಯ ಬದಲು
– ಚಂದ್ರಗ್ರಹಣ ಇರುವುದರಿಂದ ವಿಶೇಷ ಪೂಜೆಗಳು ಇಲ್ಲ
– ಕಾಪು : ನೇಣಿಗೆ ಶರಣಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ
– ಮಂಗಳೂರು: ಟೋಪಿಗೆ ಬೆಂಕಿ : ತಪ್ಪಿದ ಅನಾಹುತ
– ಸುಬ್ರಹ್ಮಣ್ಯ: ಮಹಿಳೆಯ ಚಿನ್ನದ ತಾಳಿ ಸರ ಕಳವು
– ಉಡುಪಿ: ಗಾಂಜಾ ಮಾರಾಟ ಮಾಡುತ್ತಿದ್ದವರಿಗೆ ಜೈಲು
NAMMUR EXPRESS NEWS
ಮಂಗಳೂರು: ಅ.28ರಂದು ಶನಿವಾರ ಚಂದ್ರಗ್ರಹಣ ಇರುವುದರಿಂದ ಶ್ರೀ ದೇವಾಲಯದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತಾಧಿಗಳಿಗೆ ಶ್ರೀ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ
ಅ.28ರಂದು ಶನಿವಾರ ರಾತ್ರಿ ಮಹಾಪೂಜೆ ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯಗೊಳ್ಳಲಿದೆ.ಆ ಬಳಿಕ ಶ್ರೀ ದೇವರ ದರುಶನಕ್ಕೆ ಅವಕಾಶ ಇರುವುದಿಲ್ಲ.ಅಲ್ಲದೆ ಈ ದಿನ ಸಾಯಂಕಾಲ ಸಂಜೆಯ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ. ರಾತ್ರಿ ಪ್ರಸಾದ ಭೋಜನ ಪ್ರಸಾದ ವಿತರಣೆ ಇರುವುದಿಲ್ಲ ಎಂದು ಶ್ರೀ ದೇಗುಲದ ಪ್ರಕಟಣೆ ತಿಳಿಸಿದೆ.
ನೇಣಿಗೆ ಶರಣಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ
ಕಾಪು : ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಮಂಗಳವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊರುವ ಘಟನೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ ಹೆಸರು ಅನನ್ಯ ಎಂದು ಗುರುತಿಸಲಾಗಿದೆ. ಶಂಕರಪುರ ಸೈಂಟ್ ಜೋನ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಿಡಿದ, ಅ.24ರಂದು ರಾತ್ರಿ ಹೆತ್ತವರೊಂದಿಗೆ ಮಲಗಿದ್ದು, ಬೆಳಗ್ಗೆ ಎದ್ದು ನೋಡಿರಲಿಲ್ಲ, ಬಳಿಕ ಹುಡುಕಾಡಿದಾಗ ಪಕ್ಕದ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೋಪಿಗೆ ಬೆಂಕಿ ತಪ್ಪಿದ ಅನಾಹುತ
ಮಂಗಳೂರು: ಹುಲಿವೇಷಧಾರಿಯ ಟೋಪಿಗೆ ಬೆಂಕಿ ಹತ್ತಿಕೊಂಡ ಘಟನೆಯೊಂದು ನಡೆದಿದೆ. ನವರಾತ್ರಿ, ದಸರಾ ಹಬ್ಬದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹುಲಿ ವೇಷ, ಹುಲಿ ಕುಣಿತದ ಅಬ್ಬರ ಜೋರಿ ಇರುತ್ತದೆ. ಈ ವರ್ಷವೂ ಎಲ್ಲಾ ಕಡೆಗಳಲ್ಲಿ ಹುಲಿ ಕುಣಿತ ಸೇರಿದಂತೆ ವಿಜೃಂಭಣೆಯಿಂದ ದಸರಾ, ನವರಾತ್ರಿ ಆಚರಿಸಲಾಗಿದೆ. ಈ ಮಧ್ಯೆ ಅಲ್ಲಲ್ಲಿ ವೇಷಧಾರಿಗಳಿಗೆ ಆವೇಷ ಬಂದ ಘಟನೆಗಳೂ ವರದಿಯಾಗಿದೆ. ಇದರ ಜೊತೆಗೆ ಮತ್ತೊಂದು ಘಟನೆ ನಡೆದಿದೆ.
