ಕರಾವಳಿ ಟಾಪ್ 3 ನ್ಯೂಸ್!
* ಉಲ್ಲಾಳ: ಪೊಲೀಸ್ ಸಿಬ್ಬಂದಿಯ ಕೊಲೆಗೆ ಯತ್ನ!
* ಉಡುಪಿ: ಅತ್ತೆ, ಮಾವ,ಅತ್ತಿಗೆಯಿಂದ ವರದಕ್ಷಿಣೆ ಕಿರುಕುಳ!!
* ಪುತ್ತೂರು: ರಸ್ತೆ ಕಂಡ ಕಂಡಲ್ಲಿ ಹೊಂಡ, ಸಂಚಾರಕ್ಕೆ ಪರದಾಡುವ ಸ್ಥಿತಿ
NAMMUR EXPRESS NEWS
* ಉಳ್ಳಾಲ ಪೊಲೀಸ್ ಠಾಣೆ ಪೊಲೀಸ್ ಸಿಬ್ಬಂದಿಯ ಕೊಲೆಗೆ ಯತ್ನ!
ಮಂಗಳೂರು: ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲು ಮತ್ತು ತಲಾ 16 ಸಾವಿರ ರೂ. ದಂಡ ವಿಧಿಸಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಉಳ್ಳಾಲ ನಿವಾಸಿಗಳಾದ ಒಂದನೇ ಆರೋಪಿ ಮುಸ್ತಾಕ್ (32) ಮತ್ತು ನಾಲ್ಕನೇ ಆರೋಪಿ ಜಾಕೀರ್ (36) ಶಿಕ್ಷೆಗೊಳಗಾಗಿದ್ದಾರೆ.ಎರಡನೇ ಆರೋಪಿ ಯಾಸೀನ್ ಮತ್ತು ಮೂರನೇ ಆರೋಪಿ ಅಶ್ರಫ್ ಸಮೋಸ (50) ಇವರು ತಲೆಮರೆಸಿಕೊಂಡಿದ್ದಾರೆ.
* ಅತ್ತೆ, ಮಾವ,ಅತ್ತಿಗೆಯಿಂದ ವರದಕ್ಷಿಣೆ ಕಿರುಕುಳ!!
ಉಡುಪಿ: ಬೈಂದೂರಿನ ಯಡ್ತರೆ ಗ್ರಾಮದ ಜೀವನ (33) ಎಂಬಾಕೆ 2018ರಲ್ಲಿ ಯೋಗೇಂದ್ರ ಕುಮಾರ್ ಬರ ಜೊೆ ವಿವಾಹವಾಗಿದ್ದು, ದಂಪತಿಗೆ ಹೆಣ್ಣು ಮಗು ಜನಿಸಿದ್ದ ಕಾರಣ ಅತ್ತಿಗೆ, ಅತ್ತೆ ವರದಕ್ಷಿಣೆ ಕಿರುಕುಳ ನೀಡಿರುವ ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.
ಜೀವನ, ಯೋಗೇಂದ್ರ ಕುಮಾರ್ ದಂಪತಿಗೆ 2021ರಲ್ಲಿ ಹೆಣ್ಣು ಮಗು ಜನಿಸಿತ್ತು. ಬಳಿಕ ಅತ್ತಿಗೆಗೆ ಗಂಡು ಮಗುವಾಗಿತ್ತು. ಇದರ ಪರಿಣಾಮ ಅತ್ತೆ ನಿರ್ಮಲಾ ಮಂಜುನಾಥ್, ಅತ್ತಿಗೆ ಪೂಜಾ ಜೀವನಳಿಗೆ ಕಿರುಕುಳ ನೀಡಲು ಆರಂಭಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿತರು ಎಲ್ಲಾ ಸೇರಿ ಜೀವನಳಿಗೆ ಹಿಯಾಳಿಸಿ ಮನೆಯಿಂದ ವರದಕ್ಷಿಣೆ ಹಣ ಮತ್ತು ಚಿನ್ನಾಭರಣ ತರುವಂತೆ ಕಿರುಕುಳ ನೀಡಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ರಸ್ತೆ ಕಂಡ ಕಂಡಲ್ಲಿ ಹೊಂಡ, ಸಂಚಾರಕ್ಕೆ ಪರದಾಡುವ ಸ್ಥಿತಿ
ಪುತ್ತೂರು: ಜಿಲ್ಲಾ ಕೇಂದ್ರ ಸ್ಥಾನವಾಗುವ ನಿರೀಕ್ಷೆಯಲ್ಲಿರುವ ಪುತ್ತೂರು ನಗರದ ಮುಖ್ಯ ರಸ್ತೆಯು ಹದಗೆಟ್ಟಿದ್ದು, ಸಂಚಾರದ ಸ್ಥಿತಿ ಮಾತ್ರ ಶೋಚನಿಯವಾಗಿದೆ.
ಬೊಳುವಾರಿನಿಂದ ದರ್ಬೆ ತನಕ ಮುಖ್ಯ ರಸ್ತೆಯ ಅಲ್ಲಲ್ಲಿ ಹೊಂಡ ಸೃಷ್ಟಿಯಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ದರ್ಬೆ ಸರ್ಕಲ್, ಕಲ್ಲಾರೆ, ಗಾಂಧಿಕಟ್ಟೆ, ಅಂಚೆ ಕಚೇರಿ ಮುಂಭಾಗ, ಹಳೆ ಮಯೂರ ಥಿಯೇಟರ್ ಬಳಿ, ಬೊಳುವಾರು ಸರ್ಕಲ್ ಬಳಿ ರಸ್ತೆ ತುಂಬ ಹೊಂಡ ತುಂಬಿ ಬಹಳ ದಿನಗಳಾದವು. ತಾತ್ಕಾಲಿಕ ದುರಸ್ತಿ ನಡೆಸಿರುವ ಸ್ಥಳಗಳಲ್ಲಿ ಅವು ಎದ್ದು ಹೋಗಿ ಮತ್ತಷ್ಟು ಹೊಂಡ ಸೃಷ್ಟಿಯಾಗಿದೆ.
ಮುಖ್ಯ ರಸ್ತೆಯಿಂದ ಕವಲೊಡೆದು ಹೋಗಿರುವ ಹತ್ತಾರು ಸಂಪರ್ಕ ರಸ್ತೆಗಳಲ್ಲೂ ಹೊಂಡಗಳೇ ರಸ್ತೆಯ ತುಂಬ ಚದುರಿಕೊಂಡಿದೆ. ಕೆಲವು ತಿಂಗಳ ಹಿಂದೆ ಹೊಸದಾಗಿ ಡಾಮರು ಹಾಸುವ ಕಾಮಗಾರಿ ನಡೆಸಿದ್ದು ಅದು ಅರ್ಧದಲ್ಲೇ ಬಾಕಿಯಾದ ಕಾರಣ ಜಲ್ಲಿ ಎದ್ದು ಸಂಚಾರವೇ ದುಸ್ತರ ಎನಿಸಿದೆ.