ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ!
– ಮಂಗಳೂರಿನ ಬೋಳಿಯಾರಿನಲ್ಲಿ ಬಿಜೆಪಿ ವಿಜಯೋತ್ಸವ ವೇಳೆ ಘಟನೆ
– ಅನ್ಯಕೋಮಿನ ತಂಡದಿಂದ ಕೃತ್ಯ: ಪೊಲೀಸ್ ಬಂದೋಬಸ್ತ್
NAMMUR EXPRESS NEWS
ಮುಡಿಪು: ಮೋದಿ ಪ್ರಮಾಣ ವಚನ ಹಾಗೂ ನೂತನಸಂಸದರಾಗಿ ಆಯ್ಕೆಗೊಂಡ ಬ್ರಿಜೇಶ್ ಚೌಟ ಅವರ ವಿಜಯೋತ್ಸವ ರ್ಯಾಲಿ ಭಾಗವಹಿಸಿ ವಾಪಾಸ್ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಅನ್ಯಕೋಮಿನ ತಂಡವು ಚೂರಿಯಿಂದ ಇರಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಇನೋಳಿ ಧರ್ಮನಗರ ನಿವಾಸಿ ಹರೀಶ್ (35) ಹಾಗೂ ಅವರ ಭಾವ ವಿನೋದ್ (40) ಎಂಬವರ ಮೇಲೆ ಚೂರಿಯಿಂದ ಇರಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.
ಗಾಯಾಳು ಹರೀಶ್ ಮತ್ತು ವಿನೋದ್ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು
ಬೋಳಿಯಾರು ಬಿಜೆಪಿ ಗ್ರಾಮಸಮಿತಿ ವತಿಯಿಂದ ಬೋಳಿಯಾರಿನಿಂದ ಧರ್ಮನಗರದವರೆಗೆ ಸಂಸದರಾಗಿ ಆಯ್ಕೆಗೊಂಡ ಬ್ರಿಜೇಶ್ ಚೌಟ ಅವರ ವಿಜಯೋತ್ಸವ ರ್ಯಾಲಿ ಆಯೋಜಿಸಲಾಗಿತ್ತು. ನಂತರ ವಿಜಯೋತ್ಸವ ಮುಗಿಸಿ ಬೈಕಿನಲ್ಲಿ ಹರೀಶ್ , ವಿನೋದ್ ಸೇರಿ ಮೂವರು ಬೋಳಿಯಾರಿನತ್ತ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ತಂಡವೊಂದು ಹರೀಶ್ ಮತ್ತು ವಿನೋದ್ ಗೆ ಚೂರಿಯಿಂದ ಇರಿದಿದೆ. ಇನ್ನೋರ್ವನ ಮೇಲೆ ಹಲ್ಲೆಗೆ ಮುಂದಾದಾಗ ಎರಡು ತಂಡಗಳ ಮಧ್ಯೆ ಗಲಾಟೆ ನಡೆದಿದೆ. ತಕ್ಷಣ ಕೃತ್ಯ ಎಸಗಿದ ತಂಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಆಸ್ಪತ್ರೆಗೆ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದ್ದು ಬೋ ಳಿಯಾರ್ ನಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಘಟನಾ ಸ್ಥಳದ ಬಾರ್ ವೊಂದರ ಸಿಸಿಟಿವಿ ಡಿವಿಆರ್ ಬ್ಬ್ ಕೊಣಾಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