ಮಂಗಳೂರು ಕೆಎಸ್ ರಾವ್ ರಸ್ತೆಯಲ್ಲಿ ವಿವಿಧ ಕಸರತ್ತು ಪ್ರದರ್ಶಿಸುತ್ತಿದ್ದ ಹುಲಿವೇಷಧಾರಿಗಳ ತಂಡ ಮೆರವಣಿಗೆ ಹೋಗುತ್ತಿದ್ದಾಗ ವೇಷಧಾರಿಯೊಬ್ಬರು ಬೆಂಕಿ ಸಾಹಸ ಮಾಡಲು ಮುಂದಾಗಿದ್ದಾರೆ. ಹುಲಿ ವೇಷಧಾರಿ, ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡುತ್ತಿದ್ದಂತೆಯೇ ಅವರ ಟೋಪಿಗೆ ಧಗ್ಗನೆ ಬೆಂಕಿಹೊತ್ತಿಕೊಂಡಿದೆ. ತಕ್ಷಣ ಅವರು ಟೋಪಿಯನ್ನು ಕಿತ್ತೆಸೆದು ಮೈ ಬೆಂಕಿ ತಗುಲದಂತೆ ನೋಡಿದ್ದಾರೆ. ಹುಲಿ ವೇಷಧಾರಿಯ ಸಮಯದಿಂದ ಭಾರೀ ಅನಾಹುತ ತಪ್ಪಿದೆ.
ಮಹಿಳೆಯ ಕರಿಮಣಿ ಸರ ಕಳವು
ಸುಬ್ರಮಣ್ಯ : ದೇವರ ದರ್ಶನ ವೇಳೆ ಕಳ್ಳರು ಮಹಿಳೆಯೋರ್ವರ 1.4 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಎಗರಿಸಿದ ಘಟನೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆದಿದೆ. ಕಡಬ ತಾಲೂಕಿನ ಇಚ್ಚಂಪಾಡಿ ಬರೆಮೇಲು ನಿವಾಸಿ ಭಾರತಿ, ಎಮ್ ಡಿ ಎಂಬುವವರು ಅಕ್ಟೋಬರ್ 22ರ ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದು ಆರತಿ ತೆಗೆದುಕೊಳ್ಳುವ ಸಂದರ್ಭ ಅವರ ಕುತ್ತಿಗೆಯಲ್ಲಿದ್ದ 4 ಪವನ್ ತೂಕದ ಕರಿಮಣಿ ಸರ ಕಾಣೆಯಾಗಿತ್ತು. ಬಳಿಕ ಕರಿಮಣಿ ಸರಕ್ಕಾಗಿ ದೇಗುಲದ ವಠಾರದಲ್ಲಿ ಹುಟುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸುಬ್ರಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ
ಉಡುಪಿ : ಮಣಿಪಾಲದಲ್ಲಿ 2020ರ ಸೆ.10 ರಂದು ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಮಣಿಪಾಲ ಪೊಲೀಸರಿಂದ ಬಂಧಿಸಲ್ಪಟ್ಟ ಧಾರವಾಡ ಮೂಲದ ಫಾರೂಕ್ ಶೇಖ್ ಹಾಗೂ ಅಬ್ದುಲ್ ರಜಾಕ್ ಎಂಬ ಆರೋಪಿಗಳಿಗೆ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ನತ್ರ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಇವರು ಒಂದು ವರ್ಷದ ಕಠಿಣ ಸಜೆ ಹಾಗೂ ತಲಾ 20,000ರೂ, ದಂಡ ವಿಧಿಸಿ ತೀರ್ಪು ನೀಡಿದ್ದಾರೆ, ಆರೋಪಿಗಳಿಬ್ಬರು 2020ರ ಸೆ.10ರಂದು ಸಂಜೆ 4 ಗಂಟೆ ಸುಮಾರಿಗೆ ಮಣಿಪಾಲದ ಶಿಂಬ್ರಾ ಎಂಬಲ್ಲಿರುವ ಬಾಬಾ ಪಾಯಿಂಟ್ ಕ್ರಾಸ್ ಬಳಿ ಕಾರು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದಾಗ ಮಾಹಿತಿ ಪಡೆದು ಸ್ಥಳಕ್ಕೆ ದಾಳಿ ನಡೆಸಿದ ಮಣಿಪಾಲ ಠಾಣೆ ಪಿಎಸ್ಐ ರಾಜಶೇಖರ್ ವಂದಲಿ ಇವರಿಂದ ಬಂಧಿಸಲ್ಪಟ್ಟಿದ್ದರು.
ಈ ವೇಳೆ ಅವರ ಬಳಿ ಎರಡು ಕೆ.ಜಿ.ಗ್ರಾಂ ತೂಕದ ಗಾಂಜಾ ಪತ್ತೆಯಾಗಿತ್ತು, ಗಾಂಜಾದೊಂದಿಗೆ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದರು. ಇಬ್ಬರಿಗೂ ಒಂದು ವರ್ಷದ ಕಠಿಣ ಸಜೆ ಹಾಗೂ ತಲಾ 20,000ರೂ. ದಂಡ ವಿಧಿಸಿ ತೀರ್ಪು ನೀಡಿದರು.