ಕರಾವಳಿ ಟಾಪ್ 3 ನ್ಯೂಸ್
* ಉಡುಪಿ :ರಸ್ತೆ ಬದಿ ಅಂಗಡಿಯಲ್ಲಿ ಇ ಸಿಗರೇಟ್ ಮಾರಾಟ!
* ಮಂಗಳೂರು: ಎರಡೂವರೆ ವರ್ಷದ ಮಗು ಅಪಹರಣ!
* ಉಡುಪಿ,ದಕ್ಷಿಣ ಕನ್ನಡ ಶಾಲೆಗಳಲ್ಲಿ ಈ ಭಾರಿ ಶೂನ್ಯ ದಾಖಲಾತಿ
NAMMUR EXPRESS NEWS
ಉಡುಪಿ: ಇ ಸಿಗರೇಟ್ ಮಾರಾಟಕ್ಕೆ ನಿಷೇಧವಿದ್ದರೂ ಮಣಿಪಾಲ ಭಾಗದಲ್ಲಿ ಮತ್ತೆ ಇ ಸಿಗರೇಟ್ ಹಾವಳಿ ಕಂಡು ಬರುತ್ತಿದೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯ ಬದಿ ಇರುವ ಅಂಗಡಿಯಲ್ಲಿ ಇ ಸಿಗರೇಟ್ ಮಾರಾಟ ಮಾಡುತ್ತಿದ್ದ ಕಾಸರಗೋಡು ಮೂಲದ ಮೊಹಮ್ಮದ್ ಉನೈಶ್(25)ಹಾಗೂ ಸಾವಿರಾರು ರೂ.ಮೌಲ್ಯದ ಇ ಸಿಗರೇಟ್ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಇನ್ನೊಬ್ಬನೊಂದಿಗೆ ಸೇರಿಕೊಂಡು ಈ ವ್ಯವಹಾರ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಇ ಸಿಗರೇಟ್ಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮುಂಬಯಿಯಿಂದ ವಸ್ತುಗಳನ್ನು ಖರೀದಿಸುತ್ತಿದ್ದರು. ಕೂಲ್ ಡ್ಿಂ್ಸ್, ಪಫ್ಯೂರ್ಮ್, ಲೈಟರ್ಗಳಂತಹ ವಸ್ತುಗಳನ್ನು ಮುಂಬಯಿಯಿಂದ ಬಸ್ ಹಾಗೂ ರೈಲು ಮಾರ್ಗದ ಮೂಲಕ ಸುಲಭದಲ್ಲಿ ಉಡುಪಿ ಜಿಲ್ಲೆಗೆ ತಂದು ಇಲ್ಲಿ ಮಾರಾಟ ಮಾಡುತ್ತಿರುವ ಅಂಶವೂ ಬೆಳಕಿಗೆ ಬಂದಿದೆ.
* ಏನಿದು ಇ ಸಿಗರೇಟ್?
ಇ ಸಿಗರೇಟ್ ವೇಪ್ಸ್, ವೇಪ್ ಪೆನ್, ಹುಕ್ಕ ಪೆನ್, ಇ ಸಿಗಾರ್, ಇ ಪೈಪ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಈ ಸಾಧನಗಳು ಇ ದ್ರವವನ್ನು ಉಪಯೋಗ ಮಾಡಿಕೊಂಡು ಪ್ರಚೋದನೆಯನ್ನು ಉಂಟುಮಾಡುತ್ತದೆ. ತಂಬಾಕುವಿನಿಂದ ಉತ್ಪತ್ತಿಯಾಗುವ ನಿಕೋಟಿನ್ ಅಂಶ, ಪ್ರೊಪಿಲೀನ್, ಗ್ಲೈಕಾಲ್, ಗ್ಲಿಸರೀನ್, ಪರಿಮಳ ಸೂಸುವ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ.
* ಉಡುಪಿ,ದಕ್ಷಿಣ ಕನ್ನಡ ಶಾಲೆಗಳಲ್ಲಿ ಈ ಭಾರಿ ಶೂನ್ಯ ದಾಖಲಾತಿ!!
ಮಂಗಳೂರು: ಎರಡು ವರ್ಷದ ಹಿಂದೆ 98 ಶಾಲೆಗಳು ಉಡುಪಿ, ದಕ್ಷಿಣ ಕನ್ನಡದಲ್ಲಿ ಮುಚ್ಚಿದ್ದರೆ, ಈ ವರ್ಷ 20 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ. ಫಲಿತಾಂಶದಲ್ಲಿ ಸದಾ ಮುಂಚೂಣಿಯಲ್ಲಿರುವ ಈ ಎರಡು ಜಿಲ್ಲೆಗಳ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಸ್ಥಿತಿಯೇ ಈ ರೀತಿಯಾದರೆ, ಇತರ ಜಿಲ್ಲೆಗಳ ಕಲ್ಪನೆಯೂ ಭೀತಿ ಹುಟ್ಟಿಸುತ್ತದೆ. ವಿದ್ಯಾರ್ಥಿಗಳ ಕೊರತೆ ನಿರಾಸಾದಾಯಕವಾಗಿದ್ದು, ಇನ್ನೊಂದೆಡೆ ಕಾಯಂ ಶೀಕ್ಷಕರ ಕೊರತೆಯೂ ಎದ್ದು ಕಾಣುತ್ತಿದೆ.
