ನದಿಯಲ್ಲಿ ಸ್ನಾನಕ್ಕಿಳಿದ ಯುವಕರಿಬ್ಬರು ನೀರುಪಾಲು!
– ಹೆಬ್ರಿ ಸಮೀಪದ ಮತ್ತಾವು ಎಂಬಲ್ಲಿ ದುರಂತ
-ಕೋಟದಲ್ಲಿ ಆಕಸ್ಮಿಕ ಕಾಲು ಜಾರಿ ಹೊಳೆಗೆ ಬಿದ್ದು ಯುವಕ ಸಾವು
NAMMUR EXPRESS NEWS – ಹೆಬ್ರಿ: ನದಿಯಲ್ಲಿ ಸ್ನಾನ ಮಾಡುತ್ತಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಮತ್ತಾವು ಎಂಬಲ್ಲಿ ನಡೆದಿದೆ. ಕರ್ಜೆ ನಿವಾಸಿ ಉಮೇಶ್ ಶೆಟ್ಟಿ (48) ಹಾಗೂ ಚಾರಾ ಹುರ್ತುಕೆ ನಿವಾಸಿ ಪ್ರಸ್ತುತ್ ಹೆಗ್ಡೆ(21) ಮೃತ ದುರ್ದೈವಿ. ಇವರಿಬ್ಬರು ನದಿಗೆ ಸ್ನಾನಕ್ಕೆಂದು ಹೆಬ್ರಿ ಸಮೀಪದ ಮುತ್ತಾವು ಎಂಬಲ್ಲಿಗೆ ತೆರಳಿದ್ದರು.ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಮನೆಯವರು ಮೊಬೈಲ್ ಫೋನ್ ಗೆ ಕರೆ ಮಾಡಿದ್ದಾರೆ. ಆದರೆ, ಇಬ್ಬರೂ ಕೂಡ ಕರೆ ಸ್ವೀಕರಿಸದ ಕಾರಣ ಹೆಬ್ರಿ ಪೊಲೀಸರ ಸಹಾಯದಿಂದ ಲೊಕೇಶನ್ ಪತ್ತೆ ಹಚ್ಚಿ ಹುಡುಕಾಟ ನಡೆಸಿದಾಗ ಇಬ್ಬರ ಮೃತ ದೇಹ ನದಿಯಲ್ಲಿ ಪತ್ತೆಯಾಗಿದೆ.ಮೃತ ಪ್ರಸ್ತುತ್ ಹೆಗ್ಡೆ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಕಾಲು ಜಾರಿ ಹೊಳೆಗೆ ಬಿದ್ದು ಯುವಕ ಮೃತ್ಯು
ಕೋಟ: ಬೇಳೂರು ಕೋಣಬಗೆ ರೈಲ್ವೆ ಹಳಿ ಸಮೀಪ ಐರುಗುಂಡೆ ಬಳಿಯ ಹಿರೇ ಹೊಳೆಯಲ್ಲಿ ಕೈ ತೊಳೆಯಲು ಹೋದ ಯುವಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಸ್ನೇಹಿತರೊಂದಿಗೆ ತೋಟದಲ್ಲಿ ಕೆಲಸ ಮಾಡಿ ಕೈ ಕಾಲು ತೊಳೆಯಲೆಂದು ಹೊಳೆಗೆ ಹೋದ ಸಂದರ್ಭ ಕಾಲು ಜಾರಿ ಬಿದ್ದು ಈ ಘಟನೆ ನಡೆದಿದೆ ಎನ್ನಲಾಗಿದೆ.ಸ್ನೇಹಿತರೊಂದಿಗೆ ತೋಟದಲ್ಲಿ ಕೆಲಸ ಮಾಡಿ ಕೈ ಕಾಲು ತೊಳೆಯಲೆಂದು ಹೊಳೆಗೆ ಹೋದ ಸಂದರ್ಭ ಕಾಲು ಜಾರಿ ಬಿದ್ದು ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತಪಟ್ಟ ದುರ್ದೈವಿ ಉಗ್ರಾಣಿ ಬೆಟ್ಟು ಪ್ರಶಾಂತ್ ಆಚಾರ್ಯ (22) ಎಂದು ತಿಳಿದು ಬಂದಿದೆ.