ವರ್ಡ್ ಕ್ಯಾಂಪ್ ಏಷ್ಯಾ ಸಮ್ಮೇಳನಕ್ಕೆ ಕುಂದಾಪುರದ ಟೆಕ್ಕಿ!
– ಫೋರ್ಥ್ ಫೋಕಸ್ ಸಂಸ್ಥೆ ಸಂಸ್ಥಾಪಕ ಗೌತಮ್ ನಾವಡಾ ಭಾಗಿ
– ತೈವಾನಲ್ಲಿ ಮಾ.7 ರಿಂದ 9ರವರೆಗೆ ಸಮ್ಮೇಳನ
NAMMUR EXPRESS NEWS
ಮಂಗಳೂರು: ವರ್ಡ್ ಪ್ರೆಸ್ ಕಮ್ಯುನಿಟಿ ಆಯೋಜಿಸುತ್ತಿರುವ ವರ್ಡ್ ಕ್ಯಾಂಪ್ ಏಷ್ಯಾ 2024 ಸಮಾರಂಭವು ತೈವಾನ್ ನಲ್ಲಿ ಮಾರ್ಚ್ 7 ರಿಂದ 9ರ ವರೆಗೆ ನಡೆಯುತ್ತಿದ್ದು, ಕರಾವಳಿಯ ವಿ. ಗೌತಮ್ ನಾವಡಾ ಭಾಗವಹಿಸಲಿದ್ದಾರೆ. ಫೋರ್ಥ್ ಫೋಕಸ್ ಎಂಬ ಸಂಸ್ಥೆಯ ಸಂಸ್ಥಾಪಕರು, ಮತ್ತು ಸಿಇಒ ಆದ ಗೌತಮ್ ನಾವಡಾ ( V Gautham Navada ) ಈ ಸಂಸ್ಥೆಯನ್ನು 2012 ರಲ್ಲಿ ಫ್ರೀಲ್ಯಾನ್ಸ್ ಪ್ರಾಜೆಕ್ಟ್ ಆಗಿ ಆರಂಭಿಸಿ 2015 ರಿಂದ ಫುಲ್ ಟೈಮ್ ಸೇವೆಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಫೋರ್ಥ್ ಫೋಕಸ್ ಎಂಬ ಸಂಸ್ಥೆಯು ವೆಬ್ ಸಲ್ಯೂಷನ್ ಸಂಸ್ಥೆಯಾಗಿದ್ದು, ವೆಬ್ ಮತ್ತು ಡಿಜಿಟಲ್ ಸಲ್ಯೂಷನ್ ಸರ್ವೀಸ್ ಒದಗಿಸುತ್ತಾ ಬಂದಿದೆ. ನಾವೀನ್ಯತೆ, ಸೃಜನಶೀಲತೆ ಹಾಗು ಬದ್ಧತೆಯ ಜೊತೆಗೆ ಪರಿಣಿತ ತಜ್ಞರ ತಂಡವು, ವ್ಯಕ್ತಿಗಳ ಹಾಗು ವ್ಯವಹಾರದ ಅಗತ್ಯಗಳಿಗೆ ಅನುಗುಣವಾಗಿ ಅತ್ಯಾಧುನಿಕ ವೆಬ್ ಸಲ್ಯೂಷನ್ ನೀಡುವುದರಲ್ಲಿ ಯಶಸ್ವಿಯಾಗಿದೆ.
ವಿಶ್ವ ಮಟ್ಟದ ಸಮ್ಮೇಳನ
ವರ್ಡ್ ಕ್ಯಾಂಪ್ ಏಷ್ಯಾ 2024, ವಿಶ್ವದ 3 ಪ್ರಮುಖ ವರ್ಡ್ಕ್ಯಾಂಪ್ಗಳಲ್ಲಿ ಒಂದಾಗಿದ್ದು, ವರ್ಡ್ಪ್ರೆಸ್ ಕಮ್ಯುನಿಟಿ ಈ ಕಾರ್ಯಕ್ರಮದ ರೂವಾರಿಯಾಗಿದೆ. 2006 ರಿಂದ, ವರ್ಡ್ ಪ್ರೆಸ್ ಸಮುದಾಯದ ಸದಸ್ಯರು 382 ನಗರಗಳು, 65 ದೇಶಗಳು ಮತ್ತು 6 ಖಂಡಗಳಲ್ಲಿ ಒಟ್ಟು 1,145 ವರ್ಡ್ಕ್ಯಾಂಪ್ಗಳನ್ನು ಆಯೋಜಿಸಿದ್ದಾರೆ. ವರ್ಡ್ ಪ್ರೆಸ್ ಆಯೋಜನೆಯು ಇತ್ತೀಚಿನ ತಂತ್ರಜ್ಞಾನಗಳನ್ನು ಕಲಿಯಲು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಅವಕಾಶಗಳನ್ನು ಒದಗಿಸುವುದರ ಜೊತೆಗೆ, ಈ ಇವೆಂಟ್, ಭಾಗವಹಿಸುವವರಿಗೆ ದೀರ್ಘಕಾಲೀನ ನೆಟ್ವರ್ಕ್ಗಳನ್ನು ಸ್ಥಾಪಿಸಲು ಮತ್ತು ವ್ಯಾಪಾರದ ಅವಕಾಶಗಳನ್ನು ಹುಡುಕಿ, ವಿಸ್ತರಿಸಿಕೊಳ್ಳಲು ಅನುವು ಮಾಡಿಕೊಡುವ ಉತ್ತಮ ವೇದಿಕೆಯಾಗಿದೆ. ಕುಂದಾಪುರದ ಫೋರ್ಥ್ ಫೋಕಸ್ ಈ ಇವೆಂಟ್ ನಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
Website : forthfocus.com