ಈ ಶೈಕ್ಷಣಿಕ ವರ್ಷದಲ್ಲಿ ಅವಿಭಜಿತ ಕರಾವಳಿ ಜಿಲ್ಲೆಯಲ್ಲಿ ಒಟ್ಟು 20 ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14, ಉಡುಪಿ ಜಿಲ್ಲೆಯಲ್ಲಿ 16 ಶಾಲೆಗಳಲ್ಲಿ ದಾಖಲಾತಿಯಲ್ಲಿ ಶೂನ್ಯ ಕಾಣಿಸಿಕೊಂಡಿದೆ.
ಎರಡು ಸುಳ್ಯ ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ಎರಡು ಪ್ರೌಢಶಾಲೆ, ನಾಲ್ಕು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಮೂರು ಪ್ರೌಢಶಾಲೆ, ಎರಡು ಹಿರಿಯ ಪ್ರಾಥಮಿಕ ಹಾಗೂ ಒಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಒಳಗೊಂಡಿದೆ.
ಇವುಗಳಲ್ಲಿ ಒಟ್ಟು ಏಳು ಮಂಗಳೂರು ಉತ್ತರ ವಲಯದಲ್ಲಿದೆ. ಉಳಿದಂತೆ ಮಂಗಳೂರು ದಕ್ಷಿಣ ವಲಯದಲ್ಲಿ ಮೂರು, ಬಂಟ್ವಾಳ ವಲಯದಲ್ಲಿ ರು ಹಾಗೂ ಮೂಡುಬಿದಿರೆ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ತಲಾ ಒಂದು ಇವೆ. ಉಡುಪಿ ಜಿಲ್ಲೆಯಲ್ಲಿ 6 ಸರಕಾರಿ, ಒಂದು ಖಾಸಗಿ ಹಾಗೂ ಒಂಬತ್ತು ಅನುದಾನಿತ ಶಾಲೆಗಳಲ್ಲಿ ಈ ಬಾರಿ ಶೂನ್ಯ ದಾಖಲಾತಿ ದಾಖಲಾಗಿದೆ.
* ಮಂಗಳೂರು: ಎರಡೂವರೆ ವರ್ಷದ ಮಗು ಅಪಹರಣ!!
ಮಂಗಳೂರು: ಮನೆಯ ಹೊರಗಡೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಹೆಣ್ಣು ಮಗು ಅಪಹರಣವಾದ ಘಟನೆ ಕಂಕನಾಡಿ ಠಾಣಾ ವ್ಯಾಪ್ತಿಯ ಅಳಪೆ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಆ. 31 ರಂದು ನಡೆದಿದೆ.
ಅಳಪೆ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸಗಾರರ ಮಗು ಕಾಣೆಯಾಗಿದೆ. ಎಲ್ಲಾ ಕಡೆ ಹುಡುಕಾಡಿ ಮಗುವಿನ ಸುಳಿವು ಸಿಗದ ಸಂದರ್ಭದಲ್ಲಿ ಹೆತ್ತವರು ಕಂಕನಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿದ ಪೊಲೀಸರು ತತ್ ಕ್ಷಣವೇ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಂಕನಾಡಿ ರೈಲ್ವೆ ಜಂಕ್ಷನ್ ನ ಸಿಸಿಟಿವಿಯಲ್ಲಿ ಮಗುವೊಂದನ್ನು ವೃದ್ಧನೊಬ್ಬ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಆ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಕೇರಳ ಕಡೆಗೆ ಹೋಗುತ್ತಿದ್ದ ರೈಲಿನ ಬಗ್ಗೆ ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾಸರಗೋಡು ರೈಲ್ವೆ ಪೊಲೀಸರು ಮಗು ಹಾಗೂ ವೃದ್ಧನನ್ನು ಸೆರೆ ಹಿಡಿದಿದ್ದು, ನಂತರ ಕಂಕನಾಡಿಯ ಪಿ.ಎಸ್.ಐ.ಶಿವಕುಮಾರ್ ಮತ್ತು ಸಿಬ್ಬಂದಿಗಳ ತಂಡ ರಾತ್ರಿ ಕಾಸರಗೋಡು ರೈಲ್ವೆ ಪೊಲೀಸರಿಂದ ಮಗೂ ಹಾಗೂ ವೃದ್ಧನನ್ನು ವಶಕ್ಕೆ ಪಡೆದು, ಮಗುವನ್ನು ಆ ಕೂಡಲೇ ಹೆತ್ತವರಿಗೆ ಒಪ್ಪಿಸಲಾಗಿದೆ.