ಬಂಟ್ವಾಳ: ಸಿಕ್ಕಿಬಿದ್ದ ಅಡಿಕೆ ಕಳ್ಳರು!
– ಮಂಗಳೂರು : ಸೆ.10ರಂದು ಸ್ಟಾರ್ ಸುವರ್ಣದಲ್ಲಿ ಸರ್ಕಸ್ ತುಳು ಸಿನಿಮಾ
– ಮಂಗಳೂರು: ಮಂಗಳೂರಿಗೆ ಖಡಕ್ ಡಿಸಿಪಿ
– ಕಾಸರಗೋಡು: ಪೊಲೀಸರ ಮೇಲೆ ಹಲ್ಲೆಗೈದ ಜಿಲ್ಲಾ ಪಂಚಾಯತ್ ಸದಸ್ಯ ಅಂದರ್
– ಕೋಟ:ಸಮುದ್ರ ಕಿನಾರೆಗೆ ಅಪ್ಪಳಿಸಿದ ಮೀನುಗಾರಿಕೆ ಬೋಟ್
– ಅಂಕೋಲಾ : ಅಪಘಾತಗೊಂಡ ಕಾರಿನಲ್ಲಿ ಗೋವಾ ಮದ್ಯ!
NAMMUR EXPRESS NEWS
ಬಂಟ್ವಾಳ: ಜಮೀನಿಗೆ ನುಗ್ಗಿ ಅಡಿಕೆ ಕದ್ದ ಇಬ್ಬರು ಕಳ್ಳರನ್ನು ಹಿಡಿದು ವಿಚಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಣಿನಾಲ್ಕೂರು ಗ್ರಾಮದ ಹಂಡೀರಿನಲ್ಲಿ ನಡೆದಿದೆ ಎನ್ನಲಾಗಿದೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿಗಳು ಈ ಹಿಂದೆಯೂ ಹಲವು ಕಳ್ಳತನ ಮಾಡಿದ್ದಾನೆ ಎಂದು ಎಂದು ತಿಳಿದು ಬಂದಿದೆ. ಕಳೆದ ಕೆಲ ಸಮಯದಿಂದ ಇಬ್ಬರು ಆರೋಪಿಗಳು ಬೇರೆ ಬೇರೆ ಜಮೀನುಗಳಿಗೆ ನುಗ್ಗಿ ಅಡಿಕೆಯನ್ನ ಕಳ್ಳತನ ಮಾಡಲಾಗಿದೆ.ಈ ಕಳ್ಳತನ ಮುಂದುವರಿಸಿದ ಸಂದರ್ಭದಲ್ಲಿ ಕೃಷಿಕರ ಕೈಗೆ ಸಿಕ್ಕಿ ಬಿದ್ದು ಅವರನ್ನು ವಿಚಾರಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ
ಸೆ.10ರಂದು ಸ್ಟಾರ್ ಸುವರ್ಣದಲ್ಲಿ ಸರ್ಕಸ್ ತುಳು ಸಿನಿಮಾ
ಮಂಗಳೂರು: ತುಳುನಾಡಿನ ಪ್ರತಿಭಾವಂತ ನಟ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಅಭಿನಯದ ಸರ್ಕಸ್ ತುಳು ಸಿನಿಮಾ ಸಕ್ಸಸ್ ಆಗಿದೆ. ಎರಡು ತಿಂಗಳ ಹಿಂದೆ ರಿಲೀಸ್ ಆದ ಈ ಚಿತ್ರ ಇದೀಗ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಈ ಹಕ್ಕನ್ನು ಸ್ಟಾರ್ ಸುವರ್ಣ ಚಾನೆಲ್ ಚಿತ್ರ ಖರೀದಿಸಿದೆ. ಈ ಮೂಲಕ ತುಳು ಭಾಷೆಯ ಚಿತ್ರದ ಹಕ್ಕು ಖರೀದಿಸಿದ ಮೊದಲ ಚಾನೆಲ್ ಎಂಬ ಕೀರ್ತಿಗೆ ಪಾತ್ರವಾಗಿದೆ.ತುಳು ಸಿನಿಮಾವೊಂದು ಸ್ಯಾಟಲೈಟ್ ಚಾನೆಲ್ಗಳಲ್ಲಿ ಮೊದಲ ಬಾರಿಗೆ ತೆರೆ ಕಾಣುತ್ತಿದೆ.
ಮಂಗಳೂರಿಗೆ ನೂತನ ಖಡಕ್ ಡಿಸಿಪಿ
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಸಿದ್ದಾರ್ಥ ಗೋಯಲ್ ಬುಧವಾರ ಅಧಿಕಾರ ಸ್ವೀಕರಿಸಿದರು
ಪೊಲೀಸರ ಮೇಲೆ ಹಲ್ಲೆಗೈದ ಜಿಪಂ ಸದಸ್ಯ ಅಂದರ್!
