ಕರಾವಳಿಯಲ್ಲಿ ಮಹಾ ಮಳೆಗೆ ಇಬ್ಬರು ಸಾವು!
– ಹೆಬ್ರಿ, ಬ್ರಹ್ಮಾವರದಲ್ಲಿ ನೀರಿಗೆ ಬಿದ್ದು ದುರ್ಮರಣ
– ಕಾರ್ಕಳದಲ್ಲಿ ಬಸ್, ಟಿಪ್ಪರ್ ನಡುವೆ ಆಕ್ಸಿಡೆಂಟ್
– ಶಿರಾಡಿ ಘಾಟಿಯಲ್ಲಿ ಭೂ ಕುಸಿತ ಆತಂಕ
NAMMUR EXPRESS NEWS
ಹೆಬ್ರಿ: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಇಬ್ಬರು ಸಾವನ್ನು ಕಂಡಿರುವ ಘಟನೆ ನಡೆದಿದೆ.
ಜು.23ರಂದು ಹೆಬ್ರಿ ತಾಲೂಕು ಶೇಡಿಮನೆ ಗ್ರಾಮದ ಬಡಬೈಲು ದರಕಾಸು ನಿವಾಸಿ ಕು. ರಚನಾ ಪ್ರಭಾಕರ ಶೆಟ್ಟಿ (ವಯಸ್ಸು 12 ವರ್ಷ) ಹರಿಯುತ್ತಿದ್ದ ಹೊಳೆಗೆ ಬಿದ್ದು ಮೃತಳಾಗಿದ್ದಾಳೆ. ಇನ್ನು ಕುಂದಾಪುರ ತಾಲೂಕಿನ ಹಳ್ಳಾಡಿ ಹರ್ಕಾಡಿ ಗ್ರಾಮದ ನಿವಾಸಿ ಗೋಕುಲದಾಸ್ ಪ್ರಭು (53 ವರ್ಷ) ಇವರು ಜು.24 ರಂದು ಬ್ರಹ್ಮಾವರ ತಾಲೂಕಿನ ಕರ್ಕುಂಜೆ ಗ್ರಾಮದ ನೀರಿನ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ. ಅವಳಿ ಜಿಲ್ಲೆಯಾದ್ಯಂತ ಸುರಿದ ಮಳೆಗೆ ಹಲವಾರು ಮನೆಗಳಿಗೆ ಹಾನಿಯಾಗಿರುವ ವರದಿಗಳಾಗಿವೆ. ಇನ್ನಷ್ಟೇ ಹಲವೆಡೆ ಹಾನಿ ವರದಿ ಬರಬೇಕಿದೆ.
ಕಾರ್ಕಳದಲ್ಲಿ ಬಸ್, ಟಿಪ್ಪರ್ ನಡುವೆ ಅಪಘಾತ
ಬಸ್ಸು ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಬಸ್ಸು ಚಾಲಕ ತೀವ್ರ ಸ್ವರೂಪದಲ್ಲಿ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ಬೈಲೂರು ಸಮೀಪದ ಜಾರ್ಕಳ ಬಸ್ರಿಶಾಲೆ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಉಡುಪಿಯಿಂದ ಕಾರ್ಕಳ ಕಡೆ ಬರುತ್ತಿದ್ದ ಖಾಸಗಿ ಬಸ್ಸೊಂದು ಕೆಎಸ್ ಆರ್ ಟಿ ಸಿ ಬಸ್ಸನ್ನು ಹಿಂತಿಕುವ ಭರದಲ್ಲಿ ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಚಲಾಯಿಸಿ ಬಂದು ಬಸ್ರಿಶಾಲಾ ತಿರುವಿನಲ್ಲಿ ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ. ಇನ್ನು ಅಪಘಾತದ ತೀವ್ರತೆಗೆ ಬಸ್ಸು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಪ್ರಯಾಣಿಕರು ಹಾಗೂ ಟಿಪ್ಪರ್ ಚಾಲಕ ಸಣ್ಣಪುಟ್ಟ ರೀತಿಯಲ್ಲಿ ಗಾಯಗೊಂಡಿದ್ದಾರೆ
ಶಿರಾಡಿಯಲ್ಲಿ ಭೂ ಕುಸಿತ ಆತಂಕ
ಪಶ್ಚಿಮ ಘಟ್ಟದ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಭಾರಿ ಕುಸಿತ ಆತಂಕ ಸೃಷ್ಟಿಸಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ.
ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ರಸ್ತೆಬದಿಯ ಗುಡ್ಡಗಳು ಕುಸಿತವಾಗುತ್ತಿದ್ದು, ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ ಅಗತ್ಯ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023