ಕಾಸರಗೋಡು: ಪೊಲೀಸರ ಮೇಲೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.ಅಬ್ದುಲ್ ರಹಮಾನ್ ಮತ್ತು ಈತನ ಸಹಚರರು ಉಪ್ಪಳ ಪೇಟೆಯಲ್ಲಿ ಕಳೆದ ಭಾನುವಾರ ಮಧ್ಯರಾತ್ರಿ 12-30ರ ಸುಮಾರಿಗೆ ಗಸ್ತು ತಿರುಗುತ್ತಿದ್ದ ಮಂಜೇಶ್ವರ ಎಸ್ಎಐ ಅನೂಪ್ ಅವರಿಗೆ ಹಲ್ಲೆ ನಡೆಸಿದ್ದಾರೆ. ಅಬ್ದುಲ್ ರಹಮಾನ್ ಮತ್ತು ಆತನ ಸಹಚರರು ಗುಂಪಾಗಿ ಸೇರಿದ್ದನ್ನು ಚದುರಿಸಲು ಪೊಲೀಸರು ಬಂದಾಗ ಸಿಟ್ಟುಗೊಂಡ ಗ್ಯಾಂಗ್ ಪೊಲೀಸರ ಮೇಲೆ ಹಲ್ಲೆ ನಡೆಸಿದೆ. ಘಟನೆ ಸಂಬಂಧ ಪೊಲೀಸರು ಐವರ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಮೇಲಿನ ಹಿಂಸಾಚಾರದಲ್ಲಿ ಎಸ್ಐ ಹೊರತಾಗಿ ಓರ್ವ ಪೊಲೀಸ್ ಸಹ ಗಾಯಗೊಂಡಿದ್ದಾರೆ.
ಕೋಟ ಸಮುದ್ರ ಕಿನಾರೆಗೆ ಅಪ್ಪಳಿಸಿದ ಬೋಟ್!
ಕೋಟ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಮುಳುಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಸೆ.4 ರಂದು ರಾತ್ರಿ ಸುಮಾರು 8 ಗಂಟೆಗೆ ಕುಂದಾಪುರ ತಾಲೂಕಿನ ಕೊರಾಡಿ – ಕೊಮೆ ಸಮೀಪ ನಡೆದಿದೆ.ಉಪ್ಪಿನಕೋಟೆಯ ಪವನ್ ಬಂಗೇರ ಮಾಲಕತ್ವದ ಶ್ರೀ ಸಿಗಂದೂರೇಶ್ವರಿ ಹೆಸರಿನ ಬೋಟ್ ನಲ್ಲಿ ಐದು ಜನ ಮೀನುಗಾರರೊಂದಿಗೆ ಹಂಗಾರಕಟ್ಟೆ ದಕ್ಕೆಯಿಂದ ಹೊರಟು ಕೊರಾಡಿ – ಕೊಮೆ ಸಮೀಪ ರಾತ್ರಿ ಮೀನುಗಾರಿಕೆ ನಡೆಸುತ್ತಿರುವಾಗ ಬೋಟಿನ ಇಂಜಿನ್ ನಿಂತುಹೋದ ಕಾರಣ. ಗಾಳಿಯ ರಭಸಕ್ಕೆ ಮರಳು ದಿಬ್ಬಕ್ಕೆ ಬಡಿದು ಮುಳುಗಲಾರಂಭಿಸಿತು.ಅಕ್ಕಪಕ್ಕದ ಬೋಟ್ ಗಳು ಸಹಾಯಕ್ಕೆ ಬಂದರೂ ಕೂಡ ಪ್ರಯೋಜನವಾಗಲಿಲ್ಲ.
ತಕ್ಷಣ ಬೋಟಿನಲ್ಲಿದ್ದ ಐವರು ಮೀನುಗಾರರಾದ ಪವನ್ ಬಂಗೇರ(26), ಆಶಿಶ್ ಶ್ರೀಯಾನ್(27), ಶಾಹಿದ್ (27), ಮೋಹನ್ (32), ಭೋಜ (37) ಇವರು ಸ್ಥಳೀಯರ ಸಹಾಯದಿಂದ ಈಜಿ ದಡ ಸೇರುವಲ್ಲಿ ಯಶಸ್ವಿಯಾದರು. ಆದರೆ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳು ಹಾಗೂ ಮೀನುಗಾರಿಕೆ ಪರಿಕರಗಳು ಬೋಟಿನೊಂದಿಗೆ ಮುಳುಗಡೆಯಾಗಿದ್ದು ಸುಮಾರು ಅಂದಾಜು 23 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತಗೊಂಡ ಕಾರಿನಲ್ಲಿ ಗೋವಾ ಮದ್ಯ
ಅಂಕೋಲಾ: ರಸ್ತೆಯಲ್ಲಿ ಅಫಘಾತಗೊಂಡ ಕಾರೊಂದರಲ್ಲಿ ಲಕ್ಷಾಂತರ ರೂಪಾಯಿಯ ಅಕ್ರಮ ಗೋವಾ ಸರಾಯಿ ಪತ್ತೆಯಾದ ಘಟನೆ ಮಂಗಳವಾರ ತಡರಾತ್ರಿ ಸುಂಕಸಾಳದ ಕೋಟೆಪಾಲ ಕ್ರಾಸ್ ಬಳಿ ನಡೆದಿದೆ. ಕಾರಿನಲ್ಲಿ 1.33 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಸರಾಯಿ ಪತ್ತೆಯಾಗಿದ್ದು, ಕಾರು ಚಾಲಕ ಹಾಗೂ ಮಾಲಕ ನಾಪತ್ತೆಯಾಗಿದ್ದಾರೆ.